ನವದೆಹಲಿ: ಲೋಕಸಭಾ ಚುನಾವಣೆ ಕೊನೆಯ ಹಂತದ ಮತದಾನ ಇಂದು ಕೊನೆಗೊಂಡಿದ್ದು, ಜೂನ್ 4ರಂದು ಮತ ಎಣಿಕೆ ನಡೆದು ಫಲಿತಾಂಶ ಪ್ರಕಟವಾಗಲಿದೆ. ಈ ಮಧ್ಯೆ ಮತದಾನೋತ್ತರ ಸಮೀಕ್ಷಾ ವರದಿಗಳು ಹೊರ ಬಿದ್ದಿದ್ದು ಪ್ರಕಟಗೊಂಡಿದ್ದು, ಆಡಳಿತಾರೂಢ ಎನ್‌ಡಿಗೆ ಸಿಹಿ ಸುದ್ದಿ ನೀಡಿದೆ.
ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತೆ ಅಧಿಕಾರಕ್ಕೆ ಏರಲಿದ್ದು ಮೂರನೇ ಬಾರಿ ನರೇಂದ್ರ ಮೋದಿ ಅಧಿಕಾರಕ್ಕೆ ಏರಲಿದ್ದಾರೆ ಎಂದು ಚುನಾಣೋತ್ತರ ಸಮೀಕ್ಷೆ ಭವಿಷ್ಯ ನುಡಿದಿವೆ.
ಇದರಲ್ಲಿ P Marq ಸಂಸ್ಥೆ ನಡೆಸಿರುವ ಚುನಾವಣೋತ್ತರ ಸಮೀಕ್ಷೆಯಲ್ಲಿ ಆಡಳಿತಾರೂಢ ಎನ್‌ಡಿಎ 359, ವಿಪಕ್ಷಗಳ ಇಂಡಿಯಾ ಒಕ್ಕೂಟ 154 ಸ್ಥಾನಗಳು, ಇತರೆ 30 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ತಿಳಿದು ಬಂದಿದೆ.
ಇಂಡಿಯಾ ನ್ಯೂಸ್ ಎನ್‌ಡಿಎಗೆ 371 ಸ್ಥಾನ ನೀಡಿದರೆ ಇಂಡಿಯಾ ಒಕ್ಕೂಟಕ್ಕೆ 125, ಇತರರಿಗೆ 47 ಸ್ಥಾನ ನೀಡಿವೆ. ಪಿ ಮಾರ್ಕ್ ಎನ್‌ಡಿಗೆ 359 ಸ್ಥಾನ, ಇಂಡಿಯಾ ಒಕ್ಕೂಟಕ್ಕೆ 154, ಇತರರಿಗೆ 30 ಸ್ಥಾನ ನೀಡಿದೆ. ಮಾಟ್ರಿಜ್ ಎನ್‌ಡಿಎಗೆ 353-368, INDIA ಒಕ್ಕೂಟಕ್ಕೆ 118-133, ಇತರರಿಗೆ 30 ಸ್ಥಾನ ನೀಡಿದೆ.
2019ರ ಚುನಾವಣೆಯಲ್ಲಿ ಬಿಜೆಪಿ 303 ಪಡೆದರೆ ಎನ್‌ಡಿಎ 353 ಸ್ಥಾನ ಗೆದ್ದುಕೊಂಡಿತ್ತು. ಕಾಂಗ್ರೆಸ್ 52 , ಯುಪಿಎ 91 ಸ್ಥಾನ ಗೆದ್ದುಕೊಂಡಿತ್ತು.