Nepal Crisis: ಸಾಮಾಜಿಕ ಜಾಲತಾಣಗಳ ನಿಷೇಧದ ನಂತರ, ನೇಪಾಳದಲ್ಲಿ ಆಗುತ್ತಿರುವಂತ ಬಿಕ್ಕಟ್ಟಿನ ಬಗ್ಗೆ ಭಾರತ ತೀವ್ರ ವ್ಯಕ್ತಪಡಿಸಿದ್ದು, ಎಲ್ಲಾ ಪಕ್ಷಗಳು ಒಟ್ಟಾರೆಯಾಗಿ ಯೋಚಿಸಿ ಭಿನ್ನಾಭಿಪ್ರಾಯಗಳನ್ನು ಶಾಂತಿಯುತವಾಗಿ ಪರಿಹರಿಸಿಕೊಳ್ಳುವಂತೆ ವಿದೇಶಾಂಗ ಸಚಿವಾಲಯ ಮಂಗಳವಾರ (ಸೆಪ್ಟೆಂಬರ್ 09) ಒತ್ತಾಯಿಸಿದೆ.
ಈ ವೇಳೆ, ನಿನ್ನೆಯಿಂದ ನೇಪಾಳದಲ್ಲಿ ಆಗುತ್ತಿರುವಂತ ಬೆಳವಣಿಗೆಗಳನ್ನು ನಾವು ಸೂಕ್ಷವಾಗಿ ನೋಡಿದ್ದೇವೆ. ಇನ್ನು ಅಲ್ಲಿ ಆಗಿರುವ ಸಾವು ನೋವುಗಳಿಂದ ದುಃಖಿತರಾಗಿದ್ದೇವೆ. ನಮ್ಮ ಆಲೋಚನೆಗಳು ದುಃಖಿತ ಕುಟುಂಬಗಳ ಕಡೆ ಇದೆ. ಹಾಗೂ ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ಸಚಿವಾಲಯ ತಿಳಿಸಿದೆ.
ಇದನ್ನೂ ಓದಿ: ಕುಡಿದು ವಾಹನ ಚಲಾಯಿಸಿದ ಪ್ರಕರಣದಲ್ಲಿ ಮೊಟ್ಟ ಮೊದಲು ಬಂಧನವಾಗಿದ್ದ ವ್ಯಕ್ತಿ ಯಾರು ಗೊತ್ತಾ?..Drunk and drive
ಶಾಂತಿಯುತ ವಿಧಾನಗಳು ಹಾಗೂ ಸಂವಾದದ ಮೂಲಕ ನಡೆಯುತ್ತಿರುವಂತಹ ಸಮಸ್ಯೆಗಳನ್ನು ಪರಿಹರಿಸಲು ಎಲ್ಲಾ ಪಾಲುದಾರರಿಗೆ MEA ಕರೆ ನೀಡಿದೆ. ಇನ್ನು ಪರಿಸ್ಥಿತಿ ಶಾಂತವಾಗುವವರೆಗೂ ನೇಪಾಳ ಪ್ರಯಾಣವನ್ನು ಮುಂದೂಡುವಂತೆ ಭಾರತೀಯ ನಾಗರಿಕರಲ್ಲಿ ಮನವಿ ಮಾಡಿದೆ. ಹಾಗೇ ಪ್ರಸ್ತುತ ನೇಪಾಳದಲ್ಲಿರುವ ಭಾರತೀಯ ಪ್ರಜೆಗಳು ಎಚ್ಚರಿಕೆಯಿಂದ ಇದ್ದು, ಸ್ಥಳಿಯ ಅಧಿಕಾರಿಗಳ ಸೂಚನೆಯನ್ನು ಅನುಸರಿಸಬೇಕೆಂದು ತಿಳಿಸಿದೆ.
ಇದನ್ನೂ ಓದಿ: ನೇಪಾಳದಲ್ಲಿ ಹಿಂಸಾಚಾರ; ಹಾಲಿ ಕೆ.ಪಿ.ಓಲಿ ಸರ್ಕಾರ ಪತನ; ಆಡಳಿತ ವಹಿಸಿಕೊಂಡ ಸೇನೆ | Army Takes Charge
ನೇಪಾಳದಲ್ಲಾಗುತ್ತಿರುವ ಹಿಂಸಾಚಾರವು ವಿಮಾನದ ಮೇಲೆ ತಕ್ಷಣದ ಪರಿಣಾಮ ಬೀರುತ್ತಿದೆ. ದೆಹಲಿ ಹಾಗೂ ಕಠ್ಮಂಡು ನಡುವಿನ ವಿಮಾನಗಳಾದ ಏರ್ ಇಂಡಿಯಾ, ಇಂಡಿಗೋ, ನೇಪಾಳ ಏರ್ಲೈನ್ಸ್ ಮತ್ತು ಸ್ಪೈಸ್ ಜೆಟ್ ರದ್ದುಗೊಳಿಸಿವೆ. ವಾಯುಯಾನ ವಿಶ್ಲೇಷಣಾ ಸಂಸ್ಥೆ ಸಿರಿಯಮ್ ಪ್ರಕಾರ, ಭಾರತ ಮತ್ತು ಕಠ್ಮಂಡು ನಡುವೆ ಈ ತಿಂಗಳು 208 ವಿಮಾನಗಳು ನಿಗದಿಯಾಗಿದ್ದವು. ಇದರಲ್ಲಿ ಏರ್ ಇಂಡಿಯಾ 84 ಮತ್ತು ಇಂಡಿಗೋ 50 ವಿಮಾನಗಳು ಇವೆ. ಪ್ರಯಾಣಿಕರ ಸುರಕ್ಷತೆಯನ್ನು ಉಲ್ಲೇಖಿಸಿ, ಏರ್ ಇಂಡಿಯಾ ತನ್ನ ಸೇವೆಯನ್ನು ಮಂಗಳವಾರ ರದ್ದುಗೊಳಿಸುವುದಾಗಿ ಘೋಷಿಸಿದೆ. ನಾವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಹಾಗೂ ಹೆಚ್ಚಿನ ನವೀಕರಣಗಳನ್ನು ಹಂಚಿಕೊಳ್ಳುತ್ತೇವೆ ಎಂದು ವಕ್ತಾರರು ತಿಳಿಸಿದ್ದಾರೆ. (ಏಜೆನ್ಸೀಸ್)