ಹೊಸ ಯೂಟ್ಯೂಬರ್‌ಗಳಿಗೆ ಬಿಗ್ ಶಾಕ್: ಮಾನಿಟೈಸೇಶನ್ ನಿಯಮಗಳಲ್ಲಿ ಭಾರಿ ಬದಲಾವಣೆ, ಇನ್ಮುಂದೆ ಹಣ ಗಳಿಕೆ ಸುಲಭವಲ್ಲ! YouTube Monetization Rules 2027
- ಹೊಸ ಯೂಟ್ಯೂಬರ್‌ಗಳಿಗೆ ಆಘಾತ ನೀಡಿ ಮಾನಿಟೈಸೇಶನ್ ನಿಯಮಗಳನ್ನು ದುಪ್ಪಟ್ಟುಗೊಳಿಸಿದ ಯೂಟ್ಯೂಬ್
- 2027ರ ಫೆಬ್ರವರಿ 1ರಿಂದ ಯೂಟ್ಯೂಬ್ ಪಾಲುದಾರಿಕೆ ಕಾರ್ಯಕ್ರಮದ ಹೊಸ ಕಠಿಣ ಮಾನದಂಡಗಳು ಜಾರಿಗೆ ಬರಲಿವೆ
- ಚಾನೆಲ್ ಮಾನಿಟೈಸೇಶನ್‌ಗೆ ಇನ್ನು ಮುಂದೆ 8000 ಗಂಟೆಗಳ ವಾಚ್ ಟೈಮ್ ಅಥವಾ 2 ಕೋಟಿ ಶಾರ್ಟ್ಸ್ ವೀವ್ಸ್ ಕಡ್ಡಾಯ
- ಈ ಹೊಸ ನಿಯಮಗಳಿಂದ ಈಗಾಗಲೇ ಯೂಟ್ಯೂಬ್ ಪಾಲುದಾರಿಕೆ ಕಾರ್ಯಕ್ರಮದಲ್ಲಿರುವ ಹಳೆಯ ಸೃಷ್ಟಿಕರ್ತರಿಗೆ ವಿನಾಯಿತಿ ನೀಡಲಾಗಿದೆ
YouTube Monetization Rules 2027 : ಯೂಟ್ಯೂಬ್‌ನಲ್ಲಿ ವಿಡಿಯೋಗಳನ್ನು ಮಾಡಿ ಹಣ ಸಂಪಾದಿಸಬೇಕೆಂದು ಕನಸು ಕಾಣುತ್ತಿರುವ ಹೊಸ ಕಂಟೆಂಡ್ ಕ್ರಿಯೇಟರ್ಗಳಿಗೆ ಯೂಟ್ಯೂಬ್ ಕಂಪನಿಯು ದೊಡ್ಡ ಆಘಾತ ನೀಡಿದ್ದು, ಮಾನಿಟೈಸೇಶನ್ ಮಾನದಂಡಗಳನ್ನು ಗಣನೀಯವಾಗಿ ಕಠಿಣಗೊಳಿಸಿದೆ.
2027ರ ಫೆಬ್ರವರಿ 1ರಿಂದ ಜಾರಿಗೆ ಬರುವಂತೆ ಯೂಟ್ಯೂಬ್ ಪಾಲುದಾರಿಕೆ ಕಾರ್ಯಕ್ರಮದ (YPP) ನಿಯಮಗಳನ್ನು ಬದಲಾಯಿಸಲಾಗಿದ್ದು, ಇನ್ನು ಮುಂದೆ ಆದಾಯ ಗಳಿಸಲು ಹೊಸಬರು ಹಿಂದೆಂದಿಗಿಂತಲೂ ದುಪ್ಪಟ್ಟು ಶ್ರಮಪಡಬೇಕಾದ ಅನಿವಾರ್ಯತೆ ಎದುರಾಗಿದೆ.
ಹೊಸ ನಿಯಮಗಳ ಪ್ರಕಾರ, ಚಾನೆಲ್ ಮಾನಿಟೈಸೇಶನ್ ಪಡೆಯಲು ಇನ್ನು ಮುಂದೆ 1,000 ಸಬ್ಸ್ಕ್ರೈಬರ್ಸ್ ಜತೆಗೆ ಕಳೆದ 12 ತಿಂಗಳುಗಳಲ್ಲಿ ಕನಿಷ್ಠ 8,000 ಗಂಟೆಗಳ ವಾಚ್ ಟೈಮ್ ಅಥವಾ ಕಳೆದ 90 ದಿನಗಳಲ್ಲಿ 2 ಕೋಟಿ (20 ಮಿಲಿಯನ್) ಶಾರ್ಟ್ಸ್ ವೀಕ್ಷಣೆಗಳನ್ನು ಗಳಿಸುವುದು ಕಡ್ಡಾಯವಾಗಿದೆ.
ಆದಾಗ್ಯೂ, ಈಗಾಗಲೇ ಯೂಟ್ಯೂಬ್ ಪಾಲುದಾರಿಕೆ ಕಾರ್ಯಕ್ರಮದ (YPP) ಮೂಲಕ ಆದಾಯ ಗಳಿಸುತ್ತಿರುವ ಹಳೆಯ ಕ್ರಿಯೇಟರ್ಗಳಿಗೆ ಈ ಹೊಸ ನಿಯಮಗಳಿಂದ ವಿನಾಯಿತಿ ನೀಡಲಾಗಿದ್ದು, ಅವರಿಗೆ ಯಾವುದೇ ತೊಂದರೆಯಾಗುವುದಿಲ್ಲ.
