ಎಲಾನ್ ಮಸ್ಕ್ ಒಡೆತನದ 'ಎಕ್ಸ್'
ನವದೆಹಲಿ: ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಉದ್ಯಮಿ ಎಲಾನ್ ಮಸ್ಕ್ ಒಡೆತನದ ಎಕ್ಸ್ (ಟ್ವಿಟರ್) ಖಾತೆ ಓಪನ್ ಮಾಡಲು ಬಳಕೆದಾರರು ಕೆಲ ಸಮಯ ಪರದಾಡಿದರು.
ಈ ಸಮಸ್ಯೆ ಕೇವಲ ಒಂದು ದೇಶದಲ್ಲಿ ಅಲ್ಲ, ಇಡೀ ಜಗತ್ತಿನಲ್ಲಿ ಕೆಲ ಕಾಲ ಟ್ವಿಟರ್ ಖಾತೆ ಓಪನ್ ಆಗಲಿಲ್ಲ. ಬಳಕೆದಾರರು ವೆಬ್ಸೈಟ್ ಮತ್ತು ಮೊಬೈಲ್ ಅಪ್ಲಿಕೇಶನ್ ಎರಡರಲ್ಲೂ ತೆರೆಯಲು ಹಲವಾರು ಬಾರಿ ಪ್ರಯತ್ನಿಸಿದ್ದಾರೆ. ಆದರೆ, ಸಾಧ್ಯವಾಗಲಿಲ್ಲ. ಪ್ರತಿಷ್ಠಿತ ಸಂಸ್ಥೆಗಳಿಂದ ಹಿಡಿದು ಅನೇಕ ಗಣ್ಯರು, ಉದ್ಯಮಿಗಳು ಬಳಸುವ ಎಕ್ಸ್ನಲ್ಲಿ ಟೆಕ್ನಿಕಲ್ ಸಮಸ್ಯೆ ಕಾಣಿಸಿದ್ದು ಹಲವರಿಗೆ ಅಚ್ಚರಿ ತಂದಿತು.
ಹಲವು ದೇಶಗಳ ಬಳಕೆದಾರರು ಈ ಸಮಸ್ಯೆಯ ಬಗ್ಗೆ ಇತರೆ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಪೋಸ್ಟ್ ಮಾಡುತ್ತಿದ್ದಂತೆ, ಈ ಕುರಿತು ಇನ್ನೂ ಹೆಚ್ಚಿನ ಜನರಿಗೆ ತಿಳಿಯಿತು. ಈಗ, ಎಕ್ಸ್ ಎಂದಿನಂತೆ ವೇಗವಾಗಿ ಕಾರ್ಯನಿರ್ವಹಿಸುತ್ತಿದ್ದು, ಸಮಸ್ಯೆ ಬಗೆಹರಿದಿದೆ. ಇಲ್ಲಿಯವರೆಗೆ, ಇದರ ಬಗ್ಗೆ ಎಕ್ಸ್ನಿಂದ ಯಾವುದೇ ಅಧಿಕೃತ ಮಾಹಿತಿ ಅಥವಾ ಸ್ಪಷ್ಟನೆ ಬಂದಿಲ್ಲ,(ಏಜೆನ್ಸೀಸ್).