ಬರ್ಲಿನ್ ಗ್ಲೋಬಲ್ ಡೈಲಾಗ್ ದುಂಡುಮೇಜಿನ ಸಭೆಯಲ್ಲಿ ಮಾತನಾಡುತ್ತಿರುವ ಕೇಂದ್ರ ಸಚಿವ ಪಿಯೂಷ್ ಗೋಯಲ್ 
ದೇಶ

"ಪರಿಸರ ಹಾಳುಗೆಡವಿದ್ದು ಯಾರು?" "ದಶಕಗಳ ಕಾಲ ದೌರ್ಜನ್ಯ ಎಸಗಿದ್ದು ನೀವೇ": ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ಪಿಯೂಷ್ ಗೋಯಲ್ ಚಾಟಿ! Piyush Goyal

ಜರ್ಮನಿಯ ಬರ್ಲಿನ್ ಗ್ಲೋಬಲ್ ಡೈಲಾಗ್ ಸಭೆಯಲ್ಲಿ ಜಾಗತಿಕ ಹವಾಮಾನ ವೈಪರೀತ್ಯ ಹಾಗೂ ಮಾಲಿನ್ಯಕ್ಕೆ ಪಾಶ್ಚಿಮಾತ್ಯ ಮತ್ತು ಅಭಿವೃದ್ಧಿ ಹೊಂದಿದ ರಾಷ್ಟ್ರಗಳೇ ಕಾರಣ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ತರಾಟೆಗೆ ತೆಗೆದುಕೊಂಡಿದ್ದಾರೆ.

ಬರ್ಲಿನ್​: ಜರ್ಮನಿ ರಾಜಧಾನಿ ಬರ್ಲಿನ್​ನಲ್ಲಿ ನಡೆಯುತ್ತಿರುವ 'ಬರ್ಲಿನ್ ಗ್ಲೋಬಲ್ ಡೈಲಾಗ್‌ನಲ್ಲಿ ದುಂಡುಮೇಜಿನ ಸಭೆ' ಯಲ್ಲಿ ಪಾಲ್ಗೊಂಡಿದ್ದ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್, ಜಗತ್ತಿನ ಅಭಿವೃದ್ಧಿ ಹೊಂದಿದ ದೇಶಗಳಿಂದಲೇ ಜಾಗತಿಕ ಹವಾಮಾನ ಕಲುಷಿತಗೊಂಡಿದೆ ಎಂದು ಅಬ್ಬರಿಸಿದ್ದಾರೆ.

ಯಾರು ಈ ಮಾಲಿನ್ಯವನ್ನು ಆರಂಭಿಸಿದ್ದು? ಯಾರು ಓಜೋನ್​ ಪದರು ತೆಳುವಾಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು? ಯಾವ ದೇಶಗಳು ಅತ್ಯಧಿಕ ಕಾರ್ಬನ್​ ಅನಿಲ ಬಿಡುಗಡೆ ಮಾಡಿದ್ದು? ಎಂಬ ಪ್ರಶ್ನೆಗಳ ಸುರಿಮಳೆಯನ್ನು ಪಿಯೂಷ್ ಗೋಯಲ್ ಸುರಿಸುವ ಮೂಲಕ ಪಾಶ್ಚಿಮಾತ್ಯ ದೇಶಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ನಿವೇ ಇದಕ್ಕೆಲ್ಲಾ ಹೊಣೆ!

ದುಂಡುಮೇಜಿನ ಸಭೆಯಲ್ಲಿ ಹಾಜರಿದ್ದ, ಮಹಿಳಾ ಪ್ರತಿನಿಧಿಯೊಬ್ಬಳು, ಪರಿಸರ ಮಾಲಿನ್ಯ, ಕಾರ್ಬನ್​ ಬಿಡುಗಡೆ ಎನ್ನುವುದು ಬಹಳ ಗಂಭೀರ ಸಂಗತಿಯಾಗಿದೆ. ಇದನ್ನು ನಾವು ತಮಾಷೆಯಾಗಿ ನೋಡದೆ, ಇದರ ಬಗ್ಗೆ ಸಮಯೋಜಿತವಾಗಿ ಚಿಂತಿಸುವ ಅಗತ್ಯವಿದೆ ಎಂದಿದ್ದಾರೆ.

