ನ್ಯೂಸ್

ಕೊತ್ತಂಬರಿ ಸೊಪ್ಪು ಮಾರುತ್ತಿದ್ದವ ಇಂದು ಸ್ಟಾರ್​ ನಟ; ಬಹು ಬೇಡಿಕೆಯ ಹೀರೋ ಯಾರು ಗೊತ್ತಾ?

ಮುಂಬೈ: ಬಡ ಕುಟುಂಬದಲ್ಲಿ ಜನಿಸಿ ಜೀವನೋಪಾಯಕ್ಕಾಗಿ ಮತ್ತು ಕುಟುಂಬವನ್ನು ಪೋಷಿಸಲು ವಿವಿಧ ಉದ್ಯೋಗಗಳನ್ನು ಮಾಡಿದ್ದ ವ್ಯಕ್ತಿ ಇದೀಗ ತನ್ನ ಕಷ್ಟಗಳನ್ನೆಲ್ಲಾ ದಾಟಿಕೊಂಡು ಇದೀಗ ಬಾಲಿವುಡ್​ನ ಖ್ಯಾತ ಹೀರೋಗಳಲ್ಲಿ ಒಬ್ಬರಾಗಿದ್ದಾರೆ.ಯಾರು ಈ ನಟ? ಎನ್ನುವ ಪ್ರಶ್ನಗೆ ಉತ್ತರ ಇಲ್ಲಿದೆ.....

ನವಾಜುದ್ದೀನ್ ಸಿದ್ದಿಕಿ ಬಹುಮುಖ ನಟನೆಯಿಂದ ಬಾಲಿವುಡ್ ನಲ್ಲಿ ವಿಶೇಷ ಕ್ರೇಜ್ ಸೃಷ್ಟಿಸಿದ್ದಾರೆ. ಬಾಲಿವುಡ್ ನಲ್ಲಿ ಗುರುತಿಸಿಕೊಳ್ಳಲು ಒಂದು ದಶಕಕ್ಕೂ ಹೆಚ್ಚು ಸಮಯ ತೆಗೆದುಕೊಂಡರು. ಅನೇಕ ಅವಮಾನಗಳು ಮತ್ತು ನಿರಾಕರಣೆಗಳ ಹೊರತಾಗಿಯೂ, ಸಿದ್ದಿಕಿ ನಟನೆಯನ್ನು ಬಿಡಲಿಲ್ಲ.

ನವಾಜುದ್ದೀನ್ ಉತ್ತರ ಪ್ರದೇಶದ ಬುಧಾನಾ ಪ್ರದೇಶದಲ್ಲಿ ಜನಿಸಿದರು. 8 ಮಂದಿ ಒಡಹುಟ್ಟಿದವರಲ್ಲಿ ಇವರು ಹಿರಿಯರು. ಬಿಎಸ್ಸಿ ಕೆಮಿಸ್ಟ್ರಿ ಓದಿದ್ದಾರೆ. ದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ (ಎನ್ಎಸ್ಡಿ)ಗೆ ಸೇರಿದರು. ಈ ವೇಳೆ ಕುಟುಂಬದ ನಿರ್ವಹಣೆ ಜವಾಬ್ದಾರಿಯು ಇವರ ಮೇಲೆ ಇತ್ತು.

ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡಿದ್ರು, ಕೊತ್ತಂಬರಿ ಸೊಪ್ಪು ಸಹ ಮಾರಾಟ ಮಾಡಿದ್ದ ನವಾಜುದ್ದೀನ್, ದೆಹಲಿಗೆ ಬಂದು ನಟನೆಯತ್ತ ಗಮನ ಹರಿಸಿದ್ರು. ಆದರೆ ಕೆಲಸ ಬಿಟ್ಟ ನಂತರ ಹಣದ ಕೊರತೆ ಕಾಡಿತು. ಆ ಸಮಯದಲ್ಲಿ ನಾನು ಸ್ನೇಹಿತರ ಬಳಿ ಸಾಲ ಪಡೆಯುತ್ತಿದ್ದೆ.ನಂತರ ಬೇರೆಯವರಿಂದ ಸಾಲ ಪಡೆದು ಹಿಂದಿನ ಸಾಲಗಾರನಿಗೆ ಸಾಲ ಪಾವತಿಸುತ್ತಿದ್ದರು. ಒಂದು ಚಿಕ್ಕ ಫ್ಲಾಟ್ ನಲ್ಲಿ 4 ಜನರೊಂದಿಗೆ ವಾಸಿಸುತ್ತಿದ್ದೆ. ನಾನು ಹಣಕ್ಕಾಗಿ ಕಾವಲುಗಾರನಾಗಿ ಕೆಲಸ ಮಾಡಿದ್ದರು. ಕೆಲವೊಮ್ಮೆ ಕೊತ್ತಂಬರಿ ಸೊಪ್ಪು ಕೂಡ ಮಾರುತ್ತಿದ್ದರು.

