ನ್ಯೂಸ್

ಫಲಿತಾಂಶದ ನಿರೀಕ್ಷೆಯಲ್ಲಿ ಮತ ಕ್ವಾರಣ್ಯ ಮಾಡಿದ್ದ ನೀಲಗಾರ ಕಲಾವಿದ..

ಚಾಮರಾಜನಗರ: ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿ ಜನಪದ ಹಾಡಿನ ಮೂಲಕ ಮತ ಕ್ವಾರಣ್ಯ ಮಾಡಿದ್ದ ನೀಲಗಾರ ಕಲಾವಿದ ಫಲಿತಾಂಶದ ನಿರೀಕ್ಷೆಯಲ್ಲಿದ್ದಾರೆ‌.

ತಾಲೂಕಿನ ದೊಡ್ಡಮೋಳೆಯ ಸಾಮಾನ್ಯ ವರ್ಗಕ್ಕೆ ಮೀಸಲಾದ ಗ್ರಾಮದ ಬ್ಲಾಕ್‌–1ರಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿರುವ ತಂಬೂರಿ ಕಲಾವಿದ ಸಿದ್ದಶೆಟ್ಟಿ ವಿನೂತನವಾಗಿ ಮತಭಿಕ್ಷೆ ಕೇಳುತ್ತಿದ್ದರು. ಹೆಗಲಿಗೆ ಜೋಳಿಗೆ ‌‌ಹೇರಿಕೊಂಡು ತಂಬೂರಿ ಬಾರಿಸುತ್ತಾ ಮನೆಗೆ ತೆರಳಿ ಮತಭಿಕ್ಷೆ ಕೇಳುತ್ತಿದ್ದರು. ಇವರ ಚುನಾವಣೆ ಚಿಹ್ನೆಯೂ ತಂಬೂರಿಯೇ ಆಗಿದೆ.

ಮಂಟೇಸ್ವಾಮಿ, ಮಲೆಮಹದೇಶ್ವರ ಸ್ವಾಮಿ, ಬಿಳಿಗಿರಿರಂಗಸ್ವಾಮಿ, ಮುಡುಕುತೊರೆ ಮಲ್ಲಿಕಾರ್ಜುನ ಸ್ವಾಮಿ ಕುರಿತ ಪದಗಳನ್ನು ಹಾಡುತ್ತಾ ಸಿದ್ದಶೆಟ್ಟಿಯವರು, ಮತ ನೀಡಬೇಕೆಂದು ಕೋರಿದ್ದರು. ಇವರ ವಿರುದ್ಧ‌ 7 ಜನ ಸ್ಪರ್ಧೆ ಮಾಡಿದ್ದಾರೆ.

ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..