ದೇಶದ ಭವಿಷ್ಯಕ್ಕಿಂತ ನಿಮ್ಮ ಮುಖವೇ ಉಜ್ವಲಿಸುತ್ತಿದೆ: ಅಭಿಜಿತ್ ದೀಪ್ಕೆ ವ್ಯಂಗ್ಯ
- ವಿದ್ಯಾರ್ಥಿಗಳನ್ನು ಉದ್ದೇಶಿಸಿ ಸೆಲ್ಫಿ ವಿಡಿಯೋ ಮಾಡಿದ ಪ್ರಧನಿ ಮೋದಿ
- ದೇಶದ ಭವಿಷ್ಯಕ್ಕಿಂತ ನಿಮ್ಮ ಮುಖವೇ ಉಜ್ವಲಿಸುತ್ತಿದೆ: ಅಭಿಜಿತ್ ದೀಪ್ಕೆ ವ್ಯಂಗ್ಯ
- ಪರೀಕ್ಷಾ ಅಕ್ರಮ ಮಾಫಿಯಾವನ್ನು ಕೊನೆಗೊಳಿಸುವುದಾಗಿ ಪ್ರಧಾನಿ ಭರವಸೆ
ಮುಂಬೈ: ಇತ್ತೀಚೆಗೆ ದೆಹಲಿಯ ಜಂತರ್-ಮಂತರ್ನಲ್ಲಿ ನೀಟ್ ಪರೀಕ್ಷೆಯಲ್ಲಿ ನಡೆದ ಅಕ್ರಮವನ್ನು ವಿರೋಧಿಸಿ ಕಾಕ್ರೋಚ್ ಜನತಾ ಪಾರ್ಟಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಈ ಪ್ರತಿಭಟನೆಯ ತೀವ್ರತೆಯನ್ನು ಅರಿತ ಕೇಂದ್ರ ಸರ್ಕಾರ ಶಿಕ್ಷಣ ಸಚಿವರ ರಾಜೀನಾಮೆಯನ್ನು ಸ್ವೀಕರಿ, ಪರೀಕ್ಷೆಗಳಲ್ಲಿ ಅಕ್ರಮವನ್ನು ತಡೆಯಲು ನೂತನ ಮಸೂದೆಯನ್ನು ಲೋಕಸಭೆಯಲ್ಲಿ ಅಂಗೀಕಾರವನ್ನು ಕೂಡ ಮಾಡಿದೆ.
ಹೀಗಾಗಿ ಸರ್ಕಾರ, ದೇಶದ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಏನೇನು ಕ್ರಮ ಕೈಗೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೆಲ್ಫಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಈ ವಿಡಿಯೋಗೆ ಸಿಜೆಪಿ ಸ್ಥಾಪಕ ಅಭಿಜಿತ್ ದೀಪ್ಕೆ (Abhijith Dipke on PM Modi Selfie Video) ವ್ಯಂಗ್ಯವಾಡಿದ್ದಾರೆ.
ಪೇಪರ್ ಲೀಕ್ ಮಾಫಿಯಾವನ್ನು ಕೊನೆಗೊಳಿಸುತ್ತೇವೆ!
ಲೋಕಸಭೆಯಲ್ಲಿ ಮಸೂದೆ ಅಂಗೀಕಾರವಾಗುತ್ತಿದ್ದಂತೆ ಗುರುವಾರ ರಾತ್ರಿ ವಿಡಿಯೋ ಸಂದೇಶವನ್ನು ಹಂಚಿಕೊಂಡಿರುವ ಪ್ರಧಾನಿ ಮೋದಿ, ನಾವು ದೇಶದ ಶಿಕ್ಷಣ ವ್ಯವಸ್ಥೆಯನ್ನು ಸದೃಢಗೊಳಿಸುವಲ್ಲಿ ಕಾರ್ಯಪ್ರವರ್ತರಾಗಿದ್ದೇವೆ. ಈಗಾಗಲೇ ಕಠಿಣ ಕಾನೂನನ್ನು ಲೋಕಸಭೆಯಲ್ಲಿ ಅಂಗೀಕಾರ ಪಡೆಯಲಾಗಿದೆ.
ಹಾಗೆಯೇ, ಈ ಪರೀಕ್ಷಾ ಅಕ್ರಮದಲ್ಲಿ ಭಾಗಿಯಾದ ಹಲವರನ್ನು ಈಗಾಗಲೇ ಬಂಧಿಸಲಾಗಿದೆ, ಮತ್ತು ಈ ಪೇಪರ್ ಲೀಕ್ ಮಾಫಿಯಾವನ್ನು ನಾವು ಸಂಪೂರ್ಣವಾಗಿ ನಾಶ ಮಾಡುತ್ತೇವೆ, ಅದಕ್ಕಾಗಿ ಫಾಸ್ಟ್ ಟ್ರ್ಯಾಕ್ ಕೋರ್ಟ್ ಸ್ಥಾಪನೆ, ಸಿಬಿಐ ವಿಚಾರಣೆ ಸೇರಿದಂತೆ ಎಲ್ಲಾ ರೀತಿಯ ಕ್ರಮಗಳನ್ನು ನಾವು ಕೈಗೊಂಡಿದ್ದೆವೆ. ಆದಷ್ಟು ಬೇಗ ಈ ಪ್ರಕರಣದಲ್ಲಿ ಅಪರಾಧ ಎಸೆಗಿದವರಿಗೆ ಕಾನೂನಾತ್ಮಕವಾಗಿ ಕಠಿಣ ಶಿಕ್ಷೆ ದೊರೆಯಲಿದೆ ಎಂದು ಪ್ರಧಾನಿ ವಿಡಿಯೋ ಸಂದೇಶದಲ್ಲಿ ಹಂಚಿಕೊಂಡಿದ್ದರು.
ದೇಶದ ಭವಿಷ್ಯಕ್ಕಿಂತ ನಿಮ್ಮ ಮುಖವೇ ಉಜ್ವಲಿಸುತ್ತಿದೆ!
ಈಗ ಈ ವಿಡಿಯೋಗೆ ಪ್ರತಿಕ್ರಿಯೆ ನೀಡಿರುವ ಸಿಜೆಪಿ ಸ್ಥಾಪಕ ಅಭಿಜಿತ್ ದೀಪ್ಕೆ, ಪ್ರಧಾನಿಗಳು ದಿನ ಕಳೆದಂತೆ ಸೋಷಿಯಲ್ ಮೀಡಿಯಾ ಇನ್ಫ್ಲ್ಯೂಎನ್ಸರ್ ಆಗುತ್ತಿದ್ದಾರೆ. ಅವರು ಪ್ರಧಾನಿ ಹುದ್ದೆಯಿಂದ ಕೆಳಗಿಳಿದು ಸೋಷಿಯಲ್ ಮೀಡಿಯಾ ಇನ್ಫ್ಲ್ಯೂಎನ್ಸರ್ ಆಗುವುದೇ ಒಳ್ಳೆಯದು. ನನಗೆ ದೇಶದ ಭವಿಷ್ಯಕ್ಕಿಂತ ಅವರ ಮುಖವೇ ಹೆಚ್ಚು ಉಜ್ವಲವಾಗಿ ಕಾಣಿಸುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ, (ಏಜನ್ಸೀಸ್).