ನ್ಯೂಸ್

ನಯನತಾರ ಜನ್ಮದಿನ: ಕಥೆಯ ಸುಳಿವು ಕೊಟ್ಟ 'ಟೆಸ್ಟ್'​ ಪೋಸ್ಟರ್​

ಆಂಧ್ರಪ್ರದೇಶ: ಬಾಲಿವುಡ್​ ಚಿತ್ರರಂಗಕ್ಕೆ 'ಜವಾನ್'​ ಮುಖೇನ ಪಾದಾರ್ಪಣೆ ಮಾಡಿದ ಬಹುಭಾಷಾ ತಾರೆ, ಲೇಡಿ ಸೂಪರ್ ಸ್ಟಾರ್ ನಯನತಾರ ಇಂದು 39ನೇ ವಸಂತಕ್ಕೆ ಕಾಲಿಟ್ಟಿದ್ದು, ಜನ್ಮದಿನದ ಸಂಭ್ರಮದಲ್ಲಿ ತೊಡಗಿದ್ದಾರೆ. ಈ ಮಧ್ಯೆ ನಯನತಾರ ಅಭಿನಯದ ಮುಂದಿನ ಸಿನಿಮಾ 'ಟೆಸ್ಟ್'​ ಚಿತ್ರತಂಡದಿಂದ ಹೊಸ ಪೋಸ್ಟರ್​ವೊಂದು ಹೊರಬಿದ್ದಿದೆ. ಈ ಪೋಸ್ಟರ್​ನಲ್ಲಿ ನಟಿಯ ವಿಶೇಷ ಲುಕ್​ ಅನ್ನು ಅಧಿಕೃತವಾಗಿ ಅನಾವರಣಗೊಳಿಸಲಾಗಿದೆ.

ನಯನತಾರ ಮುಖ್ಯಭೂಮಿಕೆಯಲ್ಲಿರುವ ಮುಂಬರುವ 'ಟೆಸ್ಟ್' ಚಿತ್ರದ ನಿರ್ಮಾಪಕರು ಹೊಸ ಚಿತ್ರದ ಪೋಸ್ಟರ್ ಅನ್ನು ಬಿಡುಗಡೆಗೊಳಿಸಿದ್ದು, ನಟಿಗೆ ಜನ್ಮದಿನದ ಶುಭಾಶಯ ಕೋರಿದ್ದಾರೆ. ಪೋಸ್ಟರ್‌ನಲ್ಲಿ, ಸಾಂಪ್ರದಾಯಿಕ ಸೀರೆಯಲ್ಲಿ ಕಾಣಿಸಿಕೊಂಡಿರುವ ನಯನತಾರಾ, ಕಪ್ಪು ಮತ್ತು ಮರೂನ್ ಬಾರ್ಡರ್‌ನೊಂದಿಗೆ ಮರೂನ್ ಮತ್ತು ಬ್ರೌನ್ ಕಾಟನ್ ಸೀರೆಯನ್ನು ಧರಿಸಿ, ಕಪ್ಪು ಮತ್ತು ಬಿಳಿ ಚೆಕ್ಕರ್ ಕಾಟನ್ ಹ್ಯಾಂಡ್‌ಲೂಮ್ ಬ್ಲೌಸ್‌ನಲ್ಲಿ ಮಿಂಚಿದ್ದಾರೆ.

ವೈ ನಾಟ್ ಸ್ಟುಡಿಯೋಸ್ ನಿರ್ಮಾಣದ ಈ ಚಿತ್ರವನ್ನು ಎಸ್. ಶಶಿಕಾಂತ್ ನಿರ್ದೇಶಿಸಿದ್ದಾರೆ. 'ಟೆಸ್ಟ್' ಸಿನಿಮಾ ಸ್ಪೋರ್ಟ್ಸ್-ಡ್ರಾಮಾ ಜಾನರ್​ ಒಳಗೊಂಡಿದೆ. ನಟಿಯ ಪೋಸ್ಟರ್​ ಜತೆಗೆ ಚಿತ್ರತಂಡವು ಮೋಷನ್ ಪೋಸ್ಟರ್ ಅನ್ನು ಸಹ ಬಿಡುಗಡೆಗೊಳಿಸಿದೆ.

ಚಿತ್ರದಲ್ಲಿ ನಯನತಾರ, ತ್ರಿಶಾ ಕೃಷ್ಣನ್, ಆರ್​. ಮಾಧವನ್​, ಸಿದ್ದಾರ್ಥ್​, ಮೀರಾ ಜಾಸ್ಮಿನ್​, ಕಾಲಿ ವೆಂಕಟ್​ ಮುಂತಾದವರ ತಾರಾಗಣವಿದೆ. ಸಿನಿಮಾಗೆ ಶಕ್ತಿಶ್ರೀ ಗೋಪಾಲನ್ ಅವರ ಸಂಗೀತ ಸಂಯೋಜನೆಯಿದೆ,(ಏಜೆನ್ಸೀಸ್).