YouTube  
ದೇಶ

ಮಂಗನ ಆಟಕ್ಕೆ ಜಗತ್ತೇ ಫಿದಾ: ವರ್ಷಕ್ಕೆ 38 ಕೋಟಿ ರೂ. ಗಳಿಸುತ್ತೆ ಈ ಯೂಟ್ಯೂಬ್ ಚಾನೆಲ್​​ನ AI ವಿಡಿಯೋಗಳು..!

ಪ್ರಮುಖ ಮುಖ್ಯಾಂಶಗಳು

  • 'ಎಐ ಸ್ಲಾಪ್' (AI Slop) ಈಗ ಜಾಗತಿಕವಾಗಿ ಇದೀಗ ಭಾರಿ ಸದ್ದು ಮಾಡುತ್ತಿವೆ...
  • ಬಂದರ್ ಅಪ್ನಾ ದೋಸ್ಟ್' (Bandar Apna Dost) ಎಂಬ ಚಾನೆಲ್ ವಿಶ್ವದಲ್ಲೇ ಅತಿ ಹೆಚ್ಚು ವೀಕ್ಷಣೆ
  • ಈ ಚಾನೆಲ್ ವರ್ಷಕ್ಕೆ 38 ಕೋಟಿ ರೂ. ಆದಾಯ ಗಳಿಸುತ್ತಿದೆ ಎಂದು ವರದಿಯಾಗಿದೆ..
ನವದೆಹಲಿ: ಭಾರತದ ಯೂಟ್ಯೂಬ್ ಲೋಕದಲ್ಲಿ ಎಐ (Artificial Intelligence) ತಂತ್ರಜ್ಞಾನವನ್ನು ಬಳಸಿ ಸೃಷ್ಟಿಸಲಾದ ಕನಿಷ್ಠ ಗುಣಮಟ್ಟದ ವಿಡಿಯೋಗಳು ಅಥವಾ 'ಎಐ ಸ್ಲಾಪ್' (AI Slop) ಈಗ ಜಾಗತಿಕವಾಗಿ ಭಾರಿ ಸದ್ದು ಮಾಡುತ್ತಿವೆ. 
ಹೌದು, ಇತ್ತೀಚಿನ ವರದಿಯೊಂದರ ಪ್ರಕಾರ, ಭಾರತದ 'ಬಂದರ್ ಅಪ್ನಾ ದೋಸ್ಟ್' (Bandar Apna Dost) ಎಂಬ ಚಾನೆಲ್ ವಿಶ್ವದಲ್ಲೇ ಅತಿ ಹೆಚ್ಚು ವೀಕ್ಷಣೆ ಪಡೆದ ಎಐ ಸ್ಲಾಪ್ ಚಾನೆಲ್ ಆಗಿ ಹೊರಹೊಮ್ಮಿದ್ದು, ವರ್ಷಕ್ಕೆ 38 ಕೋಟಿ ರೂ. ಆದಾಯ ಗಳಿಸುತ್ತಿದೆ ಎಂದು ವರದಿಯಾಗಿದೆ.
ವರ್ಷಕ್ಕೆ 38 ಕೋಟಿ ರೂ. ಆದಾಯ!
ವಿಡಿಯೋ ಎಡಿಟಿಂಗ್ ಸಂಸ್ಥೆ 'Kapwing' ಬಿಡುಗಡೆ ಮಾಡಿದ ವರದಿಯ ಪ್ರಕಾರ, 'ಬಂದರ್ ಅಪ್ನಾ ದೋಸ್ಟ್' ಚಾನೆಲ್ ವಾರ್ಷಿಕವಾಗಿ ಸುಮಾರು 4.25 ಮಿಲಿಯನ್ ಡಾಲರ್ (ಅಂದಾಜು 35 ರಿಂದ 38 ಕೋಟಿ ರೂಪಾಯಿ) ಆದಾಯ ಗಳಿಸುತ್ತಿದೆ ಎಂದು ಅಂದಾಜಿಸಲಾಗಿದೆ. ಈ ಚಾನೆಲ್‌ನಲ್ಲಿ ಮನುಷ್ಯನಂತೆ ವರ್ತಿಸುವ ಕೋತಿ ಪಾತ್ರಗಳ ಎಐ ವಿಡಿಯೋಗಳನ್ನು ಪ್ರಸಾರ ಮಾಡಲಾಗುತ್ತದೆ.

ವಿಶ್ವದಲ್ಲೇ ನಂ.1 ಸ್ಥಾನ

ಈ ಭಾರತೀಯ ಚಾನೆಲ್ ಜಾಗತಿಕ ಮಟ್ಟದಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದ ಎಐ ಕಂಟೆಂಟ್ ಚಾನೆಲ್ ಆಗಿದೆ. ಇದುವರೆಗೆ ಈ ಚಾನೆಲ್ 2.4 ಬಿಲಿಯನ್ (240 ಕೋಟಿ) ಗೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ. ಅಮೆರಿಕ, ಸ್ಪೇನ್ ಮತ್ತು ಪಾಕಿಸ್ತಾನದಂತಹ ದೇಶಗಳ ಎಐ ಚಾನೆಲ್‌ಗಳನ್ನು ಹಿಂದಿಕ್ಕಿ ಭಾರತದ ಈ ಚಾನೆಲ್ ಅಗ್ರಸ್ಥಾನಕ್ಕೇರಿದೆ.

ಏನಿದು 'ಎಐ ಸ್ಲಾಪ್' (AI Slop)?

ಕೃತಕ ಬುದ್ಧಿಮತ್ತೆಯನ್ನು ಬಳಸಿ ಅತ್ಯಂತ ಕಡಿಮೆ ಶ್ರಮದಲ್ಲಿ, ಅತಿ ವೇಗವಾಗಿ ತಯಾರಿಸಲಾಗುವ ವಿಡಿಯೋಗಳನ್ನು 'ಎಐ ಸ್ಲಾಪ್' ಎಂದು ಕರೆಯಲಾಗುತ್ತದೆ. ಇವುಗಳಲ್ಲಿ ಕಥೆ ಅಥವಾ ಸೃಜನಶೀಲತೆಗಿಂತ ವೀಕ್ಷಕರನ್ನು ಸೆಳೆಯುವ (Engagement) ಅಂಶಗಳೇ ಹೆಚ್ಚಿರುತ್ತವೆ. ವರದಿಯ ಪ್ರಕಾರ, ಯೂಟ್ಯೂಬ್ ಶಿಫಾರಸು ಮಾಡುವ (Recommendations) ಪ್ರತಿ 5 ವಿಡಿಯೋಗಳಲ್ಲಿ ಒಂದು ವಿಡಿಯೋ ಇಂತಹ ಎಐ ಸ್ಲಾಪ್ ವರ್ಗಕ್ಕೆ ಸೇರಿರುತ್ತದೆ.
ಯೂಟ್ಯೂಬ್‌ನ ನಿಯಮಗಳ ಪ್ರಕಾರ ಎಐ ಸ್ಲಾಪ್ ವಿಡಿಯೋಗಳು ನೇರ ಹಣಗಳಿಕೆಗೆ (Monetization) ಅರ್ಹವಲ್ಲದಿದ್ದರೂ, ಬ್ರ್ಯಾಂಡ್ ಡೀಲ್ ಹಾಗೂ ಇತರ ಮಾರ್ಗಗಳ ಮೂಲಕ ಈ ಚಾನೆಲ್‌ಗಳು ಭಾರಿ ಲಾಭ ಮಾಡುತ್ತಿವೆ,(ಏಜೆನ್ಸೀಸ್​).