ಮಾಜಿ ಸಿಎಂ ಇಪಿಎಸ್ ಮತ್ತು ದಳಪತಿ ವಿಜಯ್
ಚೆನ್ನೈ: ತಮಿಳುನಾಡಿನಲ್ಲಿ ಹೊಸ ಟಿವಿಕೆ ಪಕ್ಷ ಪಟ್ಟಿ ರಾಜಕಾರಣಕ್ಕೆ ಧುಮುಕಿ ಏಕಾಂಗಿ ಏಕಾಂಗಿಯಾಗಿ ಸ್ಪರ್ಧಿಸಿರುವ ನಟ ದಳಪತಿ ವಿಜಯ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿರುವ ಮಾಜಿ ಸಿಎಂ ಮತ್ತು ಎಐಎಡಿಎಂಕೆ ಮುಖ್ಯಸ್ಥ ಎಡಪ್ಪಾಡಿ ಪಳನಿಸ್ವಾಮಿ, ಯುವಕರು ಸಿನಿಮಾ ಮತ್ತು ವಾಸ್ತವದ ನಡುವಿನ ವ್ಯತ್ಯಾಸವನ್ನು ಅರಿಯಬೇಕು. ಬುದ್ಧಿವಂತಿಕೆಯಿಂದ ಮತ ನೀಡಬೇಕು ಎಂದಿದ್ದಾರೆ.
ತಾಂಬರಂ ಕ್ಷೇತ್ರದಲ್ಲಿ ಪ್ರಚಾರ ನಡೆಸುವ ವೇಳೆ ಮಾತನಾಡಿರುವ ಅವರು, ಸಿನಿಮಾವನ್ನಿ ನೋಡಬೇಕು, ಆನಂದಿಸಬೇಕು ಹಾಗೂ ಅದು ಮನರಂಜನೆಯಾಗಿಯೇ ಉಳಿಯಬೇಕು. ಅದನ್ನು ನಿಜ ಜೀವನದೊಂದಿಗೆ ಸೇರಿಸಿ ರಾಜಕೀಯವನ್ನು ಗೊಂದಲಗೊಳಿಸಬಾರದು. ಸಿನಿಮಾ ಕನಸಿನಂತೆ, ಅದು ಇರುವವರೆಗೆ ಆಕರ್ಷಕವಾಗಿರುತ್ತದೆ. ಆದರೆ ರಂಗಭೂಮಿಯಿಂದ ಹೊರಬಂದ ಕ್ಷಣದಲ್ಲಿ ಅದು ಕಣ್ಮರೆಯಾಗುತ್ತದೆ ಎಂದಿದ್ದಾರೆ.
ಜನ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ಸಾಂತ್ವನ ಹೇಳಲು ಹೋಗುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ದುಃಖಿತರನ್ನು ತನ್ನ ಸ್ಥಳಕ್ಕೆ ಕರೆಸಿಕೊಂಡು ಸಹಾನುಭೂತಿ ಹೇಳುತ್ತಾನೆ. ಸಿನಿಮಾ ಕೆಲಸ ಮಾಡುವುದೇ ಹೀಗೆ ಎಂದು ಕರೂರ್ ಘಟನೆಯ ಸಂತ್ರಸ್ತರನ್ನು ವಿಜಯ್ ಭೇಟಿಯಾದ ರೀತಿಯನ್ನು ಉಲ್ಲೇಖಿಸಿ ಕಿಡಿಕಾರಿದ್ದಾರೆ.
ಡಿಎಂಕೆ ಅದರ ಮಿತ್ರಪಕ್ಷಗಳು 25 ದಿನಗಳ ಕಾಲ ಮಾತುಕತೆ ನಡೆಸಿದ ಬಳಿಕವೂ ಸೀಟು ಹಂಚಿಕೆ ಮತ್ತು ಕ್ಷೇತ್ರ ಗುರುತಿಸಲು ಹೆಣಗಾಡುತ್ತಿವೆ. ಆದರೆ ನಮ್ಮ ಪಕ್ಷ ನಾಲ್ಕೇ ದಿನಗಳಲ್ಲೇ ಪ್ರಕ್ರಿಯೆಯನ್ನು ಪೂರ್ಣಗೊಳಿಸಿತು. ಕಳೆದ ಐದು ವರ್ಷಗಳಿಂದ ಡಿಎಂಕೆ ಜೊತೆಗಿರುವ ಮೈತ್ರಿ ಪಕ್ಷಗಳು ಜನರ ಸಮಸ್ಯೆಗಳನ್ನು ಎತ್ತುವಲ್ಲಿ ವಿಫಲವಾದ ಕಾರಣ, ತಮ್ಮ ಜನಪ್ರಿಯತೆಯನ್ನು ಕಳೆದುಕೊಂಡಿದ್ದಾರೆ. ಮತ್ತು ಇದು ಅವರ ಸೀಟು ಹಂಚಿಕೆಯನ್ನು ಕಡಿಮೆ ಮಾಡಲು ಕಾರಣವಾಗಿದೆ ಎಂದು ಪ್ರತಿಪಾದಿಸಿದ್ದಾರೆ (ಏಜೆನ್ಸೀಸ್).