ಶಾಲೆಯ ಎದುರು ವಿದ್ಯಾರ್ಥಿಗಳ ಪ್ರತಿಭಟನೆ 
ದೇಶ

ನಿಮ್ಮ ಮಕ್ಕಳಿಗೂ ಇದೇ ಸೌಲಭ್ಯ ಕೊಡ್ತೀರಾ?; ಶಿಥಿಲಗೊಂಡ ಶಾಲೆ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ | School Student Protest

ಪ್ರಮುಖ ಮುಖ್ಯಾಂಶಗಳು

  • ರಾಜಸ್ಥಾನದ ಜೋಧಾವಾಸ್ ಸರ್ಕಾರಿ ಶಾಲೆಯ ದುಸ್ಥಿತಿ
  • ಶಿಥಿಲಗೊಂಡ ಕಟ್ಟಡ ಮತ್ತು ಬಿರುಕು ಬಿಟ್ಟ ಗೋಡೆಗಳು
  • ಶಾಲಾ ಕಟ್ಟಡ ದುರಸ್ತಿ ಮಾಡುವಂತೆ ವಿದ್ಯಾರ್ಥಿಗಳ ಆಕ್ರೋಶ
School Student Protest: ಶಾಲೆ ಅಂದ್ರೆ ಮಕ್ಕಳು ಓದುವ ಜಾಗ, ಅದು ಸುಸಜ್ಜಿತವಾಗಿ, ಸುರಕ್ಷಿತವಾಗಿ ಇರಬೇಕು. ಆದ್ರೆ ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಜೋಧಾವಾಸ್ ಸರ್ಕಾರಿ ಹಿರಿಯ ಪ್ರೌಢಶಾಲೆಯ ಪರಿಸ್ಥಿತಿ ಮಾತ್ರ ಇದಕ್ಕೆ ತದ್ವಿರುದ್ಧವಾಗಿದೆ. ಶಿಥಿಲಗೊಂಡ ಕಟ್ಟಡ, ಬಿರುಕು ಬಿಟ್ಟ ಗೋಡೆಗಳು, ಮುರಿದ ರೇಲಿಂಗ್‌ಗಳ ನಡುವೆ ಮಕ್ಕಳು ಪ್ರಾಣಭಯದಲ್ಲಿ ಪಾಠ ಕೇಳುವಂತಾಗಿದೆ.
ಇಲ್ಲಿಯ, ಶಾಲೆಯ ಕಟ್ಟಡದ ಛಾವಣಿ ಕೂಡ ಹಾಳಾಗಿದ್ದು, ಯಾವಾಗ ಏನು ಬೀಳುತ್ತೋ ಎಂಬ ಆತಂಕದಲ್ಲೇ ವಿದ್ಯಾರ್ಥಿಗಳು ತರಗತಿಗೆ ಬರುತ್ತಿದ್ದಾರೆ. ಈ ಬಗ್ಗೆ ಹಲವು ಸಲ ಅಧಿಕಾರಿಗಳಿಗೆ ದೂರು ನೀಡಿದ್ರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಸಂಬಂಧಪಟ್ಟ ಅಧೀಕಾರಿಗಳು ಮಾತ್ರ ಜಾಣಕುರುಡು ಪ್ರದರ್ಶಿಸುತ್ತಿದ್ದಾರೆ.

ಶಾಲೆಯ ಎದುರು ವಿದ್ಯಾರ್ಥಿಗಳ ಪ್ರತಿಭಟನೆ

ಸಮಸ್ಯೆ ಬಗೆಹರಿಯದ ಹಿನ್ನೆಲೆ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಶಾಲೆಯ ಗೇಟ್‌ ಮುಂದೆ ಕುಳಿತು ಪ್ರತಿಭಟನೆ ಮಾಡಿದರು. ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಶಾಲಾ ಮಕ್ಕಳು, ‘ನಿಮಗೆ ಮಕ್ಕಳಿದ್ದರೆ, ಅವರಿಗೆ ಇದೇ ರೀತಿ ಸೌಲಭ್ಯ ಕೊಡ್ತೀರಾ?’ ಎಂದು ದಿಟ್ಟವಾಗಿ ಪ್ರಶ್ನಿಸಿದ್ದಾರೆ.

ಅನಾಹುತಕ್ಕೂ ಮುನ್ನ ಕ್ರಮ ಕೈಗೊಳ್ಳಿ

ಇನ್ನು, ಶಾಲಾ ಕಟ್ಟಡ ದಿನದಿಂದ ದಿನಕ್ಕೆ ಶೋಚನೀಯ ಸ್ಥಿತಿ ತಲುಪಿದ್ದು, ಯಾವುದೇ ಕ್ಷಣದಲ್ಲಾದರೂ ಅನಾಹುತವಾಗುವ ಆತಂಕವಿದೆ. ಹೀಗಾಗಿ ದೊಡ್ಡ ಅವಘಡ ಆಗೋ ಮುನ್ನ ಶಾಲಾ ಕಟ್ಟಡವನ್ನು ದುರಸ್ತಿ ಮಾಡಿ ಅಥವಾ ಹೊಸ ಕಟ್ಟಡ ಕಟ್ಟಿಕೊಡಿ ಎಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದು, ಸಮಸ್ಯೆ ಬಗೆಹರಿಸುವವರೆಗೆ ಧರಣಿ ಮುಂದುವರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ,(ಏಜೆನ್ಸೀಸ್​).