ಕಮಾಲ್​ ಆರ್​ ಖಾನ್​, ಟಾಕ್ಸಿಕ್​ ಸಿನಿಮಾ ಪೋಸ್ಟರ್​ 
ದೇಶ

ಯಶ್​ ಹೆದರಿ ಓಡಿ ಹೋದ: ಪಬ್ಲಿಸಿಟಿಗಾಗಿ ಡೇಟ್ ಘೋಷಿಸಿ ಈಗ ಎಸ್ಕೇಪ್ ಆಗಿದ್ದಾರೆ; ಟಾಕ್ಸಿಕ್​ ಮುಂದೂಡಿಕೆಗೆ ಕೆಆರ್​ಕೆ ವ್ಯಂಗ್ಯ | Toxic

ಪ್ರಮುಖ ಮುಖ್ಯಾಂಶಗಳು

  • ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧ
  • ಕದನದ ಕಾರಣ ಟಾಕ್ಸಿಕ್​ ಸಿನಿಮಾ ಮುಂದೂಡಿಕೆ
  • ಧುರಂಧರ್​ ಸಿನಿಮಾಗೆ ಹೆದರಿ ಸಿನಿಮಾ ಮುಂದೂಡಲಾಗಿದೆ ಎಂದ ಕೆಆರ್​ಕೆ
ಮುಂಬೈ: ಮಾರ್ಚ್​ 19 ರಂದು ತೆರೆ ಕಾಣಬೇಕಿದ್ದ ರಾಕಿಂಗ್​ ಸ್ಟಾರ್​ ಯಶ್​ ಅಭಿನಯದ ಟಾಕ್ಸಿಕ್ (Toxic)​ : ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್ ಸಿನಿಮಾ ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಮುಂದುವರೆದ ಹಿನ್ನಲೆಯಲ್ಲಿ ಸಿನಿಮಾವವನ್ನು ಮುಂದೂಡಲಾಗಿದೆ ಎಂದು ಅಧಿಕೃತವಾಗಿ ತಿಳಿಸಲಾಗಿದೆ.
ಟಾಕ್ಸಿಕ್​ ಸಿನಿಮಾದ ಮುಂದೂಡಿಕೆ ಬಗ್ಗೆ ನಾಲಿಗೆ ಹರಿಬಿಟ್ಟಿರುವ ಸ್ವಯಂ ಘೋಷಿತ ಸಿನಿಮಾ ವಿಮರ್ಶಕ ಕಮಾಲ್ ಆರ್​ ಖಾನ್​ ಅಲಿಯಾಸ್​ ಕೆಆರ್​ಕೆ, ಟಾಕ್ಸಿಕ್​ ಬಿಡುಗಡೆಗೆ ಮುನ್ನ ಹೆದರಿ ಓಡಿಹೋಗಿದೆ ಎಂಬ ಹೇಳಿಕೆ ನೀಡಿದ್ದಾರೆ.

ಯಶ್​ ಒಬ್ಬ ಡ್ರಾಮಾ ಮಾಸ್ಟರ್​!

ನಾನು ಇದನ್ನು ಮೊದಲೇ ಹೇಳಿದ್ದೆ, ಯಶ್​ ಒಬ್ಬ ನಾಟಕಕಾರ ಅವನು ಕೇವಲ ಪಬ್ಲಿಸಿಟಿ ಪಡೆಯಲು ಮಾರ್ಚ್​ 19 ರಂದು ಧುರಂಧರ್​ ಜೊತೆಗೆ ಸಿನಿಮಾ ಬಿಡುಗಡೆ ಮಾಡುವುದಾಗಿ ಹೇಳಿದ್ದ, ಈಗ ಓಡಿಹೋಗಿದ್ದಾನೆ ಎಂದು  ಕೆಆರ್​ಕೆ ತಮ್ಮ ಎಕ್ಸ್​ (ಟ್ವಿಟರ್​) ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಧುರಂಧರ್​ 2 ಮೊದಲ ದಿನವೇ 100 ಕೋಟಿ ಗಳಿಸಲಿದೆ
ಇತ್ತ ಮಾರ್ಚ್​ 19 ರಂದು ಬಿಡುಗಡೆಗೆ ತಯಾರಾಗಿ ನಿಂತಿರುವ ರಣವೀರ್​ ಸಿಂಗ್​ ಅಭಿನಯದ ಧುರಂಧರ್​ 2 ಸಿನಿಮಾ ತನ್ನ ಮೊದಲ ದಿನವೇ 100 ಕೋಟಿ ಗಳಿಸಲಿದೆ ಎಂದು ಕೆಆರ್​ಕೆ ಭವಿಷ್ಯ ನುಡಿದಿದ್ದಾರೆ.
ಧುರಂಧರ್​ ಸಿನಿಮಾದ ಮೊದಲ ಭಾಗವು ಸುಮಾರು 1000 ಕೋಟಿಯನ್ನು ಗಳಿಸಿ ಆಲ್​ ಟೈಮ್​ ಬ್ಲಾಕ್​ಬಾಸ್ಟರ್​ ಆಗಿ ಹೊರಹೊಮ್ಮಿತ್ತು. ಇದೀಗ ಇದರ ಎರಡನೇ ಭಾಗವು ಮಾರ್ಚ್​ 19 ರಂದು ತೆರೆ ಕಾಣಲಿದ್ದು, ಪ್ರೇಕ್ಷಕರು ಈ ಸಿನಿಮಾದ ಬಿಡುಗಡೆಗೆ ತುದಿಗಾಲಲ್ಲಿ ಕಾಯುತ್ತಾ ಕುಳಿತ್ತಿದ್ದಾರೆ ಎಂದರೆ ತಪ್ಪಾಗದು.

