ನ್ಯೂಸ್

ಪುಲ್ವಾಮಾ ದಾಳಿ: ಪಾಕಿಸ್ತಾನವೇ ಸತ್ಯ ಒಪ್ಪಿಕೊಂಡರೂ ಈ ಎನ್​ಸಿಪಿ ಮುಖಂಡನಿಗೆ ಇಲ್ಲವಂತೆ 'ನಂಬಿಕೆ'

ನವದೆಹಲಿ: ಕಳೆದ ವರ್ಷ ಪುಲ್ವಾಮಾದಲ್ಲಿ ದಾಳಿ ಮಾಡಿಸಿದ್ದು ನಾವೇ ಎಂದು ಪಾಕಿಸ್ತಾನವೇ ಒಪ್ಪಿಕೊಂಡಿದ್ದರೂ ಭಾರತದ ಎನ್​ಸಿಪಿಯ ಈ ಮುಖಂಡ ಅದನ್ನು ನಂಬುತ್ತಿಲ್ಲ...!

ಎನ್​ಸಿಪಿ ಮುಖಂಡ ಮಜೀದ್​ ಮೆಮೋನ್​ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದು, ಪುಲ್ವಾಮಾ ದಾಳಿ ಮಾಡಿಸಿದ್ದು ನಾವೇ ಎಂದು ಪಾಕಿಸ್ತಾನದ ಸಚಿವರು ಸಂಸತ್ತಿನಲ್ಲಿ ಹೇಳಿದ್ದಾರೆ. ಆದರೆ ನಾವು ಅದನ್ನು ನಂಬುವುದಿಲ್ಲ. ಎನ್​ಐಎ ತನಿಖೆ ನಡೆಸುತ್ತಿದೆ. ಅದರ ವರದಿಯನ್ನು ಆದಷ್ಟು ಬೇಗ ಬಹಿರಂಗಪಡಿಸಿ, ಪ್ರಧಾನಿ ನರೇಂದ್ರ ಮೋದಿಯವರು ಅದನ್ನು ರಾಷ್ಟ್ರಕ್ಕೆ ತಿಳಿಸಬೇಕು ಎಂದಿದ್ದಾರೆ.

ಪಾಕಿಸ್ತಾನ ಸಚಿವ ಫಾವದ್​ ಚೌಧರಿ ಗುರುವಾರ ಸಂಸತ್ತಿನಲ್ಲಿ ಮಾತನಾಡುತ್ತ, 2019ರಲ್ಲಿ ಪುಲ್ವಾಮಾದಲ್ಲಿ ದಾಳಿ ಮಾಡಿಸಿದ್ದು ಇಮ್ರಾನ್ ಖಾನ್ ಸರ್ಕಾರದ ಒಂದು ಸಾಧನೆ ಎಂದು ಹೇಳಿದ್ದರು. ಅದಕ್ಕೆ ಭಾರತದ ವಿದೇಶಾಂಗ ಸಚಿವಾಲಯ, ಪ್ರಧಾನಿ ನರೇಂದ್ರ ಮೋದಿಯವರು ಈಗಾಗಲೇ ಪ್ರತಿಕ್ರಿಯೆ ನೀಡಿದ್ದಾರೆ.