ಕಳಸ: ಕಳಸ-ಹೊರನಾಡು ರಸ್ತೆ ಮಧ್ಯೆ ಸಿಗುವ ಭದ್ರಾ ನದಿಯ ಹೆಬ್ಬಾಳೆಯಲ್ಲಿ ಶನಿವಾರ ಸ್ನಾನ ಮಾಡಲೆಂದು ನದಿಗಿಳಿದ ಬಾಲಕಿ ನೀರು ಪಾಲಾಗಿದ್ದಾಳೆ. ತಮಿಳುನಾಡಿನ ಹೊಸೂರಿನ ಜಾಹ್ನವಿ(14) ಮೃತ ದುರ್ದೈವಿ. ತಮಿಳುನಾಡಿನಿಂದ ತನ್ನ ಕುಟುಂಬಸ್ಥರ ಜತೆ ಹೊರನಾಡು ದೇವಸ್ಥಾನಕ್ಕೆಂದು ಬಾಲಕಿ ಬಂದಿದ್ದು ಬೆಳಗ್ಗೆ ಭದ್ರಾ ನದಿಯಲ್ಲಿ ಸ್ನಾನಕ್ಕಿಳಿದ್ದಾಗ ನೀರಿನಲ್ಲಿ ಮುಳುಗಿದ್ದಾಳೆ. ತಕ್ಷಣ ನೀರಿನಿಂದ ಮೇಲಕ್ಕೆತ್ತಿ ಕಳಸ ಆಸ್ಪತ್ರೆಗೆ ಬಾಲಕಿಯನ್ನು ಕರೆದುಕೊಂಡು ಬರಲಾಯಿತಾದರೂ ಬದುಕಿಸಲು ಸಾಧ್ಯವಾಗಲಿಲ್ಲ. ಕಳಸ ಸರ್ಕಾರಿ ಆಸ್ಪತ್ರೆಯಲ್ಲಿ ಬಾಲಕಿಯ ಮರಣೋತ್ತರ ಪರೀಕ್ಷೆ ನಡೆಸಿ ಪಾಲಕರಿಗೆ ಹಸ್ತಾಂತರಿಸಲಾಯಿತು.