ಈ ಮಾತನ್ನು ಕೇಳಿಸಿಕೊಳ್ಳುತ್ತಲೇ, ಫುಲ್​ ಜೋಷ್​​ಗೆ ಬಂದ ಪಿಯೂಷ್​ ಗೋಯಲ್​, ನಾನು ಈ ಪ್ರಸ್ತಾವನೆಗಾಗಿಯೇ ಕಾಯುತ್ತಿದೆ, ನಿಮ್ಮ ಮಾತು ನೂರರಷ್ಟು ಸರಿಯಿದೆ. ಆದರೆ ಈ ಮಾಲಿನ್ಯವನ್ನು ಹುಟ್ಟುಹಾಕಿದ್ದು ಯಾರು? ಮತ್ತು ಜಗತ್ತಿನಲ್ಲಿ ಅತಿ ಹೆಚ್ಚು ಕಾರ್ಬನ್​ ಬಿಡುಗಡೆ ಮಾಡುತ್ತಿರುವವರು ಯಾರು? ಎಂದು ಪ್ರಶ್ನಿಸಿದ್ದಾರೆ.

ನಾನು ಬರುವ ದೇಶ (ಭಾರತ) ಜಗತ್ತಿನ ಶೇ.17 ರಷ್ಟು ಜನಸಂಖ್ಯೆಯನ್ನು ಪ್ರತಿನಿಧಿಸುತ್ತದೆ. ಆದರೆ ನನ್ನ ದೇಶ ಕೇವಲ ಶೇ. 3 ರಷ್ಟು ಕಾರ್ಬನ್​ ಅನಿಲವನ್ನು ಪರಿಸರಕ್ಕೆ ಬಿಡುಗಡೆ ಮಾಡುತ್ತದೆ. ಆದರೆ, ಯೂರೋಪ್​ ಖಂಡ ದೇಶಗಳು ಜಗತ್ತಿನ ಕೇವಲ 3 ರಿಂದ 4 ರಷ್ಟು ಜನಸಂಖ್ಯೆಯನ್ನು ಹೊಂದಿದೆ. ಆದರೆ ನೀವುಗಳು ಎಷ್ಟು ಕಾರ್ಬನ್​ ಅನಿಲವನ್ನು ಹೊರಹಾಕುತ್ತಿದ್ದಿರಿ? ಈ ಮಾಲಿನ್ಯ, ಹವಾಮಾನ ವೈಪರಿತ್ಯಕ್ಕೆ ನಿಮ್ಮ ದೇಶಗಳೇ ಮೂಲ ಕಾರಣ ಎಂದು ಅಬ್ಬರಿಸಿದ್ದಾರೆ.

ಕೊಟ್ಟ ಮಾತನ್ನು ಉಳಿಸಿಕೊಳ್ಳಲಿಲ್ಲ!

ಇದೇ ಸಂದರ್ಭದಲ್ಲಿ 2015 ರ ಪ್ಯಾರಿಸ್​ ಒಪ್ಪಂದದ ಬಗ್ಗೆ ಮಾತನಾಡಿದ ಗೋಯಲ್​, 2015ರ ಪ್ಯಾರಿಸ್ ಹವಾಮಾನ ಸಮ್ಮೇಳನದಲ್ಲಿ ಅಭಿವೃದ್ಧಿ ಹೊಂದಿದ ದೇಶಗಳು, ನಾವು ಇನ್ಮುಂದೆ ಕಾರ್ಬನ್​ ಹೊರ ಸೂಸುವಿಕೆಯನ್ನು ಕಡಿಮೆ ಮಾಡುತ್ತೇವೆ. ನಾವು ಸಾಕಷ್ಟು ಅಭಿವೃದ್ಧಿ ಹೊಂದಿದ್ದೇವೆ. ಈಗ ನಾವು ಅಭಿವೃದ್ಧಿಶೀಲ ದೇಶಗಳ ಮುಂದುವರಿಕೆಗೆ ಶ್ರಮಿಸುತ್ತೇವೆಂದು ಹೇಳಿಕೆ ನೀಡಲಾಗಿತ್ತು.

