ನ್ಯೂಸ್

VIDEO: 'ಬುಟ್ಟ ಬೊಮ್ಮಾ..ಬುಟ್ಟ ಬೊಮ್ಮಾ...': ಏರ್​​ಪೋರ್ಟ್​ನಲ್ಲಿ ಇಂಡಿಗೋ ಸಿಬ್ಬಂದಿಯ ಭರ್ಜರಿ ಸ್ಟೆಪ್​

ವೈಜಾಗ್ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನಯಾನ ಸಂಸ್ಥೆಯ ಸಿಬ್ಬಂದಿ ಸಖತ್​ ಡ್ಯಾನ್ಸ್​ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆಗಿದೆ.

ಗಗನಸಖಿಯರು ಹಾಗೂ ಸಂಸ್ಥೆಯಲ್ಲಿ ವಿವಿಧ ಕೆಲಸ ಮಾಡುವ ಸಿಬ್ಬಂದಿಯೆಲ್ಲ ಸೇರಿ ಬುಟ್ಟ ಬೊಮ್ಮಾ...ಹಾಡಿಗೆ ಚೆಂದನೆಯ ಸ್ಟೆಪ್ ಹಾಕಿದ್ದಾರೆ.

ತೆಲುಗು ಸೂಪರ್​ ಸ್ಟಾರ್​ ಅಲ್ಲು ಅರ್ಜುನ್​ ಅಭಿನಯದ ಅಲಾ ವೈಕುಂಠಪುರಮುಲೋ ಚಿತ್ರದ ಬುಟ್ಟ ಬೊಮ್ಮಾ ಹಾಡು ಈಗಾಗಲೇ ಫೇಮಸ್​ ಆಗಿದೆ. ಈಗ ಇದೇ ಹಾಡಿಗೆ ಇಂಡಿಗೋ ಸಿಬ್ಬಂದಿ ಸ್ಟೆಪ್​ ಹಾಕಿದ್ದು ನೋಡಿ ನೆಟ್ಟಿಗರು ಫುಲ್​ ಖುಷಿಯಾಗಿದ್ದಾರೆ. ಇವರೆಲ್ಲ ಮಾಸ್ಕ್​ ಧರಿಸಿಕೊಂಡು, ಸಾಮಾಜಿಕ ಅಂತರ ಕಾಯ್ದುಕೊಂಡು ನೃತ್ಯ ಮಾಡಿದ್ದಾರೆ. ಇದನ್ನೂ ಓದಿ: ಕೊವಿಡ್​-19 ಸೋಂಕಿತ ಯುವತಿಯ ಮೇಲೆ ಒಂದೇ ರಾತ್ರಿಯಲ್ಲಿ 2 ಬಾರಿ ಅತ್ಯಾಚಾರಕ್ಕೆ ಯತ್ನಿಸಿದ ವೈದ್ಯ

ಈ ಹಾಡಿಗೆ ಅದೆಷ್ಟೋ ಜನ ಅಭಿಮಾನಿಗಳು ತಮ್ಮದೇ ಶೈಲಿಯಲ್ಲಿ ಡ್ಯಾನ್ಸ್​ ಮಾಡಿದ ಹಲವು ವಿಡಿಯೋಗಳು ಇಗಾಗಲೇ ವೈರಲ್​ ಆಗಿವೆ. ಅದರಲ್ಲೂ ಆಸ್ಟ್ರೇಲಿಯಾದ ಕ್ರಿಕೆಟರ್​ ಡೇವಿಡ್​ ವಾರ್ನರ್​ ಅವರು ತಮ್ಮ ಪತ್ನಿಯೊಂದಿಗೆ ಈ ಹಾಡಿಗೆ ನೃತ್ಯ ಮಾಡಿದ್ದರು. ಅದನ್ನು ನೋಡಿದ ನೆಟ್ಟಿಗರು ಫುಲ್​ ಫಿದಾ ಆಗಿದ್ದರು.

ಇದೀಗ ಇಂಡಿಗೋ ಸಿಬ್ಬಂದಿ ಡ್ಯಾನ್ಸ್​ ಮಾಡಿದ ವಿಡಿಯೋವನ್ನು ಅನೇಕರು ಶೇರ್ ಮಾಡಿಕೊಂಡಿದ್ದಾರೆ. ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  ಕೆಲವರು ಇಂಡಿಗೋ ಸಿಬ್ಬಂದಿಯ ಎನರ್ಜಿಗೆ ಶಬ್ಬಾಸ್​ಗಿರಿ ಕೊಟ್ಟಿದ್ದರೆ, ಇನ್ನೂ ಕೆಲವರು ಹಾಡಿನ ಪ್ರಸಿದ್ಧತೆಯ ಬಗ್ಗೆ ಮಾತನಾಡಿದ್ದಾರೆ.(ಏಜೆನ್ಸೀಸ್​)