ಕಠ್ಮಂಡು: ಕೊವಿಡ್-19 ಸೋಂಕಿಗೆ ಒಳಗಾಗಿರುವ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರ ಆರೋಗ್ಯಕ್ಕಾಗಿ ಅವರ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ಕೋಲ್ಕತ್ತದಲ್ಲಿ ಹವನವನ್ನೂ ಮಾಡುತ್ತಿದ್ದಾರೆ. ರಾಜಕೀಯ, ಕ್ರೀಡಾ ವಲಯಗಳಿಂದ ಗಣ್ಯರೂ ಕೂಡ ಬಿಗ್ ಬಿ ಆರೋಗ್ಯ ಬೇಗ ಸರಿಯಾಗಲಿ ಎಂದು ಹಾರೈಸುತ್ತಿದ್ದಾರೆ.
ಇದೀಗೆ ನೇಪಾಳ ಪ್ರಧಾನಮಂತ್ರಿ ಕೆ.ಪಿ.ಶರ್ಮಾ ಓಲಿ ಅವರು ಟ್ವೀಟ್ ಮಾಡಿ, ಅಮಿತಾಭ್ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್ ಆರೋಗ್ಯ ಶೀಘ್ರವೇ ಸರಿ ಹೋಗಲಿ ಎಂದು ಹಾರೈಸಿದ್ದಾರೆ.ಹಿರಿಯ ನಟ ಅಮಿತಾಭ್ ಬಚ್ಚನ್ ಹಾಗೂ ಅವರ ಪುತ್ರ ಅಭಿಷೇಕ್ ಬಚ್ಚನ್ ಆದಷ್ಟು ಬೇಗ ಕೊವಿಡ್-19 ಸೋಂಕಿನಿಂದ ಚೇತರಿಸಿಕೊಳ್ಳಲಿ ಎಂದು ಕೆ.ಪಿ. ಶರ್ಮಾ ಟ್ವೀಟ್ ಮಾಡಿದ್ದಾರೆ.ಇದನ್ನೂ ಓದಿ: ಗೋಗ್ರಾದಿಂದ ಚೀನಾ ಸೈನಿಕರು ಹಿಂದೆ ಸರಿದಿದ್ದೇ ಸುಳ್ಳು ಎಂದ ನಿವೃತ್ತ ಕರ್ನಲ್: ರಾಹುಲ್ ಗಾಂಧಿ ಕೆಂಡಾಮಂಡಲ
ಭಾರತದಲ್ಲಿರುವ ಫ್ರೆಂಚ್ ರಾಯಭಾರಿ ಇಮ್ಯಾನುವಲ್ ಲೆನಿಯನ್ ಅವರೂ ಕೂಡ ಟ್ವೀಟ್ ಮಾಡಿ, ಇವರಿಬ್ಬರ ಆರೋಗ್ಯ ಬೇಗ ಸರಿಯಾಗಲಿ ಎಂದು ಹಾರೈಸಿದ್ದರು.
ನಿನ್ನೆ ಮೊದಲು ಅಮಿತಾಭ್ ಬಚ್ಚನ್ ಅವರಲ್ಲಿ ಕರೊನಾ ದೃಢಪಟ್ಟಿತ್ತು. ಅದಾದ ಬಳಿಕ ಅಭಿಷೇಕ್ ಬಚ್ಚನ್ರಲ್ಲೂ ಕೊವಿಡ್ ಇರುವುದು ದೃಢಪಟ್ಟಿತ್ತು. ಹಾಗೇ ಇಂದು, ಐಶ್ವರ್ಯಾ ರೈ ಮತ್ತು ಅವರ ಮಗಳು ಆರಾಧ್ಯ ಅವರಿಗೂ ಸೋಂಕು ಇರುವುದು ಗೊತ್ತಾಗಿದೆ. ಸದ್ಯ ಜಯಾ ಬಚ್ಚನ್ ಅವರು ಆರೋಗ್ಯವಾಗಿದ್ದಾರೆ. (ಏಜೆನ್ಸೀಸ್)