ಮಧ್ಯಪ್ರದೇಶದ ರಾಜಾ ರಘುವಂಶಿ ಮತ್ತು ಪತ್ನಿ ಸೋನಮ್
ನವದೆಹಲಿ: ಕೆಲವೇ ದಿನಗಳಲ್ಲಿ 2025 ವರ್ಷ ಕೊನೆಗೊಳ್ಳಲಿದ್ದು, 2026ರ ಹೊಸ ವರ್ಷ ಆಗಮಿಸುತ್ತಿದೆ. ಎಲ್ಲರೂ ಹೊಸ ವರ್ಷವನ್ನು ಸ್ವಾಗತಿಸಲು ಸಿದ್ಧರಾಗುತ್ತಿದ್ದಾರೆ. 2025ರಲ್ಲಿ ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದಂತಹ ಕೊಲೆ ಪ್ರಕರಣಗಳು ನಡೆದಿವೆ. ಬ್ಲೂಡ್ರಮ್ ಕೇಸ್ ನಿಂದ ಹಿಡಿದು ಮೀರ್‌ಪೇಟ್ ಮಾಧವಿ ಪ್ರಕರಣವು ಜನರನ್ನೇ ಬೆಚ್ಚಿಬೀಳಿಸಿದ್ದವು. ಅದರಲ್ಲಿ ನಾಲ್ಕು ಪ್ರಮುಖ ಪ್ರಕರಣಗಳಿವು.
ರಾಜಾ ರಘುವಂಶಿ ಹನಿಮೂನ್ ಕೊಲೆ ಪ್ರಕರಣ
ಮಧ್ಯಪ್ರದೇಶದ ರಾಜಾ ರಘುವಂಶಿ ತನ್ನ ಪತ್ನಿ ಸೋನಮ್ ಜೊತೆ 2025ರ ಮೇ ತಿಂಗಳಲ್ಲಿ ಹನಿಮೂನ್‌ಗೆ ಮೇಘಾಲಯಕ್ಕೆ ಹೋಗಿದ್ದರು. ಅಲ್ಲಿ ಅವರು ಅನುಮಾನಾಸ್ಪದವಾಗಿ ನಾಪತ್ತೆಯಾಗಿದ್ದರು. ಮೊದಲು ಇಬ್ಬರು ನವದಂಪತಿಗಳು ನಾಪತ್ತೆಯಾಗಿದ್ದಾರೆ ಎಂದು ಸುದ್ದಿಯಾಗಿತ್ತು.
ಬಳಿಕ ಕೆಲವು ದಿನಗಳ ನಂತರ ರಾಜಾ ರಘುವಂಶಿ ಅವರ ಮೃತದೇಹ ಸಿಕ್ಕರೆ, ಪತ್ನಿ ಸೋನಮ್ ಮೃತದೇಹ ಪತ್ತೆಯಾಗಿರಲಿಲ್ಲ. ನಾಪತ್ತೆ ಪ್ರಕರಣವನ್ನು ಬೇಧಿಸಿದ್ದ ಮೇಘಾಲಯ ಪೊಲೀಸರು ಅದನ್ನು ಕೊಲೆ ಎಂದು ದೃಢಪಡಿಸಿದರು. ತನಿಖೆಯಲ್ಲಿ ರಾಜಾ ರಘುವಂಶಿ ಸಾವಿಗೆ ಅವರ ಪತ್ನಿಯೇ ಕಾರಣ ಎಂದು ತಿಳಿದ ಬಳಿಕ ಪ್ರಕರಣಕ್ಕೆ ಪ್ರಮುಖ ತಿರುವು ಸಿಕ್ಕಿತ್ತು. ಹನಿಮೂನ್‌ಗೆ ಕರೆದುಕೊಂಡು ಹೋಗಿ ಪತಿಯನ್ನು ಕೊಲೆ ಮಾಡಲಾಗಿದೆ ಎಂಬ ಸುದ್ದಿ ದೇಶಾದ್ಯಂತ ಸಂಚಲನವನ್ನು ಉಂಟು ಮಾಡಿತ್ತು.
ಮನೆಯವರ ಒತ್ತಾಯದ ಮೇರೆಗೆ ರಾಜಾ ರಘುವಂಶಿಯನ್ನು ಮದುವೆಯಾಗಿದ್ದ ಸೋನಮ್, ತನ್ನ ಗೆಳೆಯನೊಂದಿಗೆ ಸೇರಿ ಹನಿಮೂನ್ ಸಂದರ್ಭದಲ್ಲೇ ಸುಪಾರಿ ನೀಡಿ ರಘುವಂಶಿಯನ್ನು ಕೊಲೆ ಮಾಡಿಸಿದ್ದಾಳೆ. ಪೊಲೀಸರು ತನಿಖೆ ನಡೆಸಿ ಸೋನಮ್ ಮತ್ತು ಅವಳ ಪ್ರಿಯಕರ ಹಾಗೂ ಸುಪಾರಿ ಕಿಲ್ಲರ್ಗಳನ್ನು ಬಂಧಿಸಿದ್ದು, ಅವರ ವಿರುದ್ಧ ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಸಿದ್ದಾರೆ.
