ಹಾಲಿ ಋತುವಿನಿಂದ ನೀರಜ್ ಚೋಪ್ರಾ ಔಟ್; ಗಾಯದಿಂದಾಗಿ ಏಷ್ಯಾಡ್ ಸಹಿತ ವರ್ಷದ ಎಲ್ಲ ಸ್ಪರ್ಧೆಗಳಿಗೆ ಅಲಭ್ಯ
ನವದೆಹಲಿ: ಏಷ್ಯನ್ ಗೇಮ್ಸ್ ಆರಂಭಕ್ಕೆ ಮುನ್ನ ಭಾರತದ ಅಥ್ಲೆಟಿಕ್ಸ್ ಅಭಿಯಾನಕ್ಕೆ ಬಲುದೊಡ್ಡ ಹೊಡೆತ ಬಿದ್ದಿದೆ. ಅವಳಿ ಒಲಿಂಪಿಕ್ಸ್ ಪದಕ ವಿಜೇತ ಜಾವೆಲಿನ್ ಥ್ರೋ ತಾರೆ ನೀರಜ್ ಚೋಪ್ರಾ (
) ಗಾಯದಿಂದಾಗಿ ಏಷ್ಯನ್ ಗೇಮ್ಸ್ ಸಹಿತ ಹಾಲಿ ವರ್ಷದ ಉಳಿದೆಲ್ಲ ಸ್ಪರ್ಧೆಗಳಿಂದ ಹೊರಬಿದ್ದಿದ್ದಾರೆ. ಶನಿವಾರ ಸಾಮಾಜಿಕ ಜಾಲತಾಣದಲ್ಲಿ 28 ವರ್ಷದ ನೀರಜ್ ಈ ಬೇಸರದ ಸಂಗತಿಯನ್ನು ಪ್ರಕಟಿಸಿದ್ದಾರೆ.
ತರಬೇತಿಯ ವೇಳೆ ಪಾದದ ಅಸ್ಥಿರಜ್ಜು ಹರಿದು ಗಾಯವಾಗಿರುವುದಾಗಿ ನೀರಜ್ ತಿಳಿಸಿದ್ದು, ಇದರಿಂದಾಗಿ ಹಾಲಿ ಋತುವಿನ ಮುಂಬರುವ ಎಲ್ಲ ಸ್ಪರ್ಧೆಗಳಿಂದ ಹೊರಗುಳಿದು ವಿಶ್ರಾಂತಿ ಪಡೆಯಲು ನಿರ್ಧರಿಸಿರುವುದಾಗಿ ಹೇಳಿದ್ದಾರೆ. ಹಾಲಿ ವರ್ಷ ಕಾಮನ್ವೆಲ್ತ್ ಗೇಮ್ಸ್ ಸಹಿತ ಮೂರೇ ಸ್ಪರ್ಧೆಗಳಲ್ಲಿ ಭಾಗವಹಿಸಿರುವ ನೀರಜ್, ಮುಂಬರುವ ಡೈಮಂಡ್ ಲೀಗ್ ಫೈನಲ್ಸ್, ಅಲ್ಟಿಮೇಟ್ ಚಾಂಪಿಯನ್ಷಿಪ್ಅನ್ನೂ ತಪ್ಪಿಸಿಕೊಳ್ಳಲಿದ್ದಾರೆ.
"ಸುದೀರ್ಘ ಕಠಿಣ ಪರಿಶ್ರಮದ ಬಳಿಕ ನಾನು ಕೊನೆಗೂ ಉತ್ತಮ ಲಯ ಕಂಡುಕೊಂಡಿರುವ ಭಾವನೆ ಬಂದಿತ್ತು. ಲೌಸಾನೆ ಡೈಮಂಡ್ ಲೀಗ್ನಲ್ಲಿ ನನ್ನ ಹಾಲಿ ಋತುವಿನ ಅತ್ಯುತ್ತಮ ಎಸೆತ ಎಸೆದಿದ್ದೆ. ಆದರೆ ದುರದೃಷ್ಟಕರವಾಗಿ ಮತ್ತೆ ಗಾಯಗೊಂಡಿರುವೆ. ವೈದ್ಯರು ಮತ್ತು ನನ್ನ ತಂಡದೊಂದಿಗೆ ಚರ್ಚಿಸಿದ ಬಳಿಕ ಹಾಲಿ ಋತುವಿನಿಂದ ವಿಶ್ರಾಂತಿ ಪಡೆಯಲು ನಿರ್ಧರಿಸಿರುವೆ' ಎಂದು ನೀರಜ್ ಹೇಳಿದ್ದಾರೆ.
"ಗಾಯದಿಂದ ಚೇತರಿಸಿಕೊಳ್ಳುವುದಕ್ಕೆ ಸದ್ಯ ಮೊದಲ ಆದ್ಯತೆ ನೀಡುವೆ. ಬಳಿಕ ಮುಂದಿನ ವರ್ಷ ಬಲಿಷ್ಠವಾಗಿ ಮರಳಿ ಕಣಕ್ಕಿಳಿಯುವೆ' ಎಂದು ಅವರು ಹೇಳಿದ್ದು, ಇನ್ನು ಪುನಶ್ಚೇತನದತ್ತ ಗಮನಹರಿಸಲಿದ್ದಾರೆ. ನಾನು ಲಯಕ್ಕೆ ಮರಳುವ ಹಂತದಲ್ಲೇ ಈ ಗಾಯವಾಗಿರುವುದು ತೀವ್ರ ಬೇಸರ ತಂದಿದೆ ಎಂದೂ ಅವರು ಹೇಳಿದ್ದಾರೆ.
2021ರ ಟೋಕಿಯೊ ಒಲಿಂಪಿಕ್ಸ್ನಲ್ಲಿ ಚಿನ್ನ, 2024ರ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ರಜತ ಜಯಿಸಿದ್ದ ನೀರಜ್, ಜಾಗತಿಕ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಕಳೆದ ಕೆಲ ವರ್ಷಗಳಿಂದ ನಿರಂತರವಾಗಿ ಸ್ಥಿರ ನಿರ್ವಹಣೆ ತೋರಿಸಿದ ಏಕೈಕ ಎಸೆತಗಾರರೆನಿಸಿದ್ದಾರೆ. ವಿಶ್ವ ಚಾಂಪಿಯನ್ಷಿಪ್ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯರೆನಿಸಿರುವ ಅವರು, ಭಾರತ ಮಾತ್ರವಲ್ಲದೆ ನೆರೆಯ ಪಾಕಿಸ್ತಾನ ಮತ್ತು ಶ್ರೀಲಂಕಾದ ಜಾವೆಲಿನ್ ಎಸೆತಗಾರರಿಗೂ ಸ್ಫೂರ್ತಿಯಾಗಿದ್ದಾರೆ.
ನೀರಜ್ ಚೋಪ್ರಾ ಗೈರು ಏಷ್ಯಾಡ್ನಲ್ಲಿ ಭಾರತದ ಚಿನ್ನದ ಪದಕ ಆಸೆಗೆ ಹೊಡೆತ ನೀಡಿದೆ. ಏಷ್ಯಾಡ್ ಜಾವೆಲಿನ್ನಲ್ಲಿ ಇನ್ನು ಭಾರತ ರೋಹಿತ್ ಯಾದವ್ ಮೇಲೆ ಪದಕ ನಿರೀೆ ಇಡಬೇಕಿದೆ. ನೀರಜ್ 2022ರ ಏಷ್ಯಾಡ್ನಲ್ಲಿ ಚಿನ್ನದ ಪದಕ ಗೆದ್ದಿದ್ದರು.