ಕೆಲದಿನಗಳ ಹಿಂದೆ ವೈರಲ್​ ಆಗಿದ್ದ ಝೊಂಬಿ ವೈರಸ್​ ವಿಡಿಯೋ 
ದೇಶ

ನೂರು ರೂಪಾಯಿ ಗುಳಿಗೆಯಿಂದ ಝೊಂಬಿಯಾದ ಯುವಕ: ಥಾಣೆಯ ವೈರಲ್​ ವಿಡಿಯೋಗೆ ಪೊಲೀಸರು ನೀಡಿದ ಸ್ಪಷ್ಟಣೆ ಏನು? Viral Video

ಪ್ರಮುಖ ಮುಖ್ಯಾಂಶಗಳು

  • ಕೆಲದಿನಗಳ ಹಿಂದೆ ವೈರಲ್​ ಆಗಿದ್ದ ಝೊಂಬಿ ವೈರಸ್​ ವಿಡಿಯೋ
  • ಮಹಾರಾಷ್ಟ್ರದ ತಾಣೆಯಲ್ಲಿ ನಡೆದಿದ್ದ ಘಟನೆ
  • ಇದು ಯಾವುದೇ ಝೊಂಬಿ ವೈರಸ್​ ಅಲ್ಲ, ಇದು ಗುಳಿಗೆಯ ಅಡ್ಡ ಪರಿಣಾಮ ಎಂದ ಪೊಲೀಸರು
ಮಹಾರಾಷ್ಟ್ರ: ಕೆಲ ದಿನಗಳ ಹಿಂದೆ ಮಹಾರಾಷ್ಟ್ರದ ತಾಣೆಯಲ್ಲಿ ಒಬ್ಬ ಯುವಕ ರಸ್ತೆ ಮಧ್ಯೆಯಲ್ಲಿ ಮೈ ಮೇಲೆ ಪ್ರಜ್ಞೆಯಿಲ್ಲದೆ, ಒಂದೇ ಸ್ಥಳದಲ್ಲಿ ನಿಂತು ಕೊಂಡಿರುವ ವಿಡಿಯೋ ಸಖತ್​ ವೈರಲ್ (Viral Video)​ ಆಗಿತ್ತು. ಈ ವಿಡಿಯೋವನ್ನು ನೋಡಿದ ಜನರು ಇದೊಂದು ಝೊಂಬಿ ವೈರಸ್​/ ಡ್ರಗ್ಸ್​ ಎಂದು ವದಂತಿ ಹಬ್ಬಿಸಿದ್ದರು. ಈಗ ಈ ವದಂತಿಗಳಿಗೆ ಮಹಾರಾಷ್ಟ್ರ ಪೊಲೀಸರು ತೆರೆ ಎಳೆದಿದ್ದಾರೆ.

ಪೊಲೀಸರು ನೀಡಿದ ಸ್ಪಷ್ಟಣೆ ಏನು? 

