ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10ರ ರಿಯಾಲಿಟಿ ಶೋನ ಎಂಟನೇ ವಾರದಲ್ಲಿ ಮನೆಯಿಂದ ಎಲಿಮಿನೇಟ್ ಆಗಿ ಹೊರಬಂದ ನೀತು ವನಜಾಕ್ಷಿ, ವಿಜಯವಾಣಿ ನಡೆಸಿದ ವಿಶೇಷ ಸಂದರ್ಶನದಲ್ಲಿ ಭಾಗಿಯಾಗಿ, ಬಿಗ್ ಮನೆಯ ಸದಸ್ಯರ ಕುರಿತಂತೆ ಹಲವು ಕುತೂಹಲಕಾರಿ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಚರ್ಚೆಯಾಗುತ್ತಿದೆ ಮಧ್ಯಪ್ರದೇಶದಲ್ಲಿ ಬಿಜೆಪಿ ಗೆಲುವಿಗೆ ಶ್ರಮ; ತೆರೆಮರೆಯಲ್ಲಿ ಕೆಲಸ ಮಾಡಿದ್ದ ಅಶ್ವಿನಿ ವೈಷ್ಣವ್
"ಬಿಗ್ ಬಾಸ್ ಜರ್ನಿ ಒಂದೊಳ್ಳೆ ನೆನಪು ಅಂತ ಹೇಳಬಹುದು. ಆ ಮನೆಯಲ್ಲಿ ಇದ್ದ 50 ದಿನಗಳ ಅನುಭವವನ್ನು ಹೊತ್ತು, ನನ್ನ ಜೀವನದಲ್ಲಿ ಅಳವಡಿಸಿಕೊಳ್ಳುತ್ತೀನಿ. ಪ್ರಾರಂಭದಲ್ಲಿ ಮನೆಯ ಸದಸ್ಯರೊಡನೆ ಬೆರೆಯುವುದು ಕಷ್ಟವಾಗುತ್ತಿತ್ತು. ಹಲವಾರು ಗೊಂದಲವಿತ್ತು. ಇತರೆ ಸ್ಪರ್ಧಿಗಳ ಜತೆ ನನ್ನ ವ್ಯಕ್ತಿತ್ವ ಪರಿಚಯಿಸಿದ್ದೇನೆ, ಅವರೆಲ್ಲರೊಂದಿಗೂ ಸಂತಸದಿಂದ ಇದ್ದೆ. ಯಾರು ನನ್ನನ್ನು ತೃತೀಯ ಲಿಂಗಿ ಎಂದು ನೋಡಲಿಲ್ಲ" ಎಂದರು.
"ಕಾರ್ತಿಕ್ ಜತೆ ಹೆಚ್ಚು ಜಗಳವಾಡುತ್ತಿದ್ದೆ, ಆದ್ರೆ ಅದು ಉದ್ದೇಶಪೂರ್ವಕವಲ್ಲ. ದ್ವೇಷ ಸಾಧಿಸುವ ನಿಟ್ಟಿನಲ್ಲಿ ಯಾರೊಂದಿಗೂ ಜಟಾಪಟಿ ನಡೆಸುತ್ತಿರಲಿಲ್ಲ. ಎಲ್ಲಿ ನನಗೆ ತಪ್ಪು ಅನಿಸುತ್ತಿತ್ತೋ, ಅಲ್ಲಲ್ಲಿ ಅವರಿಗೆ ಹೇಳುತ್ತಿದ್ದೆ. ಗೇಮ್ ಅಂತ ಬಂದಾಗ ವಿನಯ್ ಮಜಾ ತೆಗೆದುಕೊಳ್ಳುತ್ತಿದ್ದರು, ಅದನ್ನು ಹೇಳಿಯೇ ಮಾಡುತ್ತಿದ್ದರು. ಸಂಗೀತಾ ಮತ್ತು ಕಾರ್ತಿಕ್ ನಡುವೆ ಕೂಡ ಮಜಾ ತಗೋಳ್ತೀನಿ ನೋಡಿ ಅಂತ ಹೇಳ್ತಿದ್ದರು".....ಮತ್ತಷ್ಟು ವಿಚಾರಗಳನ್ನು ತಿಳಿಯಲು ಕೆಳಗಿನ ಸಂದರ್ಶನದ ವಿಡಿಯೋ ಕ್ಲಿಕ್ ಮಾಡಿ, ವೀಕ್ಷಿಸಿ.