ಯುದ್ಧದ ಕಾರಣ ಸಿನಿಮಾವನ್ನು ಮುಂದೂಡಿದ್ದೇವೆ

ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ಕವಿದ ಪರಿಣಾಮ ಸಿನಿಮಾದ ಗಳಿಕೆಗೆ ಪೆಟ್ಟು ಬೀಳುವ ಸಾಧ್ಯತೆಯಿರುವ ಕಾರಣ ಸಿನಿಮಾವನ್ನು ಮುಂದೂಡಲಾಗಿದೆ ಎಂದು ಟಾಕ್ಸಿಕ್​ ತಂಡ ಹೇಳಿಕೊಂಡಿದೆ. ಈ ಸಿನಿಮಾವನ್ನು ಜಾಗತಿಕ ಪ್ರೇಕ್ಷಕರನ್ನು ಗುರಿಯಾಗಿಸಿ ನಿರ್ಮಿಸಿದ ಸಿನಿಮಾವಾಗಿದ್ದು, ವರ್ಷಗಳ ಕಾಲ ಪಟ್ಟ ಶ್ರಮವನ್ನು ಹಾಳು ಮಾಡುವುದು ಸರಿಯಲ್ಲ. ಹಾಗೆಯೇ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಕದನದ ಹಿನ್ನಲೆಯಲ್ಲಿ ಈ ಸಿನಿಮಾವನ್ನು ಮಾರ್ಚ್​ 19ರ ಬದಲು ಜೂನ್​ 4 ರಂದು ಬಿಡುಗಡೆ ಮಾಡಲಾಗುವುದು ಎಂದು ತಿಳಸಲಾಗಿದೆ.
ಮುಂದೂಡಿಕೆ ಬೆನ್ನಲ್ಲೇ ಶುರುವಾದ ಟ್ರೋಲಿಂಗ್​!
ರಾಕಿಂಗ್​ ಸ್ಟಾರ್​ ಯಶ್​ ಅಭಿನಯದ ಟಾಕ್ಸಿಕ್ ಸಿನಿಮಾ ಮುಂದೂಡಲಾಗಿದೆ ಎಂಬ ಸುದ್ದಿ ಹೊರ ಬೀಳುತ್ತಿದ್ದಂತೆ,ಇತ್ತ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲಿಂಗ್​ ಪ್ರಾರಂಭವಾಗಿದೆ.
ಯುದ್ಧ ಎನ್ನುವುದು ಕೇವಲ ನೆಪ, ಅಸಲಿ ಭಯ ಇರುವುದು ಧುರಂಧರ್​ನದ ಎಂದು ಒಬ್ಬರು ಹೇಳಿದರೆ, ಇವರು ಕೇವಲ ಹೈಪ್​ ಗೋಸ್ಕರ್​ ಧುರಂಧರ್​ ಜೊತೆಗೆ ಸಿನಿಮಾ ಬಿಡುಗಡೆ ಮಾಡುವುದಾಗಿ ಹೇಳಿದ್ದು ಎಂದಿದ್ದಾರೆ. ಧುರಂಧರ್​ ವಿರುದ್ಧ ಇವರ ಸಿನಿಮಾ ನೆಲಕಚ್ಚಲಿದೆ ಎಂಬ ಕಾರಣಕ್ಕೆ ಬಿಡುಗಡೆಯನ್ನು ಮುಂದೂಡಿದ್ದಾರೆ, ಈಗ ಸುಮ್ಮನೇ ಯುದ್ಧ ಎನ್ನುತ್ತಿದ್ದಾರೆ ಎಂದು ಮತ್ತೊಬ್ಬರು ಕಮೆಂಟ್​ ಮಾಡಿದ್ದಾರೆ,(ಏಜನ್ಸೀಸ್​).