ಆದರೆ, ನೀವು ಕೊಟ್ಟ ಮಾತನ್ನು ಎಷ್ಟು ಉಳಿಸಿಕೊಂಡಿರಿ? ಕಾರ್ಬನ್​ ಹೊರಸೂಸುವಿಕೆ ಪ್ರಮಾಣವನ್ನು ಎಷ್ಟು ಕಡಿಮೆ ಮಾಡಿದಿರಿ? ಎಷ್ಟು ಅಭೀವೃದ್ಧಿಶೀಲ ದೇಶಗಳನ್ನು ಅಭಿವೃದ್ಧಿಹೊಂದಿದ ದೇಶಗಳಾಗಿ ಪರಿವರ್ತನೆ ಮಾಡಿದ್ದಿರಾ? ನೀವು ದಶಕಗಳವರಗೆ ಪರಿಸರ, ಹವಾಮಾನ, ವಾತಾವರಣಗಳ ಮೇಲೆ ದೌರ್ಜನ್ಯವೆಸೆಗಿ ನೀವು ಅದರ ಫಲವನ್ನು ತಿಂದಿದ್ದಿರಿ. ಈಗ ಸಣ್ಣ ದೇಶಗಳು ತಮ್ಮ ದೇಶದ ಜನರ ಉನ್ನತಿಗಾಗಿ ಏನಾದರೂ ಕೆಲಸ ಮಾಡಹೊರಟರೆ ಅಲ್ಲಿ ಕಾರ್ಬನ್​, ಪರಿಸರ ಮಾಲಿನ್ಯ ಎಂದು ಹೇಳುತ್ತಿರಾ? ಇಷ್ಟುಕ್ಕೂ ಇಷ್ಟು ವರ್ಷ ನೀವು ಮಾಡಿದ್ದಾದ್ದರೂ ಏನು? ಎಂದು ಗೋಯಲ್​ ಗರಂ ಆಗಿದ್ದಾರೆ.

ನಾವು ನೀಜವಾದ ಪರಿಸರ ಪ್ರೇಮಿಗಳು!

ಇದೇ ಪ್ಯಾರಿಸ್​ ಹವಾಮಾನ ಸಮ್ಮೇಳನದಲ್ಲಿ, ಪರಿಸರ ರಕ್ಷಣೆ, ವಾತಾವರಣ ಶುದ್ಧಿಗಾಗಿ ವಾರ್ಷಿಕ 100 ಬಿಲಿಯನ್ ಡಾಲರ್​ ಹೂಡಕೆ ಮಾಡಬೇಕು ಎಂದು ಹೇಳಲಾಗಿತ್ತು. ಆದರೆ ಇದು ಎಷ್ಟರ ಮಟ್ಟಿಗೆ ಕಾರ್ಯರೂಪಕ್ಕೆ ಬಂದಿದೆ. ಯಾವ-ಯಾವ ದೇಶಗಳು ಎಷ್ಟು ಹಣ ನೀಡಿದೆ? ಎಂದು ಪ್ರಶ್ನಿಸಿದ್ದಾರೆ.

ನಾನ್ನ ದೇಶದಲ್ಲಿ ಸುಮಾರು 140 ಕೋಟಿ ಜನರಿದ್ದಾರೆ. ಹೀಗಾಗಿ ನಾವು ಅವರ ಆಹಾರ, ಆರೋಗ್ಯ ಸೇರಿದಂತೆ ಎಲ್ಲಾ ರೀತಿಯ ಮೂಲಭೂತ ಅಗತ್ಯತೆಗಳನ್ನು ಪೂರೈಸಬೇಕು. ಹಾಗೆಯೇ, ಅವರ ರಕ್ಷಣೆ ಕೂಡ ಸರ್ಕಾರದ ಜವಾಬ್ದಾರಿಯಾಗಿದೆ. ಇದರೆಲ್ಲದರ ಹೊರತಾಗಿ ಕೂಡ ನನ್ನ ದೇಶ, ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಸ್ವಚ್ಛ ಇಂಧನ ದೇಶವಾಗಿ ಬೆಳೆಯುತ್ತಿದ್ದೆವೆಂದು ಹೇಳಿದ್ದಾರೆ, (ಏಜೆನ್ಸೀಸ್​).