ಜಲಾಲಾಬಾದ್ ಅನ್ನು ಪರಶುರಾಮ್‌ಪುರಿ ಎಂದು ಮರುನಾಮಕರಣ 
ದೇಶ

ಕೊನೆಗೊಂಡಿತು ವರ್ಷಗಳ ಹೋರಾಟ: ಜಲಾಲಾಬಾದ್ ಇನ್ಮುಂದೆ 'ಪರಶುರಾಮ್‌ಪುರಿ'; ಹೆಸರು ಬದಲಾವಣೆಗೆ ಯೋಗಿ ಸರ್ಕಾರ ಗ್ರೀನ್​ ಸಿಗ್ನಲ್​​! Jalalabad Changed as Parashurampuri

ಪ್ರಮುಖ ಮುಖ್ಯಾಂಶಗಳು

  • ಉತ್ತರ ಪ್ರದೇಶದ ಶಹಾಜಾನ್‌ಪುರ ಜಿಲ್ಲೆಯ ಜಲಾಲಾಬಾದ್ ನಗರದ ಹೆಸರು ಬದಲಾವಣೆ
  • ಜಲಾಲಾಬಾದ್ ಅನ್ನು ಪರಶುರಾಮ್‌ಪುರಿ ಎಂದು ಮರುನಾಮಕರಣ
  • ಮರುನಾಮಕರಣ ಮಾಡಲು ಯೋಗಿ ಆದಿತ್ಯನಾಥ್ ಕ್ಯಾಬಿನೆಟ್ ಒಪ್ಪಿಗೆ
ಲಖನೌ: ಉತ್ತರಪ್ರದೇಶ ರಾಜ್ಯದ ಶಹಾಜಾನ್​ಪುರ ಜಿಲ್ಲೆಯ ಜಲಾಲಾಬಾದ್​ ಎಂಬ ನಗರವನ್ನು ಪರಶುರಾಮ್​ಪುರಿ (Jalalabad Changed as Parashurampuri) ಎಂದು ಮರುನಾಮಕರಣ ಮಾಡಲು ಯೋಗಿ ಆದಿತ್ಯನಾಥ ನೇತೃತ್ವದ ಕ್ಯಾಬಿನೇಟ್​ ಒಪ್ಪಿಗೆ ಸೂಚಿಸಿದೆ ಎಂದು ವರದಿಯಾಗಿದೆ. 
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಉಪ ಮುಖ್ಯಮಂತ್ರಿ ಬ್ರಿಜೆಶ್​ ಪಾಠಕ್​, ಜಲಾಲಾಬಾದ್​ ಅನ್ನು ಮುಂದಿನ ದಿನಗಳಲ್ಲಿ ಪರಶುರಾಮ್​ಪುರಿ ಎಂದು ಕರೆಯಲಾಗುವುದೆಂದು ತಿಳಿಸಿದ್ದಾರೆ. 

ಜನರ ಒತ್ತಾಯಕ್ಕೆ ಮಣಿದಿದ್ದೆವೆ!

ಈ ಜಲಾಲಾಬಾದ್​ನ ಹೆಸರನ್ನು ಬದಲಿಸಬೇಕೆಂದು ಅಲ್ಲಿಯ ಜನರು ಬಹಳ ಕಾಲದಿಂದ ಹೋರಾಟ ನಡೆಸುತ್ತಿದ್ದರು. ನಂಬಿಕೆ ಪ್ರಕಾರ ಭಗವಾನ್​ ಪರಶುರಾಮರು ಇದೇ ಪ್ರದೇಶದಲ್ಲಿ ಜನಿಸಿದ್ದರೆಂದು ಹೇಳಲಾಗುತ್ತಿರುವ ಕಾರಣ ಈ ನಗರಕ್ಕೆ ಪರಶುರಾಮ್​ಪುರಿ ಎಂದೇ ಹೆಸರನ್ನು ಇಡಲಾಗಿದೆ ಎಂದು ಡಿಸಿಎಂ ಹೇಳಿದ್ದಾರೆ. 
ಈ ನಗರದ ಹೆಸರನ್ನು ಬದಲಾವಣೆ ಮಾಡಬೇಕೆನ್ನುವುದು ಕಳೆದ ವರ್ಷವೇ ನಿರ್ಧಾರವಾಗಿತ್ತು. ಆದರೆ ಕೆಲ ಆಡಳಿತ ಕಾರ್ಯಗಳಿಂದ ಇದು ವಿಳಂಬವಾಗಿದ್ದು, ಇಂದು ಇದಕ್ಕೆ ಸರಿಯಾದ ಸಮಯ ಕೂಡಿ ಬಂದಿದೆ. ಇದು ಪ್ರತಿ ಸನಾತನಿಗೆ ಖಂಡಿತವಾಗಿ ಸಂತೋಷವನ್ನು ತಂದಿದೆ ಎಂದು ಕೇಂದ್ರ ಸಚಿವ ಜತಿನ್​ ಪ್ರಸಾದ್​ ಹೇಳಿದ್ದಾರೆ. 
ಈದೀಗ ಹೆಸರನ್ನು ಬದಲಾವಣೆ ಮಾಡಲು ಕ್ಯಾಬಿನೆಟ್​ ಒಪ್ಪಿಗೆ ದೊರೆತಿದೆ. ಇನ್ನು ಸರ್ಕಾರದ ಅಧಿಸೂಚನೆ ಹೊರಬೀಳುತ್ತಿದ್ದಂತೆ ಜಲಾಲಾಬಾದ್​​ ಎಂಬ ಹೆಸರು ಕೊನೆಗೊಂಡು ಪರಶುರಾಮ್​ಪುರಿ ಎಂಬ ಹೆಸರು ಅಮರವಾಗಲಿದೆ ಎಂದಿದ್ದಾರೆ, (ಏಜನ್ಸೀಸ್​​​).