ಚನ್ನಗಿರಿ: ಪ್ರಾಕೃತಿಕ ಸಂಪತ್ತು ನಮ್ಮ ಆಸ್ತಿ. ಅದನ್ನು ಉಳಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ. ಮರಗಿಡಗಳು ಮನುಷ್ಯನಿಗೆ ಬೇಕಾದ ಆಮ್ಲಜನಕ ಒದಗಿಸುವ ಶಕ್ತಿ ಇದ್ದು ಮನುಕುಲಕ್ಕೆ ಉಪಯೋಗವಾಗಿದೆ ಎಂದು ಶಾಸಕ ಶಿವಗಂಗಾ ಬಸವರಾಜ್ ತಿಳಿಸಿದರು.
ಇಲ್ಲಿನ ಇಂದಿರಾಗಾಂಧಿ ಕ್ಯಾಂಟೀನ್ ಆವರಣದಲ್ಲಿ ಬುಧವಾರ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಸಸಿ ನೆಟ್ಟು ಮಾತನಾಡಿದರು.
ಮರಗಿಡಗಳನ್ನು ಕಡಿದು ಹಾಕುವ ಕಾರಣದಿಂದ ಬರಗಾಲ, ನೀರಿನ ತೊಂದರೆ ಸೇರಿದಂತೆ ಅನೇಕ ಸಮಸ್ಯೆ ಬರಮಾಡಿಕೊಂಡಿದ್ದೇವೆ. ಮುಂದಿನ ದಿನದಲ್ಲಿ ತೊಂದರೆ ಅನುಭವಿಸಬೇಕಾಗುತ್ತದೆ.
ಕರೊನಾ ಸಮಯದಲ್ಲಿ ದೇಶದ ಎಲ್ಲ ಕಡೆಯಲ್ಲಿ ಆಕ್ಸಿಜನ್‌ಗಾಗಿ ಜನರು ಪರದಾಡಿರುವುದನ್ನು ಕಣ್ಣಾರೆ ಕಂಡಿದ್ದೇವೆ. ಅದಕ್ಕೆ ಕಾರಣ ಆಮ್ಲಜನಕ ನೀಡುವಂತಹ ಮರಗಳನ್ನು ಕಡಿದು ಹಾಕಿರುವುದು ಎಂದರು.
ತಹಸೀಲ್ದಾರ್ ಪಿ.ಐ. ಯರ‌್ರಿಸ್ವಾಮಿ, ತಾಪಂ ಕಾರ್ಯನಿರ್ವಹಣಾಧಿಕಾರಿ ಉತ್ತಮ್, ವಲಯ ಅರಣ್ಯಾಧಿಕಾರಿ ಸತೀಶ್, ಮಾವಿನಕಟ್ಟೆ ಅರಣ್ಯಾಧಿಕಾರಿ ಜಗದೀಶ್, ಪುರಸಭೆ ಮುಖ್ಯಾಧಿಕಾರಿ ಕೆ.ಪರಮೇಶ್ ಇದ್ದರು.