ನವದೆಹಲಿ: ನೂತನ ಶೈಕ್ಷಣಿಕ ವರ್ಷದಿಂದ ಜಾರಿಗೆ ಬರುವಂತೆ 12ನೇ ತರಗತಿ ಪಠ್ಯಕ್ರಮದಲ್ಲಿ ಗಾಂಧೀಜಿ, ಹಿಂದೂ-ಮುಸ್ಲಿಂ ಭಾವೈಕ್ಯತೆ, RSS ನಿಷೇಧದ ಬಗೆಗಿನ ಪಾಠಗಳನ್ನು NCERT ಕೈ ಬಿಟ್ಟಿದೆ.
ಗಾಂಧೀಜಿ ಅವರ ಹತ್ಯೆಯೂ ದೇಶದಲ್ಲಿ ಕೋಮು ಸ್ವಾರಸ್ಯದ ಮೇಲೆ ಅಗಾಧವಾದ ಪರಿಣಾಮವನ್ನು ಬೀರಿತ್ತು. ಗಾಂಧೀಜಿ ಪ್ರತಿಪಾದಿಸಿದ ಹಿಂದೂ-ಮುಸ್ಲಿಂ ಭಾವೈಕ್ಯತೆಯೂ ಹಿಂದೂ ಪರ ಸಂಘಟನೆಗಳನ್ನು ಕೆರಳಿಸಿತ್ತು. ಇದರಿಂದ ಕೆಲಕಾಲ RSSಅನ್ನು ದೇಶದಲ್ಲಿ ನಿಷೇಧ ಮಾಡಿದ್ದು ಇವುಗಳನ್ನು ಪಠ್ಯಕ್ರಮದಿಂದ ಕೈ ಬಿಡಲಾಗಿದೆ ಎಂದು ತಿಳಿದು ಬಂದಿದೆ.
ಈ ಕುರಿತು ಮಾತನಾಡಿರುವ NCERT ನಿರ್ದೇಶಕ ದಿನೇಶ್ ಸಕ್ಲಾನಿ 12ಣೇ ತರಗತಿ ಪಠ್ಯಕ್ರಮದಲ್ಲಿ ಕಡಿತಗೊಳಿಸಲಾಗಿಲ್ಲ ಗುಜರಾತ್ ಗಲಭೆ, ಶೀತಲ ಸಮರ, ತುರ್ತು ಪರಿಸ್ಥಿತಿ ಸೇರಿದಂತೆ ಕೆಲವೊಂದು ವಿಷಯಗಳು ಪುನರಾವರ್ತನೆಯಾಗಿದ್ದವು. ಅಪ್ರಸ್ತುತವಾಗಿರುವ ಕೆಲವು ಆಂಶಗಳನ್ನು ಪಠ್ಯದಿಂದ ತೆಗೆದು ಹಾಕಲಾಗಿದೆ. ತಜ್ಱರ ಶಿಫಾರಸ್ಸಿನಂತೆ ಎಲ್ಲಾ ಮಾಡಲಾಗಿದೆ ಎಂದು ದಿನೇಶ್ ಸಕ್ಲಾನಿ ತಿಳಿಸಿದ್ದಾರೆ.
NCERTಯ ಈ ಕ್ರಮಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು ವಿರೋಧ ಪಕ್ಷವಾದ ಕಾಂಗ್ರೆಸ್ ಸೇರಿದಂತೆ ಅನೇಕರು ಇದನ್ನು ವಿರೋಧಿಸಿದ್ಧಾರೆ. ಬಿಜೆಪಿ ಈ ಕ್ರಮವನ್ನು ಸಮರ್ಥಿಸಿಕೊಂಡಿದ್ದು ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿವೆ.
ಕೇಂದ್ರ ಸರ್ಕಾರವು ಪಠ್ಯಕ್ರಮದಲ್ಲಿ ಬದಲಾವಣೆ ಮಾಡುವ ಮೂಲಕ ಕಾಂಗ್ರೆಸ್ ವಿರುದ್ಧದ ಪ್ರತೀಕಾರವಾಗಿ ಇಂತಹ ಕ್ರಮವನ್ನು ಕೈಗೊಂಡಿದೆ. ಈ ಮೂಲಕ ತಿಪ್ಪೆ ಸಾರಿಸುವ ಕೆಲಸಕ್ಕೆ ಮುಂದಾಗಿದೆ ಎಂದು ಎಐಸಿಸಿ ಪ್ರದಾನ ಕಾರ್ಯದರ್ಶಿ ಜೈರಾಮ್ ರಮೇಶ್ ಟ್ವೀಟ್ ಮಾಡಿ ಕಿಡಿಕಾರಿದ್ದಾರೆ.