ಬೆಂಗಳೂರು: ನಾಕೋಟಿಕ್ಸ್ ಕಂಟ್ರೋ ಬ್ಯೂರೋ (ಎನ್‌ಸಿಬಿ) ಬೆಂಗಳೂರು ವಲಯ ಘಟಕ ಅಂತಾರಾಜ್ಯ ಮಾದಕವಸ್ತು ಕಳ್ಳ ಸಾಗಣೆ ಜಾಲವನ್ನು ಭೇದಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿ 1591 ಕೆ.ಜಿ ಗಾಂಜಾ ಹಾಗೂ ಲಾರಿಯನ್ನು ಜಪ್ತಿ ಮಾಡಿದೆ.
ಲಾರಿಯಲ್ಲಿ ಮಾದಕವಸ್ತು ಸಾಗಿಸುತ್ತಿರುವ ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿದ ಎನ್‌ಸಿಬಿ ಅಧಿಕಾರಿಗಳು ಬೀದರ್ ಜಿಲ್ಲೆಯ ಔರಾದ್, ವನ್ಮಾರಪಲ್ಲಿ ಚೆಕ್ ಪೊಸ್ಟ್‌ನಲ್ಲಿ ಲಾರಿಯನ್ನು ತಡೆದು ಪರಿಶೀಲನೆ ನಡೆಸಿ ಗಾಂಜಾ ವಶಪಡಿಕೊಂಡಿದ್ದಾರೆ. ಗಾಂಜಾವನ್ನು ಆಹಾರದ ಪ್ಯಾಕೆಟ್‌ಗಳ ಮಧ್ಯೆ ಬಚ್ಚಿಡಲಾಗಿತ್ತು. ಇದಕ್ಕಾಗಿಯೇ ಟ್ರಕ್‌ನಲ್ಲಿ ವಿಶೇಷವಾದ ಕುಳಿಯೊಂದನ್ನು ಆರೋಪಿಗಳು ಮಾಡಿದ್ದರು. ಎರಡು ತಿಂಗಳ ಅವಧಿಯಲ್ಲಿ ಅಪಾರ ಪ್ರಮಾಣದ ಮಾದಕವಸ್ತು ವಶಪಡಿಸಿಕೊಂಡಿರುವ ಎರಡನೇ ಪ್ರಕರಣ ಇದಾಗಿದೆ. ಮಾರ್ಚ್‌ನಲ್ಲಿ ೧೫೯೬ ಕೆ.ಜಿ ಗಾಂಜಾ ವಶಪಡಿಸಿಕೊಳ್ಳಲಾಗಿತ್ತು. ಈ ಎರಡು ಪ್ರಕರಣದಲ್ಲಿಯೂ ಆರೋಪಿಗಳು ಆಂಧ್ರ ಮತ್ತು ಒರಿಸ್ಸಾದಿಂದ ಸಾಗಿಸಿರುವುದು ಕಂಡು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.