Rajasthan Jodhpur Gangrape Case 
ದೇಶ

ವರ್ಷಗಳಿಂದ ಗ್ಯಾಂಗ್​ ರೇಪ್, ಬ್ಲ್ಯಾಕ್​ಮೇಲ್, ಪೊಲೀಸರಿಂದ ಸಿಗದ ನ್ಯಾಯ; ರಾಜಸ್ಥಾನದಲ್ಲಿ ಅಕ್ಕ-ತಂಗಿ ಆತ್ಮಹತ್ಯೆ

ಪ್ರಮುಖ ಮುಖ್ಯಾಂಶಗಳು

  • ಸಾಮೂಹಿಕ ಅತ್ಯಾಚಾರ ಮತ್ತು ಬ್ಲ್ಯಾಕ್‌ಮೇಲಿಂಗ್‌ಗೆ ಇಬ್ಬರು ಹೆಣ್ಣುಮಕ್ಕಳು ಸೂಸೈಡ್
  • ದೂರು ದಾಖಲಿಸಿದರೂ ಯಾವುದೇ ಕಠಿಣ ಕ್ರಮ ಕೈಗೊಳ್ಳದ ಕಾರಣ ಸೂಸೈಡ್ ಮಾಡಿಕೊಂಡ ತಂಗಿ
  • ನಿರಂತರ ಕಿರುಕುಳಕ್ಕೆ ಅಕ್ಕ ಕಳೆದ ವರ್ಷವೇ ಆತ್ಮಹತ್ಯೆ ಮಾಡಿಕೊಂಡಿದ್ದಳು ಎನ್ನಲಾಗಿದೆ
Rajasthan Jodhpur Gangrape Case: ರಾಜಸ್ಥಾನದ ಜೋಧಪುರದಲ್ಲಿ ಸ್ಥಳೀಯ ಯುವಕರಿಂದ, ಅಕ್ಕ-ತಂಗಿಯರ ಮೇಲಾದ ಅತ್ಯಾಚಾರದ ವಿರುದ್ಧ ಹೋರಾಡಿದರು ನ್ಯಾಯ ಸಿಗದ ಕಾರಣ, ಇಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ಬೆಳಕಿಗೆ ಬಂದಿದೆ.
ರಾಜಸ್ಥಾನದ ಜೋಧ್‌ಪುರ ಗ್ರಾಮೀಣ ಭಾಗದ ಖೇಡಾಪಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸ್ಥಳೀಯ ಯುವಕರು ಸಂತ್ರಸ್ತೆಯರ ನಿತ್ಯ ಬ್ಲ್ಯಾಕ್​ ಮೇಲ್, ಸಾಮೂಹಿಕ ಅತ್ಯಾಚಾರ ಎಸಗುತ್ತಿದ್ದರು ಎನ್ನುವ ಆರೋಪವನ್ನು ಪೊಲೀಸರ ಮುಂದೆ ಮಾಡಿದ್ದರು. ಆದರೆ, ಇದಕ್ಕೆ ನ್ಯಾಯ ಸಿಗದೆ, ಪೊಲೀಸರ ನಿರ್ಲಕ್ಷ್ಯದಿಂದ ಮೃತಪಟ್ಟಿದ್ದಾರೆ ಎನ್ನಲಾಗಿದೆ

ಖಾಸಗಿ ವಿಡಿಯೋ ಬಳಸಿಕೊಂಡು ಬ್ಲ್ಯಾಕ್ ಮೇಲ್

ಈ ಘಟನೆಯು ನಡೆದಿರುವುದು 3ರಿಂದ 4 ವರ್ಷದ ಹಿಂದೆ. ಸ್ಥಳೀಯ ಇ-ಮಿತ್ರಾ ಸೇವಾ ಕೇಂದ್ರದ ಮಹಿಪಾಲ್​ ಎಂಬುವವನು,ತನ್ನ ಹಿರಿಯ ಸಹೋದರಿಯನ್ನು ಪ್ರೀತಿಯ ಬಲೆಗೆ ಬೀಳುವಂತೆ ಮಾಡಿ ಆಕೆಯ ಖಾಸಗಿ ವಿಡಿಯೋಗಳನ್ನು ಚಿತ್ರೀಕರಿಸಿದ್ದ. ಈ ವಿಡಿಯೋಗಳನ್ನು ಬಳಸಿಕೊಂಡು ಬ್ಲ್ಯಾಕ್​ಮೇಲ್ ಮಾಡಲು ಪ್ರಾರಂಭಿಸಿದ. ಆತನ ಸ್ನೇಹಿತರಾದ ಶಿವರಾಜ್, ಗೋಪಾಲ್, ವೀಜಾರಾಮ್, ದಿನೇಶ್, ಮನೋಜ್ ಮತ್ತು ಪುಖರಾಜ್ ಎಂಬುವವರನ್ನು ಕರೆಸಿ, ಆಕೆಯ ಮೇಲೆ ನಾಲ್ಕು ವರ್ಷದಿಂದ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ. ಪೊಲೀಸರಿಗೆ ದೂರು ಕೊಟ್ಟರೂ ಪ್ರಯೋಜನವಾಗದಿದ್ದ ಕಾರಣ, ಸುದೀರ್ಘ ಕಿರುಕುಳಕ್ಕೆ ಬೇಸತ್ತು ದೊಡ್ಡ ಸಹೋದರಿ ಕಳೆದ ಮಾರ್ಚ್ 20 ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು.

