ನ್ಯೂಸ್

ತಿಹಾರ್​ ಜೈಲ್​ ವಾರ್ಡನ್​ ನಡೆಸುತ್ತಿದ್ದ ಲ್ಯಾಬ್​ ಮೇಲೆ NCB ದಾಳಿ, 95 KG ಡ್ರಗ್ಸ್​ ವಶ! | NCB raided

ನೊಯ್ಡಾ; ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ(NCB) ಮತ್ತು ದೆಹಲಿ ವಿಶೇಷ ಸೆಲ್​ನ ಪೊಲೀಸರು ಪ್ರಯೋಗಾಲದ ಮೇಲೆ ನಡೆಸಿದ (NCB raided) ದಾಳಿಯಲ್ಲಿ ಬರೊಬ್ಬರಿ 95 ಕೆ.ಜಿ ಡ್ರಗ್ಸ್​ ಜಪ್ತಿ ಮಾಡಿದ್ದಾರೆ.

ಗುಪ್ತಚರ ಮಾಹಿತಿ ಮೆರೆಗೆ ದಾಳಿ ನಡೆಸಿದ್ದು, ತಿಹಾರ್ ಜೈಲ್​ನ ವಾರ್ಡನ್​, ದೆಹಲಿ ಉದ್ಯಮಿ ಮತ್ತು ಮುಂಬೈ ಮೂಲದ ರಸಾಯನಶಾಸ್ತ್ರಜ್ಞ ಮೂವರು ಸೇರಿ ನಡೆಸುತ್ತಿದ್ದ ಮೇಥ ಲ್ಯಾಬ್​ ಎಂಬುವುದು ತಿಳಿದು ಬಂದಿದೆ.

ಕಾರ್ಯಚರಣೆಯಲ್ಲಿ ವಿವಿಧ ಔಷಧಿಗಳು ಸೇರಿದಂತೆ ಅಂದಾಜು 95 ಕೆಜಿ ಮೇಥಪೈಂಟಮನ್​ ರಾಸಾಯನಿಕವನ್ನು ಮತ್ತು ಅತ್ಯಧುನಿಕ ಉತ್ಪಾದನ ಯಂತ್ರಗಳನ್ನು ವಶ ಪಡಿಸಿಕೊಳ್ಳಲಾಗಿದೆ.

ಇನ್ನು ಸ್ಥಳದಲ್ಲೇ ದೆಹಲಿ ಮೂಲದ ಉದ್ಯಮಿಯನ್ನು ಬಂಧಿಸಿದ್ದು, ಇವನನ್ನು ಈ ಮುಂಚೆ ಮಾದಕವಸ್ತು ಪ್ರಕರಣದಲ್ಲಿ ಕಂದಾಯ ಗುಪ್ತಚರ ಇಲಾಖೆ ಬಂಧಿಸಿತ್ತು. ಇವನು ತಿಹಾರ್ ಜೈಲ್​ನ ವಾರ್ಡನ್​ ಜತೆ ಸಂಪರ್ಕ ಹೊಂದಿದ್ದು, ಮಾದಕವಸ್ತು(ಡ್ರಗ್ಸ್) ಉತ್ಪಾದನೆಗೆ ಬೇಕಾದ ರಾಸಾಯನಿಕ ಮತ್ತು ಉಪಕರಣಗಳನ್ನಯ ಖರೀದಿಸಲು ಸಹಾಯ ಮಾಡುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

ಕಾರ್ಯಚಾರಣೆಯಲ್ಲಿ ಬಂಧಿತರಾಗಿರುವ ನಾಲ್ಕು ಆರೋಪಿಗಳನ್ನು ಮ್ಯಾಜಿಸ್ಟೇಟ್​ ಕೋರ್ಟ್​ಗೆ ಹಾಜರುಪಡಿಸಿ, ಹೆಚ್ಚಿನ ತನಿಖೆಗೆಗಾಗಿ ಮೂರು ದಿನಗಳ ಕಾಲ ಪೊಲೀಸ್​ ಕಸ್ಟಡಿಗೆ ಒಪ್ಪಿಸಲಾಗಿದೆ. ಇದೇ ವಿಚಾರವಾಗಿ ಮತ್ತೊಂದು ಕಡೆ ನಡೆದ ದಾಳಿಯಲ್ಲಿ ಉದ್ಯಮಿಯ ಸಹಚರನ್ನು ಕೂಡ ಬಂಧಿಸಲಾಗಿದೆ.

ಅಧಿಕಾರಿಗಳು, ಈ ಅಕ್ರಮ ಕಾರ್ಯಾಚರಣೆಯ ಮೂಲಕ ಹಣಕಾಸಿನ ಜಾಡು ಮತ್ತು ಆಸ್ತಿಯನ್ನು ಪತ್ತೆಹಚ್ಚುತ್ತಿದ್ದಾರೆ. ಅಲ್ಲದೆ, ಕೈಗಾರಿಕ ಪ್ರದೇಶಗಳಲ್ಲಿ ಆಕ್ರಮವಾಗಿ ಸ್ಥಾಪಿಸಿದಂತಹ ಲ್ಯಾಬ್​ಗಳನ್ನು ಬೇರು ಸಹಿತ ಕಿತ್ತು ಹಾಕುತ್ತಿರುವುದು ಶ್ಲಾಘನೀಯ ಕೆಲಸ ಎಂದೇ ಹೇಳಲಾಗುತ್ತಿದೆ.

ಒಂದು ವರದಿಯ ಪ್ರಕಾರ, ಆಕ್ಟೋಬರ್​ ಒಂದೇ ತಿಂಗಳಲ್ಲಿ ದೆಹಲಿ ವಿಶೇಷ ಸೆಲ್​ನ ಪೊಲೀಸರು ವಿವಿಧೆಡೆ ನಡೆಸಿದ ದಾಳಿಯಲ್ಲಿ ಬರೊಬ್ಬರಿ 7.600 ಕೋಟಿ ಮೌಲ್ಯದ ಡ್ರಗ್ಸ್​ ವಶಪಡಿಸಿಕೊಂಡಿದೆ.(ಏಜೆನೀಸ್​)