ನ್ಯೂಸ್

ಕರ್ನಾಟಕದ ಜಾಹೀರಾತಿಗೆ 'ಮಹಾ' ಶಾಸಕನ ಆಕ್ಷೇಪ; ಜಾಹೀರಾತು ತೆಗೆಯದಿದ್ರೆ ಬಸ್ಸನ್ನೇ ಒಡೆದು ಹಾಕ್ತಾನಂತೆ!

Webdesk - Manjunatha B

ಮುಂಬೈ: ಮಹಾರಾಷ್ಟ್ರ ಸಾರಿಗೆ ಸಂಸ್ಥೆಯ ಬೆಸ್ಟ್​ ಬಸ್ಸುಗಳ ,ಮೇಲೆ ಹಾಕಿರುವ 'ಕರ್ನಾಟಕ ನೋಡ ಬನ್ನಿ' ಜಾಹೀರಾತಿನ ಬಗ್ಗೆ ಥಾಣೆ ವಿಧಾನಸಭಾ ಕ್ಷೇತ್ರದ ಎನ್​ಸಿಪಿ ಶಾಸಕ ಜಿತೇಂದ್ರ ಅಹ್ವಾಡ್​ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿದ ಶಾಸಕ ಜಿತೇಂದ್ರ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯೂ ಮುಂಬೈ ನಗರ ಸಾರಿಗೆ ಬಸ್ಸುಗಳ ಮೇಲೆ ಇಂಗ್ಲೀಷ್​ ಹಾಗೂ ಮರಾಠಿಯಲ್ಲಿ ಜಾಹೀರಾತು ಬರೆಸಿದೆ. ನೆರೆಯ ರಾಜ್ಯದ ಜಾಹೀರಾತನ್ನ ಮಹಾರಾಷ್ಟ್ರದ ಬಸ್ಸುಗಳ ಮೇಲೆ ಏಕೆ ಹಾಕಬೇಕು ಎಂದು ಪ್ರಶ್ನಿಸಿದ್ದಾರೆ.

ಮಹಾರಾಷ್ಟ್ರ ಸಾರಿಗೆ ಸಂಸ್ಥೆಯೂ ಈ ಜಾಹೀರಾತುಗಳನ್ನ ತೆಗೆಸಿಹಾಕದಿದ್ದಲ್ಲಿ ಬಸ್ಸುಗಳನ್ನ ಒಡೆದು ಹಾಕಲಾಗುವುದು. ಈ ಜಾಹೀರಾತನ್ನು ಹಾಕಿಸುವ ಮೂಲಕ ಮರಾಠಿಗರ ಗಾಯದ ಮೇಲೆ ಉಪ್ಪುಸವರಿದಂತಾಗಿದೆ ಎಂದು ಎನ್​ಸಿಪಿ ಶಾಸಕ ಜಿತೇಂದ್ರ ಅಹ್ವಾಡ್​​ ಆಕ್ರೋಶ ಹೊರಹಾಕಿದ್ದಾರೆ.