100 ಮೀಟರ್​ ಓಟದಲ್ಲಿ ನೂತನ ದಾಖಲೆ ಬರೆದ ರೈತನ ಮಗ 
ದೇಶ

ಭಾರತೀಯರ ಡಿಎನ್‌ಎ ಪವರ್ ಏನು ಅಂತ ತೋರಿಸ್ತೀನಿ! 100 ಮೀಟರ್​ನಲ್ಲಿ ನೂತನ ದಾಖಲೆ; ಗುರಿಂದರ್‌ವೀರ್ ಸಿಂಗ್​ ಘರ್ಜನೆ! Gurindervir Singh

ಪ್ರಮುಖ ಮುಖ್ಯಾಂಶಗಳು

  • 100 ಮೀಟರ್​ ಓಟದಲ್ಲಿ ನೂತನ ದಾಖಲೆ ಬರೆದ ರೈತನ ಮಗ
  • 10.09 ಸೆಕೆಂಡ್​ಗಳಲ್ಲಿ ಗುರಿ ಮುಟ್ಟಿದ ಗುರಿಂದರ್‌ವೀರ್ ಸಿಂಗ್​ !
  • ಭಾರತೀಯರ ಡಿಎನ್‌ಎ ಪವರ್ ಏನು ಅಂತ ತೋರಿಸ್ತೀನಿ ಎಂದ ಓಟಗಾರ
ರಾಂಚಿ: ಶನಿವಾರ (ಮೇ.23) ರಾಂಚಿಯ ಬಿರ್ಸಾ ಮುಂಡಾ ಕ್ರೀಡಾಂಗಣದಲ್ಲಿ ನಡೆದ ಫೆಡರೇಷನ್ ಕಪ್ ಅಥ್ಲೆಟಿಕ್ಸ್ ಕೂಟದಲ್ಲಿ 100 ಮೀಟರ್ ಓಟದ ಸ್ಪರ್ಧೆಯಲ್ಲಿ ಗುರಿಂದರ್‌ವೀರ್ ಸಿಂಗ್ (Gurindervir Singh) ಕೇವಲ 10.09 ಸೆಕೆಂಡ್​​ಗಳಲ್ಲಿ ತಲುಪುವ ಮೂಲಕ ನೂತನ ರಾಷ್ಟ್ರೀಯ ದಾಖಲೆಯನ್ನು ತನ್ನದಾಗಿಸಿಕೊಂಡಿದ್ದಾನೆ.

ದಾಖಲೆ ವೀರ ಗುರಿಂದರ್‌ವೀರ್!

ಈ ಕ್ರೀಡಾಕೂಟದಲ್ಲಿ ಎಲ್ಲರ ಗಮನ ಸೆಳೆದ 100 ಮೀಟರ್​ ಓಟದಲ್ಲಿ ಪಂಜಾಬ್​ ಮೂಲಕ ಸ್ಪರ್ಧಿ ಗುರಿಂದರ್‌ವೀರ್ ಸಿಂಗ್ 10.09 ಸೆಕೆಂಡ್​​ಗಳಲ್ಲಿ ತನ್ನ ಗುರಿ ತಲುಪುವ ಮೂಲಕ ಈ ರಾಷ್ಟ್ರೀಯ ದಾಖಲೆಯನ್ನು ಬರೆದಿದ್ದಾರೆ.
ಈ ಸ್ಪರ್ಧೆಯ ಹಿಂದಿನ ದಿನದ ಓಟದಲ್ಲಿ ಸಿಂಗ್​ ಅವರ ಪ್ರತಿಸ್ಪರ್ಧಿ, ಅನಿಮೇಶ್ ಕುಜೂರ್ 10.15 ಸೆಕೆಂಡುಗಳಲ್ಲಿ ಓಡಿ ರಾಷ್ಟ್ರೀಯ ದಾಖಲೆ ಬರೆದಿದ್ದರು. ಅದರೆ ನಿನ್ನೆ ನಡೆದ ಸ್ಪರ್ಧೆಯಲ್ಲಿ ಅನಿಮೇಶ್ ಕುಜೂರ್​ಗೆ ಭಾರಿ ಪೈಪೋಟಿ ನೀಡಿದ ಗುರಿಂದರ್‌ವೀರ್ ಸಿಂಗ್ ನೂತನ ದಾಖಲೆ ತನ್ನದಾಗಿಸಿಕೊಂಡಿದ್ದಾರೆ. ಈ ಮೂಲಕ ಸದ್ಯ ಏಷ್ಯಾದ ಎರಡನೇ ವೇಗದ ವ್ಯಕ್ತಿ ಎಂಬ ಹೆಗ್ಗಳಿಕೆ ಜೊತೆಗೆ 2026ರ ಕಾಮನ್‌ವೆಲ್ತ್ ಗೇಮ್ಸ್‌ಗೆ ತಮ್ಮ ಅರ್ಹತೆಯನ್ನು ಸಹ ಖಚಿತಪಡಿಸಿಕೊಂಡಿದ್ದಾರೆ.