ಯೂಟ್ಯೂಬ್‌ನ 'ಶಾರ್ಟ್ಸ್ ಕ್ರಿಯೇಟರ್ ಪೂಲ್' (Shorts Creator Pool) ಮೂಲಕ ಕ್ರಿಯೇಟರ್ಗಳು ನಿರಂತರವಾಗಿ ಆದಾಯ ಗಳಿಸಬೇಕಾದರೆ, ಪ್ರತಿ 90 ದಿನಗಳ ಅವಧಿಯಲ್ಲಿ ಕನಿಷ್ಠ 1 ಕೋಟಿ (10 ಮಿಲಿಯನ್) ಶಾರ್ಟ್ಸ್ ವೀಕ್ಷಣೆಗಳನ್ನು ಕಡ್ಡಾಯವಾಗಿ ಕಾಯ್ದುಕೊಳ್ಳಬೇಕು ಎಂದು ಯೂಟ್ಯೂಬ್ ಸ್ಪಷ್ಟಪಡಿಸಿದೆ. ಒಂದು ವೇಳೆ ವೀಕ್ಷಣೆಗಳು ಈ ಮಿತಿಗಿಂತ ಕಡಿಮೆಯಾದರೆ, ಅವರ ಶಾರ್ಟ್ಸ್ ಆದಾಯ ಮಾತ್ರ ತಾತ್ಕಾಲಿಕವಾಗಿ ನಿಲ್ಲುತ್ತದೆ, ಆದರೆ ಲಾಂಗ್‌ಫಾರ್ಮ್ ವಿಡಿಯೋಗಳ ಮೂಲಕ ಬರುವ ಆದಾಯವು ಎಂದಿನಂತೆ ಮುಂದುವರಿಯಲಿದೆ.
ಶಾರ್ಟ್ಸ್ ವೀಕ್ಷಣೆಗಳು ಮತ್ತೆ 1 ಕೋಟಿ ಗಡಿ ದಾಟಿದ ಕೂಡಲೇ ಶಾರ್ಟ್ಸ್ ಆದಾಯವು ಮರುಸ್ಥಾಪನೆಯಾಗಲಿದೆ. ಪ್ರಸ್ತುತ ಯೂಟ್ಯೂಬ್‌ನಲ್ಲಿ ಪ್ರತಿದಿನ 200 ಬಿಲಿಯನ್‌ಗಿಂತ ಅಧಿಕ ಶಾರ್ಟ್ಸ್ ವೀಕ್ಷಣೆಗಳು ದಾಖಲಾಗುತ್ತಿದ್ದು, ಟಿವಿಯಲ್ಲಿಯೂ ಪ್ರತಿದಿನ ಒಂದು ಬಿಲಿಯನ್ ಗಂಟೆಗಳಿಗೂ ಹೆಚ್ಚು ವಾಚ್ ಟೈಮ್ ದಾಖಲಾಗುತ್ತಿದೆ. ಈ ವೇಗದ ಬೆಳವಣಿಗೆಗೆ ತಕ್ಕಂತೆ ಯೂಟ್ಯೂಬ್ ತನ್ನ ನಿಯಮಗಳಲ್ಲಿ ಬದಲಾವಣೆ ಮಾಡಿದ್ದು, ಇದು ಹೊಸ ಕ್ರಿಯೇಟರ್ಗಳಿಗೆ ಮಾನಿಟೈಸೇಶನ್ ಪಡೆಯುವುದನ್ನು ಅತ್ಯಂತ ಕಷ್ಟಕರವಾಗಿಸಲಿದೆ.
ಅದೇ ಸಮಯದಲ್ಲಿ, ಯೂಟ್ಯೂಬ್ ಪ್ರೀಮಿಯಂ ಲಭ್ಯವಿರುವ ಎಲ್ಲ ದೇಶಗಳಿಗೂ ತನ್ನ ಕಡಿಮೆ ವೆಚ್ಚದ 'ಪ್ರೀಮಿಯಂ ಲೈಟ್' (Premium Lite) ಚಂದಾದಾರಿಕೆಯನ್ನು ವಿಸ್ತರಿಸುವುದಾಗಿ ಘೋಷಿಸಿದೆ. ಈ ಚಂದಾದಾರಿಕೆಯಿಂದ ಬರುವ ಆದಾಯದಲ್ಲಿಯೂ ಸೃಷ್ಟಿಕರ್ತರಿಗೆ ಪಾಲು ಸಿಗಲಿದ್ದು, ವಾಚ್ ಟೈಮ್ ಮತ್ತು ವೀಕ್ಷಣೆಗಳ ಆಧಾರದ ಮೇಲೆ ಯೂಟ್ಯೂಬ್ ಒಟ್ಟು ಆದಾಯದಲ್ಲಿ ಶೇ. 55ರಷ್ಟನ್ನು ಲಾಂಗ್‌ಫಾರ್ಮ್ ವಿಡಿಯೋ ಸೃಷ್ಟಿಕರ್ತರಿಗೆ ಹಾಗೂ ಶೇ. 45ರಷ್ಟನ್ನು ಶಾರ್ಟ್ಸ್ ಸೃಷ್ಟಿಕರ್ತರಿಗೆ ಹಂಚಿಕೆ ಮಾಡಲಿದೆ, (ಏಜೆನ್ಸೀಸ್).