ರಸ್ತೆ ಮಧ್ಯೆ ಝೊಂಬಿಗಳಂತೆ ಯುವಕ-ಯುವತಿ ವರ್ತನೆ
- ರಸ್ತೆ ಮಧ್ಯೆ ಝೊಂಬಿಗಳಂತೆ ಯುವಕ-ಯುವತಿ ವರ್ತನೆ
- ಪಂಜಾಬ್ನ ಲೂಧಿಯಾನಾದಲ್ಲಿ ಸೆರೆಯಾದ ದೃಶ್ಯ
- ಇದು ಹೊಸ ಕಾಯಿಲೆಯೋ? ಮಾದಕ ವಸ್ತುವಿನ ದುಷ್ಪರಿಣಾಮವೋ? ಎಂದ ನೆಟ್ಟಿಗರು
ವೈರಲ್: ಪಂಜಾಬ್ನ ಲೂಧಿಯಾನಾದಲ್ಲಿ ಕಂಡುಬಂದ ದೃಶ್ಯ ಎನ್ನುವ ವಿಡಿಯೋವೊಂದು ಸೋಶಿಯಲ್ ಮೀಡಿಯಾನಲ್ಲಿ ಭಾರಿ ವೈರಲ್ (Viral Video) ಆಗುತ್ತಿದ್ದು, ಇದು ಸಮಾಜದಲ್ಲಿ ಯಾವುದಾದರೂ ಹೊಸ ಕಾಯಿಲೆ ಉದ್ಭವಿಸಿದೆಯೇ? ಅಥವಾ ಇದು ಮಾದಕ ವಸ್ತುಗಳ ಬಳಕೆಯ ಅಡ್ಡ ಪರಿಣಾಮವೇ ಎನ್ನುವುದು ತಿಳಿಯದಂತಾಗಿದೆ.
ವಿಡಿಯೋನಲ್ಲೇನಿದೆ?
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋನಲ್ಲಿ, ಹೈಸ್ಕೂಲ್ ಅಥವಾ ಪಿಯುಸಿಗೆ ಹೋಗುವ ವಯೋಮಾನದ ಒಬ್ಬ ಹುಡುಗ ಮತ್ತು ಹುಡುಗಿ ರಸ್ತೆ ಮಧ್ಯೆ ವಿಚಿತ್ರವಾಗಿ ವರ್ತಿಸುತ್ತಿರುವುದನ್ನು ನಾವು ವಿಡಿಯೋನಲ್ಲಿ ನೋಡಬಹುದಾಗಿದೆ. ವಿಡಿಯೋನಲ್ಲಿರುವ ಇಬ್ಬರಿಗೂ ಸರಿಯಾಗಿ ನಡಿಯಲು ಸಾಧ್ಯವಾಗದೇ ರಸ್ತೆ ತೂರಾಡುತ್ತಿರುವುದನ್ನು ಕಾಣಬಹುದಾಗಿದೆ.
ಬೆಂಗಳೂರಿನಲ್ಲಿ ಸಹ ವರದಿಯಾಗಿದ್ದ ಘಟನೆ
ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ಸಹ ಒಬ್ಬ ಮದ್ಯ ವಯಸ್ಸಿನ ಯುವಕ ರಸ್ತೆಯಲ್ಲಿ ವಿಚಿತ್ರವಾಗಿ ವರ್ತನೆ ತೋರುತ್ತಿದ್ದ ಘಟನೆ ನಡೆದಿದ್ದು, ಇದೊಂದು ಝೊಂಬಿ ವೈರಸ್ ಎಂದು ಹೇಳಲಾಗಿತ್ತು. ಆದರೆ ನಂತರ ಆತನೊಬ್ಬ ಮಾನಸಿಕ ರೋಗಿಯೆಂದು, ಹಾಗೂ ಝೊಂಬಿ ವೈರಸ್ ಎಂದು ವಿಡಿಯೋ ಹರಿ ಬಿಟ್ಟವನ ಮೇಲೆ ಪೊಲೀಸ್ ಕ್ರಮ ಜರಿಗಿಸಲಾಗಿತ್ತು.
ನೆಟ್ಟಿಗರು ಏನಂತಾರೆ?
ಈ ಲೂಧಿಯಾನಾದ ವಿಡಿಯೋ ಸೋಶಿಯಲ್ ಮೀಡಿಯಾನಲ್ಲಿ ಕಾಡ್ಗಿಚ್ಚಿನಂತೆ ಹಂಚಿಕೆಯಾಗುತಿದ್ದು, ಲಕ್ಷಾಂತರ ವೀಕ್ಷಣೆಯನ್ನು ಪಡೆದುಕೊಂಡಿದೆ.
ನಮ್ಮ ದೇಶದ ಮತ್ತ ಪಂಜಾಬ್ನ ಯುವಕರ ಭವಿಷ್ಯ ಅಂಧಕಾರದಲ್ಲಿದೆ ಎಂದು ಒಬ್ಬ ಬಳಕೆದಾರ ಹೇಳಿದರೆ, ಪಾಕಿಸ್ತಾನದಿಂದ ಪಂಜಾಬ್ಗೆ ಡ್ರಗ್ಸ್ ಸರಬರಾಜಾಗುತ್ತೆ, ಅದರ ಪರಿಣಾಮವೇ ಇದು ಎಂದು ಇನ್ನೊಬ್ಬ ಬಳಕೆದಾಕ ಕಮೆಂಟ್ ಮಾಡಿದ್ದಾರೆ.
ಇನ್ನೂ ಕೆಲವರು ಇದೊಂದು ವಿಚಿತ್ರ ಕಾಯಿಲೆ ಇದ್ದರೂ ಇರಬಹುದು, ಸರ್ಕಾರ ಆದಷ್ಟು ಬೇಗ ಕ್ರಮ ಕೈಗೊಳ್ಳಬೇಕೆಂದು ಮತ್ತೊಬ್ಬರು ಆಗ್ರಹಿಸಿದ್ದಾರೆ. ಆದರೆ ಈ ರೀತಿಯ ಘಟನೆಗೆ ನಿಖರವಾದ ಕಾರಣ ಏನೆಂದು ಇಲ್ಲಿವರೆಗೆ ತಿಳಿದು ಬಂದಿಲ್ಲ,(ಏಜನ್ಸೀಸ್).