ನ್ಯೂಸ್

ಪಾಕಿಸ್ತಾನ ಸಾರ್ವತ್ರಿಕ ಚುನಾವಣೆ; ಮಾಜಿ ಪ್ರಧಾನಿ ನವಾಜ್​ ಷರೀಪ್​ ಪಕ್ಷಕ್ಕೆ ಗೆಲುವು

ನವದೆಹಲಿ: ಮಾಜಿ ಪ್ರಧಾನಿ ನವಾಜ್ ಷರೀಫ್ ನೇತೃತ್ವದ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (PMLN) ಪಕ್ಷವು ಸಾರ್ವತ್ರಿಕ ಚುನಾವಣೆಯಲ್ಲಿ ಅತಿದೊಡ್ಡ ಪಕ್ಷಾವಗಿ ಹೊರಹೊಮ್ಮುವ ಮೂಲಕ ಜಯಗಳಿಸಿದೆ ಎಂದು ತಿಳಿದು ಬಂದಿದೆ.

ಈ ಕುರಿತು ಸುದ್ದಿಗೋಷ್ಠಿ ನಡೆಸಿದ ನವಾಜ್​ ಷರೀಫ್​, ತಮ್ಮ ಮುಸ್ಲಿಂ ಲೀಗ್-ನವಾಜ್ (PMLN) ಪಕ್ಷವು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಸಾರ್ವತ್ರಿಕ ಚುನಾವಣೆಯಲ್ಲಿ ಜಯಗಳಿಸಿರುವುದಾಗಿ ಘೋಷಿಸಿದ್ಧಾರೆ.

ನಮಗೆ ಸ್ವಂತಬಲದ ಮೇಲೆ ಸರ್ಕಾರ ರಚಿಸಲು ಸಾಧ್ಯವಿಲ್ಲ. ಆದ್ದರಿಂದ ನಾನು ನಾವು ಇತರ ಪಕ್ಷಗಳನ್ನು ಸರ್ಕಾರ ರಚಿಸಲು ಆಹ್ವಾನಿಸುತ್ತೇವೆ. ನಾವು ಸಾರ್ವಜನಿಕರ ಆದೇಶವನ್ನು ಗೌರವಿಸುತ್ತೇವೆ ಗಾಯಗೊಂಡಿರುವ ಪಾಕಿಸ್ತಾನವನ್ನು ನಮ್ಮ ಆಡಳಿತದ ಮೂಲಕ ಗುಣಪಡಿಸುತ್ತೇವೆ ಎಂದು ನವಾಜ್​ ಷರೀಫ್​ ಹೇಳಿದ್ದಾರೆ.