ನ್ಯೂಸ್

ಮಾಜಿ ಪತ್ನಿ-ಸಹೋದರನ ವಿರುದ್ಧ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ದಾಖಲಿಸಿದ ಬಾಲಿವುಡ್​ ನಟ ನವಾಜುದ್ದೀನ್ ಸಿದ್ಧಿಕಿ

ಮುಂಬೈ: ತಮ್ಮ ವಿರುದ್ದ ಮಾನಹಾನಿಕರ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿ ಬಾಲಿವುಡ್​ ನಟ ನವಾಜುದ್ದೀನ್​ ಸಿದ್ಧಿಕಿ ಮಾಜಿ ಪತ್ನಿ ಆಲಿಯಾ ಅಲಿಯಾಸ್​ ಜೈನಾಬ್​ ಸಿದ್ಧಿಕಿ ಮತ್ತು ಸಹೋದರ ಶಂಶುದ್ದಿನ್​ ಸಿದ್ಧಿಕಿ ವಿರುದ್ಧ ಬಾಂಬೆ ಹೈಕೋರ್ಟಿನಲ್ಲಿ 100 ಕೋಟಿ ರೂಗಳ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿದ್ದಾರೆ.

ವೈವಾಹಿಕ ಕಲಹದಲ್ಲಿ ಸಿಲುಕಿರುವ ನಟ ತಮ್ಮ ವಿರುದ್ದ ಯಾವುದೇ ಹೇಳಿಕೆಗಳನ್ನ ನೀಡದಂತೆ ಮಾಜಿ ಪತ್ನಿ ಹಾಗೂ ಸಹೋದರನನ್ನ ಶಾಶ್ವತವಾಗಿ ನಿರ್ಬಂಧಿಸುವಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಾರೆ.

2008ರಲ್ಲಿ ಸಹೋದರ ಶಂಶುದ್ದೀನ್​ರನ್ನು ನವಾಜುದ್ದೀನ್​ ತಮ್ಮ ಮ್ಯಾನೇಜರ್ ಆಗಿ ನೇಮಿಸಿದ್ದರು ಮತ್ತು ಹಣಕಾಸಿನ ಉಸ್ತುವಾರಿಯನ್ನ ನೀಡಿದ್ದರು. ಶಂಶುದ್ದೀನ್​ ತಮ್ಮ ಸಹೋದರನಿಗೆ ಮೋಸ ಮಾಡಿ ಆಸ್ತಿ ಖರೀದಿಸಿದ್ದರೂ ಎಂದು ತಿಳಿದು ಬಂದಿದೆ.

ತಮ್ಮ ಸಹೋದರ 21 ಕೋಟಿ ರೂಪಾಯಿ ಮೋಸ ಮಾಡಿರುವ ಬಗ್ಗೆ ನವಾಜ್​ ಪ್ರಶ್ನಿಸಿದ್ದಾಗ ನಟನ ವಿರುದ್ದ ಸುಳ್ಳು ದೂರು ದಾಖಲಿಸುವಂತೆ ಮಾಜಿ ಪತ್ನಿ ಆಲಿಯಾಗೆ ಕುಮ್ಮಕು ನೀಡಿದ್ದ ಎಂದು ನವಾಜುದ್ಧೀನ್​ ಪರ ವಕೀಲರು ನ್ಯಾಯಾಲಯಕ್ಕೆ ಸಲ್ಲಿಸಿರುವ ದಾವೆಯಲ್ಲಿ ಆರೋಪಿಸಿದ್ದಾರೆ.

ಪ್ರಕರಣದ ವಿಚಾರಣೆಯನ್ನು ಮಾರ್ಚ್​ 30ರಂದು ನ್ಯಾಯಮೂರ್ತಿ ರಿಯಾಜ್​ ಚಗ್ಲಾ ಅವರು ಇರುವ ಏಕಸದಸ್ಯ ಪೀಠ ವಿಚಾರಣೆ ನಡೆಸುವ ಸಾಧ್ಯತೆ ಇದೆ.