ವಿಷಪೂರಿತ ಸರಾಯಿ ಕುಡಿದು ಮೂವರ ಸಾವು 
ದೇಶ

ಸರಾಯಿ ರೂಪದಲ್ಲಿ ಎದುರಾದ ಯಮಧರ್ಮ: ನಕಲಿ ಮದ್ಯ ಸೇವನೆ; ಮೀರಟ್​ನಲ್ಲಿ ಮೂವರ ದುರ್ಮರಣ..Spurious Liquor

ಪ್ರಮುಖ ಮುಖ್ಯಾಂಶಗಳು

  • ಮೀರಟ್​ನಲ್ಲಿ ನಕಲಿ ಮದ್ಯ ಸೇವನೆ
  • ವಿಷಪೂರಿತ ಸರಾಯಿ ಕುಡಿದು ಮೂವರ ಸಾವು
  • ಪೊಲೀಸರಿಂದ ಮುಂದುವರಿದ ತನಿಖೆ
ಮೀರಟ್​: ಮೀರಟ್​ನ ದೌರಾಲಾ ಪೊಲೀಸ್ ಠಾಣೆ ಪ್ರದೇಶದಲ್ಲಿ ಸ್ಥಳೀಯವಾಗಿ ತಯಾರಿಸಿದ ವಿಷಪೂರಿನ ಮದ್ಯ (Spurious Liquor) ಸೇವಿಸಿ ಮೂವರು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ.
ಮದ್ಯ ಸೇವಿಸಿದ ನಂತರ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಮೂವರನ್ನು ಟೋಲ್ ಪ್ಲಾಜಾ ಬಳಿಯ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಅಸುನಿಗಿದ್ದಾಗಿ ತಿಳಿದು ಬಂದಿದೆ. ಮೃತಪಟ್ಟ ವ್ಯಕ್ತಿಗಳನ್ನು ಅಂಕಿತ್, ಜಿತೇಂದ್ರ ಮತ್ತು ಎಂಬ ಬಾಬುರಾಮ್ ಎಂದು ಗರುತಿಸಲಾಗಿದೆ.

ಪೊಲೀಸರಿಂದ ಮುಂದುವರಿದ ತನಿಖೆ

ಈ ತ್ರಿವಳಿ ಸಾವಿನ ಬಳಿಕ ದೂರನ್ನು ದಾಖಲಿಸಿ ಕೊಂಡಿರುವ ಮೀರಟ್​ ಪೊಲೀಸರು, ಈ ಮೂವರು ಎಲ್ಲಿಂದ ಮತ್ತು ಯಾವ ವ್ಯಕ್ತಿಯಿಂದ ಮಧ್ಯವನ್ನು ಖರೀದಿಸಿದ್ದರೆನ್ನುವುದನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ಎಸ್‌ಎಸ್‌ಪಿ ಅವಿನಾಶ್ ಪಾಂಡೆ ತಿಳಿಸಿದ್ದಾರೆ.
ನಮ್ಮ ಪೊಲೀಸರು ವಿಶೇಷ ತಂಡವನ್ನು ರಚಿಸಿಕೊಂಡಿದ್ದು, ಈ ಸಾವಿನ ಕುರಿತು ತನಿಖೆ ನಡೆಸುತ್ತಿದ್ದಾರೆ, ಶೀಘ್ರವೇ ಈ ವಿಷಪೂರಿತ ಸರಾಯಿಯನ್ನು ತಯಾರಿಸಿದ ಮತ್ತು ಮಾರಾಟ ಮಾಡಿದವನನ್ನು ಬಂಧಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

ಪ್ರಾಥಮಿಕ ವರದಿ ಏನು ಹೇಳುತ್ತಿದೆ?

ಪೊಲೀಸ್ ಮತ್ತು ಅಬಕಾರಿ ಇಲಾಖೆಯ ಆರಂಭಿಕ ವಿಚಾರಣೆಯಲ್ಲಿ, ಟೆಟ್ರಾ-ಪ್ಯಾಕ್​ನಲ್ಲಿ ಈ ಸ್ಥಳೀಯ ಸರಾಯಿಯನ್ನು ಮಾರಾಟ ಮಾಡಲಾಗಿದೆ ಎಂದು ತಿಳಿದುಬಂದಿದೆ. ಆದರೆ ಇತರ ಕಡೆ ಈ ಮದ್ಯವನ್ನು ಪರೀಕ್ಷಿಸಿದಾಗ ಅದರಲ್ಲಿ ವಿಷದ ಅಂಶ ಕಂಡುಬಂದಿಲ್ಲ.
ಮತ್ತೊಂದು ಕಡೆ ದಿಲ್ಕಾಶ್ ಮತ್ತು ಬಂಟಿ ಜೀರಾ ಮಸಾಲಾ ಎಂಬ ಬ್ರಾಂಡಿನ ಸರಾಯಿಯನ್ನು ವಶಕ್ಕೆ ಪಡೆದು ವಿಧಿವಿಜ್ಞಾನ ಕೇಂದ್ರದಲ್ಲಿ ಪರೀಕ್ಷೆ ನಡೆಸಿದಾಗ ಇದರ ಸೇವನೆಯಿಂದಲೇ ಆ ಮೂವರ ಸಾವು ಸಂಭವಿಸಿರುವುದು ತಿಳಿದು ಬಂದಿದೆ.

ಆಸ್ಪತ್ರೆ ಮುಂದೆ ಹೈಡ್ರಾಮಾ

ತಮ್ಮ ಮನೆಯವರು ನಕಲಿ ಮದ್ಯ ಸೇವಿಸಿ ಸಾವನ್ನಪ್ಪಿದ್ದಾರೆಂದು ಮೃತರ ಕುಟುಂಬ ಸದಸ್ಯರು ಆಸ್ಪತ್ರೆ ಮುಂದೆ ಪ್ರತಿಭಟನೆ ಮಾಡಿದ್ದಾರೆ. ಮೃತ ಬಾಬುರಾಮ್ ಮಗ ಸಚಿನ್ ಪೊಲೀಸರಲ್ಲಿ ದೂರನ್ನು ದಾಖಲಿಸಿದ್ದಾನೆ.
ಇವರ ಪ್ರತಿಭಟನೆ ಹೆಚ್ಚಾಗುತ್ತಿದ್ದಂತೆ ಸ್ಥಳಕ್ಕೆ ಅಗಮಿಸಿದ ಜಿಲ್ಲಾ ಮ್ಯಾಜಿಸ್ಟ್ರೇಟ್ ವಿ.ಕೆ. ಸಿಂಗ್, ಎಸ್‌ಎಸ್‌ಪಿ ಅವಿನಾಶ್ ಪಾಂಡೆ ಮತ್ತು ಎಸ್‌ಪಿ ಆಯುಷ್ ವಿಕ್ರಮ್ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದು, ಮೃತರ ಸಾವಿಗೆ ನ್ಯಾಯ ದೊರಕಿಸುವ ಭರವಸೆ ನೀಡಿದ್ದಾರೆ,(ಏಜನ್ಸೀಸ್​).