ತಂಗಿ ಮೇಲೆ ಅತ್ಯಾಚಾರ ದೂರು

ಇಷ್ಟಕ್ಕೆ ಸುಮ್ಮನಾದ ಕೀಚಕರು ಆಕೆಯ ನಿಧನದ ನಂತರ ತಂಗಿಯನ್ನು ಬಳಕೆ ಮಾಡಿಕೊಂಡರು. ನಿಮ್ಮ ಅಕ್ಕನ ವಿಡಿಯೋಗಳನ್ನು ಇಂಟರ್ನೆಟ್‌ನಲ್ಲಿ ವೈರಲ್ ಮಾಡುತ್ತೇವೆ ಎಂದು ಬೆದರಿಕೆ ಹಾಕಿ ಆಕೆಯನ್ನು ಹೋಟೆಲ್‌ಗಳು ಮತ್ತು ಹೊಲಗಳಿಗೆ ಕರೆದೊಯ್ದು ಅತ್ಯಾಚಾರ ಎಸಗುತ್ತಿದ್ದರು. ಇದೆಲ್ಲ ಸಹಿಸಿ ಸಾಕಾಗಿದ್ದ ಆಕೆ ಕೊನೆಗೆ ಏಪ್ರಿಲ್​ 11ರಂದು ಖೇಡಾಪಾ ಪೊಲೀಸ್ ಠಾಣೆಗೆ ತೆರಳಿ ಎಂಟು ಮಂದಿ ವಿರುದ್ಧ ದೂರು ಕೊಟ್ಟಲು

33 ದಿನವಾದ್ರು ಕ್ರಮ ಕೈಗೊಳ್ಳದ ಪೊಲೀಸರು

ದೂರು ದಾಖಲಾಗಿ 33 ದಿನ ಕಳೆದರು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಪೊಲೀಸರು ನಮ್ಮನ್ನು ಏನೂ ಮಾಡಲು ಸಾಧ್ಯವಿಲ್ಲ ಎಂದು ಆರೋಪಿಗಳು ರಾಜಾರೋಷದಿಂದ ತಿರುಗುತ್ತಿದ್ದರು. ಆದರೂ ಬಿಡದ ಆಕೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಮತ್ತೊಂದು ಲಿಖಿತ ದೂರು ನೀಡಿದ್ದಳು ಎನ್ನಲಾಗುತ್ತಿದೆ.
ಮೇ.15ರಂದು ನೀರಿನ ಟ್ಯಾಂಕರ್​ವೊಂದರ ಮೇಲೆ ನಿಂತು ವಿಷ ಸೇವಿಸಿ, ನಿಂತಿದ್ದಳು. ಅದನ್ನು ಕಂಡ ಸ್ಥಳೀಯರು ಆಕೆಯನ್ನು ಜೋಧ್‌ಪುರದ ಎಂಡಿಎಂ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲೇ ಆಕೆ ಕೊನೆಯುಸಿರೆಳೆದಿದ್ದಾರೆ. ಸದ್ಯ ಜೋಧ್‌ಪುರದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಮಾರ್ವಾಡ್ ರಜಪೂತ ಸಮಾಜದ ಅಧ್ಯಕ್ಷ ಹನುಮಾನ್ ಸಿಂಗ್ ಖಾಂಗಟಾ ನೇತೃತ್ವದಲ್ಲಿ ಪ್ರತಿಭಟನೆ ಮುಂದುವರೆದಿದೆ.
ಪ್ರತಿಭಟನೆಯ ತೀವ್ರತೆಯನ್ನು ಕಂಡುಕೊಂಡ ಪೊಲೀಸರು ಪೊಲೀಸ್ ಚೌಕಿ ಪ್ರಭಾರಿಯನ್ನು ಅಮಾನತು ಮಾಡಿದ್ದಾರೆ. ಅಲ್ಲದೆ, ನಿರ್ಲಕ್ಷ್ಯ ವಹಿಸಿದ ಸಂಬಂಧಿತ ಠಾಣಾಧಿಕಾರಿ ಮತ್ತು ಡಿವೈಎಸ್‌ಪಿ ವಿರುದ್ಧ ಇಲಾಖಾ ತನಿಖೆಗೆ ಆದೇಶಿಸಲಾಗಿದೆ ಎಂದು ಗ್ರಾಮೀಣ ಪೊಲೀಸ್ ವರಿಷ್ಠಾಧಿಕಾರಿ ಪಿ.ಡಿ. ನಿತ್ಯ ತಿಳಿಸಿದ್ದಾರೆ, (ಏಜೆನ್ಸೀಸ್).