ನ್ಯೂಸ್

ಕರ್ತವ್ಯ ನಿರ್ಲಕ್ಷ್ಯ; ತಹಸೀಲ್ದಾರ್ ಅಮಾನತು|Neglect of duty; Suspension of Tehsildar

ಬೆಂಗಳೂರು: ವರ್ಗಾವಣೆ ಮಾಡಿದ ಸ್ಥಳದಲ್ಲಿ ಕಾರ್ಯ ವರದಿ ಮಾಡಿಕೊಳ್ಳದೆ ಕರ್ತವ್ಯ ನಿರ್ಲಕ್ಷ್ಯ(Neglect of duty; Suspension of Tehsildar) ತೋರಿದ ಹಿನ್ನೆಲೆಯಲ್ಲಿ ಚಿತ್ರದುರ್ಗ ಜಿಲ್ಲಾಧಿಕಾರಿ ಕಚೇರಿಯ ಚುನಾವಣಾ ತಹಸೀಲ್ದಾರ್ ಅನಿಲ್ ಕುಮಾರ್ ಅರೋಳಿಕರ್ ಅವರನ್ನು ಅಮಾನತು ಮಾಡಲಾಗಿದೆ.

ಯಲಹಂಕ ತಾಲೂಕು ತಹಸೀಲ್ದಾರ್ ಆಗಿದ್ದ ಅನಿಲ್ ಕುಮಾರ್ ಅರೋಳಿಕರ್ ಅವರು ಸರ್ಕಾರಕ್ಕೂ ವರದಿ ಮಾಡಿಕೊಳ್ಳದೆ, ಚಿತ್ರದುರ್ಗ ಜಿಲ್ಲಾಧಿಕಾರಿ ಕಚೇರಿಯ ಚುನಾವಣಾ ತಹಸೀಲ್ದಾರ್ ಹುದ್ದೆಗೂ ವರದಿ ಮಾಡಿಕೊಳ್ಳದೇ ಕರ್ತವ್ಯ ನಿರ್ಲಕ್ಷ್ಯ ತೋರಿದ್ದಾರೆ.ಈ ಹಿನ್ನೆಲೆಯಲ್ಲಿ ವಿಚಾರಣೆ ಕಾಯ್ದಿರಿಸಿ ನವೆಂಬರ್ 11 ರಿಂದಲೇ ಜಾರಿಗೆ ಬರುವಂತೆ ಅಮಾನತ್ತಿನಲ್ಲಿಟ್ಟು ಕಂದಾಯ ಇಲಾಖೆ ಆದೇಶ ಹೊರಡಿಸಿದೆ.