ಸಿನಿಮಾ ಎಂಟ್ರಿ: ನವಾಜುದ್ದೀನ್ 1999 ರಲ್ಲಿ ಚಿತ್ರರಂಗ ಪ್ರವೇಶಿಸಿದರು. ‘ಸರ್ಫರೋಶ್’ ಅವರ ಮೊದಲ ಚಿತ್ರ.ನಂತರ ಅವರು ರಾಮ್ ಗೋಪಾಲ್ ವರ್ಮಾ ಅವರ ‘ಶೂಲ್’, 2000 ರ ‘ಜಂಗಲ್’ ಮತ್ತು ರಾಜ್ಕುಮಾರ್ ಹಿರಾನಿ ಅವರ ಮುನ್ನಾಭಾಯ್ ಎಂಬಿಬಿಎಸ್ (2003) ನಲ್ಲಿ ಕಾಣಿಸಿಕೊಂಡರು. ನಂತರ ಟಿವಿ ಧಾರಾವಾಹಿಗಳಲ್ಲಿ ಕೆಲಸ ಮಾಡಿದ್ರೂ ಆದರೆ ಹೆಚ್ಚಿನ ಯಶಸ್ಸು ಸಿಗಲಿಲ್ಲ. ಅನುರಾಗ್ ಕಶ್ಯಪ್ ಅವರ ಗ್ಯಾಂಗ್ಸ್ಟರ್ ಚಿತ್ರ ‘ಗ್ಯಾಂಗ್ಸ್ ಆಫ್ ವಾಸೇಪುರ್’ (2012) ನೊಂದಿಗೆ ನವಾಜುದ್ದೀನ್ ಸೂಪರ್ ಹಿಟ್ ಪಡೆದರು. ಅಂದಿನಿಂದ ಸಿದ್ದಿಕಿ ಹಿಂತಿರುಗಿ ನೋಡಿಲ್ಲ. ಈಗ ನವಾಜುದ್ದೀನ್ ಬ್ಯುಸಿ ನಟರಲ್ಲಿ ಒಬ್ಬರಾಗಿದ್ದಾರೆ. ಟಾಪ್ OTT ನಟರಾಗಿರುವ ನವಾಜುದ್ಧೀನ್​ಗೆ ಡಿಮ್ಯಾಂಡ್ ಹೆಚ್ಚಾಗಿದೆ.

ನವಾಜುದ್ದೀನ್ ಸಿದ್ದಿಕಿ ಅವರ ನಿವ್ವಳ ಮೌಲ್ಯ 2024 ರ ಹೊತ್ತಿಗೆ ಸುಮಾರು 125 ಕೋಟಿ ರೂ ಇದೆ. ಸಂಭಾಷಣೆ ಮತ್ತು ಪಾತ್ರಕ್ಕೆ ಜೀವ ತುಂಬಲು ನವಾಜುದ್ದೀನ್ ಸಿದ್ದಿಕಿ ಉತ್ತಮ ಉದಾಹರಣೆ. ಸದ್ಯ ಅವರ ಕೈಯಲ್ಲಿ ನಾಲ್ಕೈದು ಚಿತ್ರಗಳಿವೆ. ನವಾಜುದ್ದೀನ್ ಇತ್ತೀಚೆಗೆ ತಮ್ಮ ವೈಯಕ್ತಿಕ ಜೀವನದ ಕಾರಣದಿಂದ ಸುದ್ದಿಯಲ್ಲಿದ್ದರು.