- ರಾಘವ್ ಚಡ್ಡಾ ಪಕ್ಷಾಂತರವನ್ನು ಪಿತೂರಿ ಎಂದ ಎಎಪಿ ನಾಯಕ ಸೌರಭ್ ಭಾರದ್ವಾಜ್
- ಎಎಪಿ.ಸಂಸದರಾಗಿದ್ದರಿಂದಲೇ ಚಡ್ಡಾಗೆ ವಿವಾಹ ಭಾಗ್ಯ ಸಿಕ್ಕಿದ್ದು ಎಂದ ಸೌರಭ್ ಭಾರದ್ವಾಜ್.
- ಬಿಜೆಪಿ ಜೊತೆಗೂಡಿ ಒಂದು ವರ್ಷದಿಂದಲೇ ಚಡ್ಡಾ ಯೋಜನೆ ರೂಪಿಸಿದ್ದರು ಎಂಬ ಆರೋಪ
ನವದೆಹಲಿ: ಎಎಪಿ ಭ್ರಷ್ಟರ ಕೈಲಿದೆ. ನಾನೊಬ್ಬ ಪಕ್ಷ ತೊರೆದು ತಪ್ಪನ್ನು ಮಾಡಿರಬಹುದು ನನ್ನನ್ನು ಸೇರಿಸಿ ಆರು ಜನ ಪಕ್ಷ ತೊರೆಯಲು ಕಾರಣ ಏನಿರಬಹುದು ಹೇಳಿ ಎಂದು ಬಿಜೆಪಿ ನಾಯಕ ರಾಘವ್ ಚಡ್ಡಾ ಸೋಮವಾರ ಇನ್‌ಸ್ಟಾಗ್ರಾಮ್ ನಲ್ಲಿ ವಿಡಿಯೋ ಹಂಚಿಕೊಂಡಿದ್ದರು. ಈ ಕುರಿತು ಎಎಪಿಯ ಹಿರಿಯ ನಾಯಕ ಸೌರಭ್ ಭಾರದ್ವಾಜ್ ವಾಗ್ದಾಳಿ ನಡೆಸಿದ್ದಾರೆ.
ಉಪನಾಯಕನ ಸ್ಥಾನದಿಂದ ರಾಘವ್ ಚಡ್ಡಾರನ್ನು ವಜಾಗೊಳಿಸಿದ ಕೆಲವು ವಾರಗಳ ನಂತರ ಆಮ್ ಆದ್ಮಿ ಪಕ್ಷವನ್ನು ರಾಘವ್ ಚಡ್ಡಾ ಅವರು ತೊರೆದು, ಬಿಜೆಪಿ ಸೇರ್ಪಡೆಯಾಗಿದ್ದರು. ಈ ಬಗ್ಗೆ ಸಾಕಷ್ಟು ಟೀಕೆಗಳನ್ನು ಚಡ್ಡಾ ಎದುರಿಸುತ್ತಿದ್ದಾರೆ. ಇದು ಪಕ್ಷಕ್ಕೆ ಬಗೆದ ದ್ರೋಹ ಎಂದು ಭಾರದ್ವಾಜ್ ಕಿಡಿಕಾರಿದ್ದಾರೆ.
ಮದುವೆಯಾಗಿದ್ದೇ ನಮ್ಮಿಂದ
ಇಂದು ನಿಮಗೆ ಮದುವೆಯಾಗಿದೆ ಎಂದರೆ ಅದಕ್ಕೆ ನಮ್ಮ ಪಕ್ಷ ಕಾರಣ. ನಿಮ್ಮನ್ನು ಸಂಸತ್ ಸದಸ್ಯೆ ಮಾಡಿರುವುದು ನಾವು ಇಷ್ಟಕ್ಕೆಲ್ಲ ಪಕ್ಷ ಕಾರಣ. ಇಲ್ಲದಿದ್ದರೆ ನಿಮ್ಮನ್ನು ಜನರು ಕ್ಯಾರೆ ಎನ್ನುತ್ತಿರಲಿಲ್ಲ ಎಂದು ಸೌರಭ್ ಭಾರದ್ವಾಜ್ ವ್ಯಂಗ್ಯವಾಡಿದ್ದಾರೆ.
