ರೈಲು ಹಾಗೂ ಫ್ಲಾಟ್ಪಾರ್ಮ್ ನಡುವೆ ಸಿಲುಕಿಕೊಂಡಿರುವ ಯುವಕನನ್ನು ರಕ್ಷಿಸುತ್ತಿರುವ ಆರ್.ಪಿ.ಎಫ್ ಸಿಬ್ಬಂದಿ
ವೈರಲ್: ಭಾರತದಲ್ಲಿ ದಿನಕ್ಕೆ ಲಕ್ಷಾಂತರ ಜನ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ತೆರಳಲು ರೈಲನ್ನು ಅವಲಂಭಿಸಿದ್ದಾರೆ. ಆದರೆ ಈ ರೈಲನ್ನು ಏರುವಾಗ ಅಥವಾ ಇಳಿಯುವಾಗ ನಡೆಯುವ ಚಿಕ್ಕ ತಪ್ಪು ಸಹ ದೊಡ್ಡ ಅಪಾಯವನ್ನುಂಟು ಮಾಡಬಲ್ಲದು.
ಕೆಲದಿನಗಳಿಂದ ಸೋಷಿಯಲ್ ಮೀಡಿಯಾನಲ್ಲಿ ರೈಲಿನಿಂದ ಇಳಿಯುಲು ಹೋಗಿ ಸಾವಿನ ದವಡೆ ತಲುಪಿದ ವ್ಯಕ್ತಿಯೊಬ್ಬನನ್ನು ರೈಲ್ವೆ ಪೊಲೀಸ್ (RPF) ಪ್ರಾಣ ರಕ್ಷಣೆ ಮಾಡಿರುವ ವಿಡಿಯೋ ಎಲ್ಲಡೆ ವೈರಲ್ (Viral Video) ಆಗುತ್ತಿದೆ.
ವಿಡಿಯೋನಲ್ಲೇನಿದೆ?
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋನಲ್ಲಿ, ರೈಲು ಇನ್ನೇನು ಫ್ಲಾಟ್ಪಾರ್ಮ್ ತಲುಪಿತು ಎನ್ನುವಷ್ಟರಲ್ಲಿ ರೈಲಿನಿಂದ ಇಳಿಯ ಯತ್ನಿಸಿದ ಯುವಕನೊಬ್ಬ ರೈಲು ಹಾಗೂ ಫ್ಲಾಟ್ಪಾರ್ಮ್ ನಡುವೆ ಸಿಲುಕಿಕೊಂಡಿದ್ದಾನೆ.
ಇದನ್ನು ನೋಡಿದ ರೈಲ್ವೆ ಪೊಲೀಸ್ ಸಿಬ್ಬಂದಿ ತಕ್ಷಣ ಆ ವ್ಯಕ್ತಿಯನ್ನು ಹಿಡಿದು ಎಳೆದ ಪರಿಣಾಮ ಯಾವುದೇ ಪ್ರಾಣಾಪಾಯವಿಲ್ಲದೆ, ಜೀವಂತವಾಗಿ ಹೊರಬಂದಿರುವುದನ್ನು ನಾವು ನೋಡಬಹುದಾಗಿದೆ.
ನೆಟ್ಟಿಗರ ರಿಯಾಕ್ಷನ್ ಹೇಗಿದೆ?
ಯುವಕನ ಪ್ರಾಣವನ್ನು ಕಾಪಾಡಿದ ಆರ್ಪಿಎಫ್ ಅಧಿಕಾರಿಗೆ ನೆಟ್ಟಿಗರಿಂದ ಅಪಾರ ಮೆಚ್ಚುಗೆ ಹರಿದುಬಂದಿದೆ. ಈ ಅಧಿಕಾರಿಯ ಕರ್ತವ್ಯ ಪ್ರಜ್ಞೆಗೆ ನನ್ನದೊಂದು ಸಲಾಂ ಎಂದು ಒಬ್ಬ ಬಳಕೆದಾರ ಹೇಳಿದ್ದಾರೆ.
ರೈಲ್ವೆಯಲ್ಲಿ ಈ ರೀತಿಯ ಅಫಘಾತಗಳು ನಿರಂತರವಾಗಿ ನಡೆಯುತ್ತಿವೆ, ಇದಕ್ಕೊಂದು ಶಾಶ್ವತ ಪರಿಹಾರದ ಅಗತ್ಯವಿದೆ ಎಂದು ಇನ್ನೊಬ್ಬರು ಹೇಳಿದ್ದಾರೆ. ಈ ಸಾಹಸಕ್ಕೆ ಮುಂದಾದ ಅಧಿಕಾರಿಗೆ ಇಲಾಖೆ ಪ್ರಮೋಷನ್ ಅಥವಾ ಧನ ಸಹಾಯ ನೀಡಬೇಕು ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ, (ಏಜನ್ಸೀಸ್).