ಏಪ್ರಿಲ್​ 15 ರಂದು ಸೋಷಿಯಲ್​ ಮೀಡಿಯಾನಲ್ಲಿ ಹರಿದಾಡಿದ್ದ ಈ ವಿಡಿಯೋಗೆ ಪ್ರತಿಕ್ರಿಯಿಸಿರುವ ಪೊಲೀಸರು, ನಾವು ತನಿಖೆಯನ್ನು ಆರಂಭಿಸಿ ವಿಡಿಯೋದಲ್ಲಿದ್ದ ಸಮೀರ್​ ರಾಜೇಂದ್ರ ರಾವಲ್​ ಎಂಬಾತನನ್ನು ವಶಕ್ಕೆ ತೆಗೆದು ಕೊಂಡವು. ನಂತರ ವಿಚಾರಣೆ ನಡೆಸಿದಾಗ, ಈಗ ಮೂಲತಃ ನೇಪಾಳದವನೆಂದು, ಪ್ರಸ್ತುತ ಬೋರಿವಲ್ಲಿಯ ಫುಟ್​ಪಾತ್​ನಲ್ಲಿ ಜೀವನ ನಡೆಸುತ್ತಿದ್ದಾಗಿ ತಿಳಿದು ಬಂದಿದೆ.
ಕಳೆದ ಎರಡು ವರ್ಷಗಳಿಂದ ಮಾದಕ ದ್ರವ್ಯಗಳ ಚಟಕ್ಕೆ ದಾಸನಾಗಿರುವುದಾಗಿ ಒಪ್ಪಿಕೊಂಡಿರುವ ಇತ, ಆ ದಿನ ನೂರು ರೂಪಾಯಿಗಳಿಗೆ 10 ಗುಳಿಗೆಗಳನ್ನು ಖರೀಧಿಸಿ ಒಮ್ಮೆಲೆ ಸೇವಿಸಿದ್ದಾನೆ. ನಂತರ ಅ ಗುಳಿಗೆಗಳು ನಮ್ಮ ಅಡ್ಡ ಪರಿಣಾಮವನ್ನು ತೋರಿಸಿದ ಕಾರಣ ಇತ ದೇಹದ ಮೇಲೆ ತನ್ನ ಹಿಡಿತವನ್ನು ಕಳೆದು ಕೊಂಡಿರುವುದಾಗಿ ಪೊಲೀಸರು ಅಭಿಪ್ರಾಯ ಪಟ್ಟಿದ್ದಾರೆ.

ಬೆಂಗಳೂರಿನಲ್ಲಿ ಸಹ ವರದಿಯಾಗಿದ್ದ ಘಟನೆ

ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ಸಹ ಒಬ್ಬ ಮದ್ಯ ವಯಸ್ಸಿನ ಯುವಕ ರಸ್ತೆಯಲ್ಲಿ ವಿಚಿತ್ರವಾಗಿ ವರ್ತನೆ ತೋರುತ್ತಿದ್ದ ಘಟನೆ ನಡೆದಿದ್ದು, ಇದೊಂದು ಝೊಂಬಿ ವೈರಸ್​ ಎಂದು ಹೇಳಲಾಗಿತ್ತು. ಆದರೆ ನಂತರ ಆತನೊಬ್ಬ ಮಾನಸಿಕ ರೋಗಿಯೆಂದು, ಹಾಗೂ ಝೊಂಬಿ ವೈರಸ್​ ಎಂದು ವಿಡಿಯೋ ಹರಿ ಬಿಟ್ಟವನ ಮೇಲೆ ಪೊಲೀಸ್​ ಕ್ರಮ ಜರಿಗಿಸಲಾಗಿತ್ತು.

ಇದು ಯಾವುದೇ ಝೊಂಬಿ ಡ್ರಗ್​ ಅಲ್ಲ!

ಈ ಸಮೀರ್​ ಎಂಬಾತ ಸೇವಿಸಿರುವುದು ತಲೆ ನೋವಿನ ಗುಳಿಗೆಯಾಗಿದ್ದು, ಇದನ್ನು ಇತ ಚಟಕ್ಕಾಗಿ ಬಳಸಿದ್ದಾನೆ. ಆದರೆ ಸೇವಿಸಿದ ಪ್ರಮಾಣ ಮಿತಿ ಮೀರಿದ ಕಾರಣ, ಇತ ನಡೆಯಲು ಅಸಾಧ್ಯವಾದ ಸ್ಥಿತಿ ತಲುಪಿದ್ದಾನೆ. ಇದು ಯಾವುದೇ ಝೊಂಬಿ ಡ್ರಗ್ಸ್​ ಅಥವಾ ವೈರಲ್​ ಅಲ್ಲ, ಹೀಗಾಗಿ ಇದರ ಬಗ್ಗೆ ಸುಳ್ಳು ಸುದ್ದಿ ಹರರಬೇಡಿ ಎಂದು ಪೊಲೀಸರು ಸಾರ್ವಜನಿಕರಲ್ಲಿ ಕೇಳಿಕೊಂಡಿದ್ದಾರೆ, (ಏಜನ್ಸೀಸ್​).