ಸೌರಭ್ ಬ್ಲೂ ಡ್ರಮ್ ಕೊಲೆ ಪ್ರಕರಣ
ಉತ್ತರ ಪ್ರದೇಶದ ಮೀರತ್‌ನ ಸೌರಭ್ ರಜಪೂತ್ ಅದೇ ಪ್ರದೇಶದ ಮುಸ್ಕಾನ್ ರಸ್ತೋಗಿ ಅವರನ್ನು 2016ರಲ್ಲಿ ಪ್ರೀತಿಸಿ ಮದುವೆಯಾಗಿದ್ದರು. ಮದುವೆಯ ಬಳಿಕ ಪತ್ನಿಯೊಂದಿಗೆ ಕಳೆಯಲು ಸಮಯ ಸಿಗದ ಕಾರಣ ಅವರು ನೌಕಾಪಡೆಯ ಕೆಲಸವನ್ನು ಬಿಟ್ಟಿದ್ದರು. ಆಗಾಗ ಮನೆಯಲ್ಲಿ ಗಲಾಟೆ ನಡೆಯಿತ್ತಿತ್ತು.
2019ರಲ್ಲಿ ದಂಪತಿಗೆ ಹೆಣ್ಣು ಮಗು ಜನಿಸಿತು. ಮಗು ಜನಿಸಿದ ಬಳಿಕ ಸೌರಭ್‌ಗೆ ಭಯಾನಕ ಸಂಗತಿಯೊಂದು ತಿಳಿದುಬಂದಿತು. ಮುಸ್ಕಾನ್ ತನ್ನ ಸ್ನೇಹಿತ ಸಾಹಿಲ್ ಜೊತೆ ಅಕ್ರಮ ಸಂಬಂಧ ಹೊಂದಿದ್ದಾಳೆಂದು ತಿಳಿಯಿತು. ಈ ಬಗ್ಗೆ ಗಲಾಟೆ ನಡೆದು ಡೈವರ್ಸ್ ಹಂತಕ್ಕೂ ಹೋಗಿತ್ತು. ಸೌರಭ್ ತನ್ನ ಮಗಳಿಗಾಗಿ ಹಿಂದೆ ಸರಿದು, ಮತ್ತೆ ಕೆಲಸಕ್ಕೆ ಸೇರಿದ್ದನು.
2023ರಲ್ಲಿ ಅವರು ಕೆಲಸಕ್ಕಾಗಿ ವಿದೇಶಕ್ಕೆ ಹೋಗಿದ್ದನು. 2025 ಫೆಬ್ರವರಿಯಲ್ಲಿ ಮಗಳ ಹುಟ್ಟು ಹಬ್ಬದ ಸಲುವಾಗಿ ಮರಳಿ ಇಂಡಿಯಾಕ್ಕೆ ಬಂದಿದ್ದನು. ಈ ವೇಳೆ ಮನೆಯಲ್ಲಿ ಸಾಹಿಲ್ ಮತ್ತೆ ಮುಸ್ಕಾನ್ ಏಕಾಂತದಲ್ಲಿರುವುದನ್ನು ನೋಡಿ ಗಲಾಟೆ ಮಾಡಿದ್ದನು. ಬಳಿಕ ಇಬ್ಬರು ಸೇರಿ ಮನೆಯಲ್ಲಿಯೇ ಸೌರಭ್ನನ್ನು ಕೊಲೆ ಮಾಡಿ ದೇಹವನ್ನು ತುಂಡು ಮಾಡಿ ನೀರಿನ ಬ್ಲೂ ಡ್ರಮ್ನಲ್ಲಿ ಮುಚ್ಚಿತ್ತು. ಬಳಿಕ ಪ್ರಿಯಕರನ ಜೊತೆ ಪಾರ್ಟಿ ಮಾಡಿದ್ದಳು. ಪ್ರಕರಣವನ್ನು ಬೇಧಿಸಿರುವ ಪೊಲೀಸರು ಇಬ್ಬರನ್ನು ಬಂಧಿಸಿ ಜೈಲಿಗೆ ತಳ್ಳಿದ್ದಾರೆ.
