Net banking app (ಚಿತ್ರ Instagram) 
ದೇಶ

ಖಾಸಗಿತನ vs ಸುರಕ್ಷತೆ: ನೆಟ್ ಬ್ಯಾಂಕಿಂಗ್ ಅಪ್ಲಿಕೇಶನ್‌ಗಳ ಅಸಲಿ ಮುಖವಾಡ ಕಳಚಿದ ನಿತಿನ್ ಕಾಮತ್! Net banking app

Net banking app: ಸ್ಮಾರ್ಟ್‌ಫೋನ್‌ಗಳಲ್ಲಿ ಕಾರ್ಯನಿರ್ವಹಿಸುವ ನೆಟ್ ಬ್ಯಾಂಕಿಂಗ್ ಅಪ್ಲಿಕೇಶನ್‌ಗಳು ಬಳಕೆದಾರರ ಖಾಸಗಿತನಕ್ಕೆ, ಧಕ್ಕೆ ತರುತ್ತಿವೆ ಮತ್ತು ಅವುಗಳು ಕೇಳುವ ಅನುಮತಿಗಳು ಆಕ್ರಮಣಕಾರಿಯಾಗಿವೆ ಎಂದು ಜೆರೋಧಾದ ಸಹ-ಸಂಸ್ಥಾಪಕ ನಿತಿನ್ ಕಾಮತ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಸದ್ಯ ಹಣಕಾಸು ಮತ್ತು ತಂತ್ರಜ್ಞಾನ ವಲಯದಲ್ಲಿ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ. 

ಪೋಸ್ಟ್​ನಲ್ಲೇನಿದೆ?

ನನ್ನ ಫೋನ್‌ನಲ್ಲಿ ನಾನು ನೆಟ್ ಬ್ಯಾಂಕಿಂಗ್ ಅಪ್ಲಿಕೇಶನ್‌ಗಳನ್ನು ಬಳಸುವುದಿಲ್ಲ ಏಕೆಂದರೆ ಅವರು ಕೇಳುವ ಕಡ್ಡಾಯ ಅನುಮತಿಗಳಿಗೆ ಯಾವುದೇ ಅರ್ಥವಿಲ್ಲ ಎಂದು ನಿತಿನ್ ಕಾಮತ್ ಸ್ಪಷ್ಟಣೆ ನೀಡಿದ್ದಾರೆ. 
ಆದಾಗ್ಯೂ, ಭದ್ರತೆಯ ಹೆಸರಿನಲ್ಲಿ ಬ್ಯಾಂಕಿಂಗ್ ಆ್ಯಪ್‌ಗಳಿಗೆ ನನ್ನ SMS, ಫೋನ್ ಮತ್ತು ಸಂಪರ್ಕಗಳ  ಪ್ರವೇಶ ಏಕೆ ಬೇಕು? ವಾಸ್ತವವಾಗಿ, ಇಂತಹ ಆಕ್ರಮಣಕಾರಿ ಅನುಮತಿಗಳನ್ನು ಕೇಳದಿರುವುದೇ ಸೈಬರ್ ಸುರಕ್ಷತೆಯ ಜಾಗತಿಕ ಮಾನದಂಡ. ಇದನ್ನು 'ಪ್ರಿನ್ಸಿಪಲ್ ಆಫ್ ಲೀಸ್ಟ್ ಪ್ರಿವಿಲೇಜ್'  ಎಂದು ಕರೆಯಲಾಗುತ್ತದೆ ಎಂದರು. 
ಬೇರೆಯವರು ನಿನಗೆ ಏನು ಮಾಡಬಾರದು ಎಂದು ನೀವು ಬಯಸುತ್ತೀರೋ, ಅದನ್ನೇ ನೀನು ಬೇರೆಯವರಿಗೆ ಮಾಡಬೇಡ ಎಂಬುದು ಜೆರೋಧಾ ತತ್ವಶಾಸ್ತ್ರದ ಹೃದಯಭಾಗದಲ್ಲಿದೆ.
ಇದೇ ಕಾರಣಕ್ಕಾಗಿಯೇ ನಾವು ಜೆರೋಧಾವನ್ನು ಈ ರೀತಿ ರೂಪಿಸಿದ್ದೇವೆ. ಉದಾಹರಣೆಗೆ, ನಮ್ಮ 'ಕೈಟ್' ಅಪ್ಲಿಕೇಶನ್ ಮೊಬೈಲ್‌ನಲ್ಲಿ ಯಾವುದೇ ಅನುಮತಿಗಳನ್ನು ಕೇಳುವುದಿಲ್ಲ. ಲಕ್ಷಾಂತರ ಜನರು ನಮ್ಮನ್ನು ನಂಬಲು ಇದು ಒಂದು ಪ್ರಮುಖ ಕಾರಣವಾಗಿದೆ. ಆದಾಗ್ಯೂ, ಸೆಬಿಯ (SEBI) ಕಡ್ಡಾಯವಾದ ಬಲವಾದ ದ್ವಿ-ಅಂಶ ದೃಢೀಕರಣದ ಚೌಕಟ್ಟು, ಸುರಕ್ಷತೆ ಮತ್ತು ಖಾಸಗಿತನದ ನಡುವೆ ಸರಿಯಾದ ಸಮತೋಲನವನ್ನು ಸಾಧಿಸಲು ನಮಗೆ ಸಹಾಯ ಮಾಡಿದೆ ಎಂದು ಬರದು ಪೋಸ್ಟ್ ಮಾಡಿದ್ದಾರೆ. 
ಕಾಮತ್​ ಅವರ ಈ ಪೋಸ್ಟ್ ವೈರಲ್​ ಆಗುತ್ತಿದ್ದಂತೆಯೇ ಅನೇಕ ಬಳಕೆದಾರರು ಈ ಮೌಲ್ಯಮಾಪನವನ್ನು ಒಪ್ಪಿಕೊಂಡರು. ಇನ್ನು ಕೆಲವರು ಸುರಕ್ಷತೆ ಮತ್ತು ದುರ್ಬಲತೆಯ ಅಪಾಯಗಳನ್ನು ಗಮನದಲ್ಲಿಟ್ಟುಕೊಂಡು ಅನುಮತಿಗಳನ್ನು ವಿನ್ಯಾಸಗೊಳಿಸಲಾಗಿದೆ ಎಂದು ಅಭಿಪ್ರಾಯ ಪಟ್ಟರು.
ಫಿನ್‌ಟೆಕ್‌ನಲ್ಲಿ 8 ವರ್ಷಗಳ ಅನುಭವ ಹೊಂದಿರುವ ಬಳಕೆದಾರರೊಬ್ಬರು ಈ ಪೋಸ್ಟ್​ಗೆ ಪ್ರತಿಕ್ರಿಯಿಸಿದ್ದು, ಐಒಎಸ್ ಡೆವಲಪರ್ ಆಗಿ ಇದು ತೀವ್ರ ಪರಿಣಾಮವನ್ನು ಬೀರುತ್ತದೆ.  ಎಸ್‌ಎಂಎಸ್, ಸಂಪರ್ಕಗಳು ಮತ್ತು ಕರೆ ದಾಖಲೆಗಳನ್ನು ಕೇಳುವ ಬ್ಯಾಂಕಿಂಗ್ ಅಪ್ಲಿಕೇಶನ್‌ಗಳು ಗೌಪ್ಯತೆಯನ್ನು ಹೊಂದಿರುವುದಿಲ್ಲ ಎಂದು ಅಭಿಪ್ರಾಯ ಸೂಚಿಸಿದ್ದಾರೆ (ಏಜೆನ್ಸೀಸ್).