ಬಾಳೆಹೊನ್ನೂರು ಸಮೀಪದ ಉಜ್ಜಯಿನಿ ಆದಿಶಕ್ತಿ ಬನ್ನಿ ಮಹಾಂಕಾಳಿ ಅಮ್ಮನವರ ದೇವಸ್ಥಾನದಲ್ಲಿ ನವರಾತ್ರಿ ಪೂಜಾ ಮಹೋತ್ಸವಕ್ಕೆ ಧರ್ಮಾಧಿಕಾರಿ ಯು.ಸಿ.ಗೋಪಾಲ ಗೌಡ ಧ್ವಜಾರೋಣ ನೆರವೇರಿಸಿ ಚಾಲನೆ ನೀಡಿದರು. 
ನ್ಯೂಸ್

ಉಜ್ಜಯಿನಿಯಲ್ಲಿ ನವರಾತ್ರಿ ಮಹೋತ್ಸವಕ್ಕೆ ಚಾಲನೆ

ಬಾಳೆಹೊನ್ನೂರು: ಸಮೀಪದ ಖಾಂಡ್ಯ ಹೋಬಳಿಯ ಶ್ರೀಕ್ಷೇತ್ರ ಉಜ್ಜಯಿನಿ ಆದಿಶಕ್ತಿ ಬನ್ನಿಮಹಾಂಕಾಳಿ ಮತ್ತು ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನದಲ್ಲಿ ನಡೆಯುವ ನವರಾತ್ರಿ ಪೂಜಾ ಮಹೋತ್ಸವಕ್ಕೆ ದೇವಸ್ಥಾನದ ಧರ್ಮಾಧಿಕಾರಿ ಯು.ಸಿ.ಗೋಪಾಲ ಗೌಡ ಭಾನುವಾರ ಧ್ವಜಾರೋಣ ನೆರವೇರಿಸಿ ಚಾಲನೆ ನೀಡಿದರು. ಉಜ್ಜಯಿನಿ ದೇವಸ್ಥಾನದಲ್ಲಿ ಅ.15ರಿಂದ 24ರವರೆಗೆ ನಡೆಯುವ ನವರಾತ್ರಿ ಪೂಜಾ ಮಹೋತ್ಸವದ ಪ್ರಯುಕ್ತ ಶ್ರೀದೇವಿಗೆ ಹಾಗೂ ಮಲ್ಲಿಕಾರ್ಜುನಸ್ವಾಮಿಗೆ ವಿಶೇಷ ಪೂಜೆ, ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುವುದು.
ಆಯುಧಪೂಜೆ ಹಾಗೂ ವಿಜಯದಶಮಿಯಂದು ದೇವಸ್ಥಾನದ ಆವರಣದಲ್ಲಿ ಕೆಂಡೋತ್ಸವ ನಡೆಯಲಿದೆ. ಪೂಜಾ ಕಾರ್ಯಕ್ರಮಗಳಲ್ಲಿ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಭಾಗವಹಿಸಬೇಕು ಎಂದು ಕೋರಿದ್ದಾರೆ.