ಹೈದರಾಬಾದ್ನ ಮೀರ್ಪೇಟೆ ನಿವಾಸಿ ಗುರುಮೂರ್ತಿ ಜನವರಿಯಲ್ಲಿ ತನ್ನ ಪತ್ನಿ ಮಾಧವಿಯನ್ನು ಕ್ರೂರವಾಗಿ ಕೊಲೆ ಮಾಡಿದ್ದನು. ಅಕ್ರಮ ಸಂಬಂಧದ ಅನುಮಾನದ ಮೇಲೆ ತನ್ನ ಹೆಂಡತಿಯನ್ನು ಕೊಂದು ಪೊಲೀಸರಿಂದ ತಪ್ಪಿಸಿಕೊಳ್ಳಲು ದೇಹವನ್ನು ತುಂಡು ಕುಕ್ಕರ್ನಲ್ಲಿ ಬೇಯಿಸಿ ನಗರದಾದ್ಯಂತ ಕೊಳದಲ್ಲಿ ಎಸೆದಿದ್ದನು.
ಪ್ರಕರಣವನ್ನು ಭೇದಿಸಿದ್ದ ಪೊಲೀಸರ ಕೈಗೆ ಆರೋಪಿ ಸಿಕ್ಕಿಬಿದ್ದಿದ್ದ. ಗುರುಮೂರ್ತಿ ಈ ಹಿಂದೆ ಸೈನ್ಯದಲ್ಲಿ ಪೂರ್ಣಾವಧಿ ಸೈನಿಕನಾಗಿ ಸೇವೆ ಸಲ್ಲಿಸಿ ನಿವೃತ್ತನಾಗಿದ್ದನು. ಬಳಿಕ ಖಾಸಗಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿದನು. ತನ್ನ ಹೆಂಡತಿಯನ್ನು ಕೊಲೆ ಮಾಡುವ ಉದ್ದೇಶದಿಂದ, ಇಬ್ಬರು ಮಕ್ಕಳನ್ನು ಗುರುಮೂರ್ತಿಯ ಸಂಬಂಧಿಕರ ಮನೆಯಲ್ಲಿ ಮುಂಚಿತವಾಗಿಯೇ ಇರಿಸಿದ್ದ ಎನ್ನಲಾಗಿದೆ. ಜ. 16ರಂದು ಬೆಳಿಗ್ಗೆ 8 ಗಂಟೆಗೆ ಎಚ್ಚರವಾದ ತಕ್ಷಣ, ವೆಂಕಟ ಮಾಧವಿಯೊಂದಿಗೆ ಜಗಳವಾಡಿದನು. ಈ ಪ್ರಕ್ರಿಯೆಯಲ್ಲಿ, ಅವನು ಮಾಧವಿಯ ಕೆನ್ನೆಗೆ ಹೊಡೆದನು, ಇದರಿಂದಾಗಿ ಅವಳು ಗೋಡೆಗೆ ಬಿದ್ದಳು. ಪ್ರಜ್ಞೆ ತಪ್ಪಿದ ನಂತರ ಅವಳ ಮೇಲೆ ಕುಳಿತು ಕತ್ತು ಹಿಸುಕಿ ಕೊಂದಿದ್ದ ಎನ್ನಲಾಗಿದೆ.
ರಾಧಿಕಾ ಯಾದವ್ ಪ್ರಕರಣ
ಹರಿಯಾಣದ ಟೆನಿಸ್ ಆಟಗಾರ್ತಿ ರಾಧಿಕಾ ಯಾದವ್ ಅವರನ್ನು ಆಕೆಯ ತಂದೆ ದೀಪಕ್ ಯಾದವ್ ಬರ್ಬರವಾಗಿ ಕೊಲೆ ಮಾಡಿದ್ದರು. ಅವರು ಬಂದೂಕಿನಿಂದ ಗುಂಡು ಹಾರಿಸಿ ಕೊಂದರು. 25 ವರ್ಷದ ರಾಧಿಕಾ ಯಾದವ್ ಟೆನಿಸ್‌ನಲ್ಲಿ ರಾಷ್ಟ್ರೀಯ ಮನ್ನಣೆ ಗಳಿಸಿದ್ದರು.
ತಂದೆ ಮಗಳ ಟೆನ್ನಿಸ್ ಆಟಕ್ಕೆ ಬೆಂಬಲವಾಗಿ ಕೋಟ್ಯಂತರ ರೂ. ಖರ್ಚು ಮಾಡಿ ಟೆನ್ನಿಸ್ ಆಕಾಡೆಮಿ ಕಟ್ಟಿಕೊಟ್ಟಿದ್ದರು ಎನ್ನಲಾಗಿದೆ. ಆದರೆ ರಾಧಿಕಾ ಆಕಾಡೆಮಿ ಕಡೆ ಗಮನ ಕೊಡದೇ ಕೇವಲ ರೀಲ್ಸ್ನಲ್ಲಿ ಮುಳುಗಿದ್ದಳು, ಇನ್ಪ್ಲೂಯನ್ಸರ್ ಆಗಲು ಇಷ್ಟಪಟ್ಟಿದ್ದಕ್ಕೆ ತಂದೆಯೇ ಅವಳನ್ನು ಗುಂಡಿಕ್ಕಿ ಕೊಲೆ ಮಾಡಿದ್ದನು (ಏಜೆನ್ಸೀಸ್).