ಭಾರತೀಯರ ರಕ್ತ ಏನೆಂದು ತೋರಿಸುತ್ತೆನೆ!

ಸ್ಪರ್ಧೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಗುರಿಂದರ್‌ವೀರ್ ಸಿಂಗ್ ನಾನು 13 ವರ್ಷದವನಿದ್ದಾಗ 100 ಮೀಟರ್​ ಓಟಕ್ಕಾಗಿ ತಯಾರಿ ನಡೆಸಲು ಮುಂದಾಗಿದ್ದೆ. ಆ ಸಂದರ್ಭದಲ್ಲಿ 100 ಮೀಟರ್​ನಲ್ಲಿ ನಿನಗೆ ಭವಿಷ್ಯವಿಲ್ಲ, ನೀವು 400 ಮೀಟರ್​ಗೆ ತಯಾರಿ ಮಾಡು. ಭಾರತೀಯ ದೇಹ 100 ಮೀಟರ್​ಗೆ ಸೆಟ್ ಆಗಲ್ಲ ಎಂದೆಲ್ಲಾ ಹೇಳಿದ್ದರು.
ನನಗೆ ಅವರ ಮಾತನ್ನೆಲ್ಲಾ ಸುಳ್ಳೆಂದು ಸಾಭಿತು ಪಡಿಸಬೇಕೆಂಬ ಬಹಳ ಆಸೆ ಇತ್ತು. ಭಾರತೀಯರ ಡಿಎನ್​ಎ ಬಹಳ ಗಟ್ಟಿ ಎಂದು ನಾನೀಗ ಈಡೀ ಜಗತ್ತಿಗೆ ತೋರಿಸಿದ್ದೆನೆ ಎಂದು ಅವರು ಹೇಳಿದರು. ನಾನು ಈ ಸಾಧನೆ ಮಾಡಲು ನನ್ನ ತಂದೆ-ತಾಯಿ, ಗುರುಗಳು ಹಾಗೂ ನನ್ನ ಸ್ನೇಹಿತರ ಪಾತ್ರ ಬಹಳ ಪ್ರಮುಖವಾಗಿದೆ. ಹಾಗೆಯೇ ನನ್ನ ಕ್ರೀಡಾ ಪಯಣ ಇಲ್ಲಿಂದ ಆರಂಭವಾಗಲಿದೆ. ದೇಶಕ್ಕಾಗಿ ಇನ್ನಷ್ಟು ಸಾಧನೆ ಮಾಡುವ ಗುರಿ ಇದೆ ಎಂದು ಸಿಂಗ್​ ಹೇಳಿದ್ದಾರೆ.

ಅವನ ಮೇಲೆ ನನಗೆ ನಂಬಿಕೆ ಇದ್ದೆ ಇತ್ತು

ಪಂಜಾಬ್​ನ ಪಟಿಯಾಲಾದ ಕೃಷಿ ಕುಟುಂಬದಲ್ಲಿ ಜನಿಸಿದ ಗುರಿಂದರ್‌ವೀರ್ ಸಿಂಗ್ ಬಗ್ಗೆ ಅವರ ಪ್ರಾರಂಭದ ಕೋಚ್​ ಸರಬ್ಜಿತ್ ಸಿಂಗ್ ಸಂತಸ ವ್ಯಕ್ತ ಪಡಿಸಿದ್ದಾರೆ. ಅವನು ಮೊದಲಿನಿಂದಲೂ 100 ಮೀಟರ್​ ಓಟದ ಬಗ್ಗೆ ಅತೀವ ಆಸಕ್ತಿ ಹೊಂದಿದ್ದ. 10.10 ಸೆಕೆಂಡ್​ಗಳಲ್ಲಿ 100 ಮೀಟರ್​ ಕ್ರಮಿಸುತ್ತೇನೆಂದು ಹೇಳುತ್ತಿದ್ದ. ಈಗ ಅದು ನನಸಾಗಿದೆ, ನನಗೆ ಅವನ ಮೇಲೆ ತುಂಬಾ ಹೆಮ್ಮೆಯಿದೆ ಎಂದು ಹೇಳಿದ್ದಾರೆ, (ಏಜನ್ಸೀಸ್​).