ಕಂಪನಿಗೆ ಮೋಸ ಮಾಡೊಲ್ಲ
ಇನ್ಸ್ಟಾಗ್ರಾಮ್ನಲ್ಲಿ ಮಾತನಾಡಿದ್ದ ರಾಘವ್ ಚಡ್ಡಾ ಅವರ ಪಕ್ಷಾಂತರ ನಿರ್ಧಾರವನ್ನು ಉದ್ಯೋಗ ಬದಲಾವಣೆ ಎಂದಿದ್ದರು. ಈ ಬಗ್ಗೆ ಉಲ್ಲೇಖಿಸಿದ ಅವರು, ರಾಜಕೀಯ ಅನ್ನೋದು ಸಿದ್ಧಾಂತಗಳ ಮೇಲೆ ನಿಂತಿದೆ. ಇಲ್ಲಿ ಸಿದ್ಧಾಂತ ಮುಖ್ಯ. ಬದಲಾಗಿ ಕಂಪನಿ ಮೇಲಲ್ಲ ಕೆಲಸ ಬದಲಿಸುವವರು ಕೂಡ ತಮ್ಮ ಹಳೆ ಕಂಪನಿ ಮೇಲೆ ಪಿತೂರಿ ಹೂಡಿ ದ್ರೋಹ ಮಾಡೋದಿಲ್ಲ ಮೂರು ತಿಂಗಳ ಮೊದಲೇ ನೋಟಿಸ್ ನೀಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಜೊತೆ ಪಿತೂರಿ
ಜಾರಿ ನಿರ್ದೇಶನಾಲಯವು ತನ್ನ ಹಿಡಿತವನ್ನು ಬಿಗಿಗೊಳಿಸಿದ. ನೀವು ಬಿಜೆಪಿಗೆ ಸೇರಲು ನಿರ್ಧರಿಸಿದ್ದೀರಿ, ಆದರೆ ನೀವು ಯಾರಿಗೂ ಹೇಳಲಿಲ್ಲ. ನೀವು ಬಿಜೆಪಿಯೊಂದಿಗೆ ಪಿತೂರಿ ನಡೆಸಿದ್ದೀರಿ.ಕಳೆದ ಒಂದು ವರ್ಷದಿಂದ ರಾಘವ್ ಚಡ್ಡಾ ಅವರು ಬಿಜೆಪಿಯೊಂದಿಗೆ ಪಿತೂರಿ ನಡೆಸುತ್ತಿದ್ದರು. ಹೀಗಾಗಿಯೇ ವಿಮಾನ ನಿಲ್ದಾಣದ ಮಾರಾಟಗಾರರು, ಮೊಬೈಲ್ ರೀಚಾರ್ಜ್ ದರ ಮತ್ತು ಗಿಗ್ ವರ್ಕರ್ಸ್‌ಗಳಂತಹ ಮಧ್ಯಮ ವರ್ಗದ ವಿಷಯಗಳನ್ನು ಚಡ್ಡಾ ಅವರು ಸಂಸತ್ತಿನಲ್ಲಿ ಪ್ರಸ್ತಾಪಿಸುತ್ತಿದ್ದರು. ಬಿಜೆಪಿ ಸರ್ಕಾರವೇ ಈ ಬಗ್ಗೆ ಮಾತನಾಡಲು ಅವರಿಗೆ ಮಾಹಿತಿ ಕೊಟ್ಟಿತ್ತು. ಇಮೇಜ್ ಸಿಗಲಿ ಎಂದು ಬಿಜೆಪಿ ಮಾಡಿದ್ದ ಕುತಂತ್ರ ಇದು.
ಚಡ್ಡಾ ಹೇಳಿದ್ದೇನು?
ಬಿಜೆಪಿಗೆ ಪಕ್ಷಾಂತರಗೊಂಡ ಚಡ್ಡಾ ಅವರು ತಮ್ಮ ನಿರ್ದಾರವನ್ನು ಸಮರ್ಥಿಸಿಕೊಂಡು ಮಾತನಾಡಿದ್ದರು. ನಾನು ಕಳೆದ 15 ವರ್ಷದಿಂದ ಪಕ್ಷಕ್ಕಾಗಿ ಸಾಕಷ್ಟು ದುಡಿದಿದ್ದೇನೆ. ನಾನು ಸರಿಯಾದ ವ್ಯಕ್ತಿ ಆದರೆ, ತಪ್ಪು ಪಕ್ಷದಲ್ಲಿ ಸಿಕ್ಕಿ ಹಾಕಿಕೊಂಡಿದ್ದೇನೆ ಎಂದು ಅನಿಸುತ್ತಿದೆ. ಭಯದಿಂದ ಪಕ್ಷ ಬಿಡುತ್ತಿಲ್ಲ. ವಿಷಕಾರಿ ವಾತಾವರಣದಿಂದ ಹೊರಬರುತ್ತಿದ್ದೇನೆ ಎಂದು ಹೇಳಿದ್ದರು. ಕೇವಲ ಒಬ್ಬರಲ್ಲ, ಏಳು ಸಂಸದರು ಪಕ್ಷದೊಂದಿಗೆ ಸಂಬಂಧ ಕಡಿದುಕೊಳ್ಳಲು ನಿರ್ಧರಿಸಿದ್ದಾರೆ ಎಂದರೆ ಪಕ್ಷದಲ್ಲೇ ದೋಷವಿದೆ ಎಂದಿದ್ದರು, (ಏಜೆನ್ಸೀಸ್).