ಭಾರತದಲ್ಲಿ ತೈಲ ಹಾಗೂ ಗ್ಯಾಸ್​ ದಾಸ್ತಾನು ಎಷ್ಟಿದೆ? ಬಹಿರಂಗ ಪಡಿಸಿ: ಅರವಿಂದ್​ ಕೇಜ್ರಿವಾಲ್​ 
ದೇಶ

ಮಧ್ಯಪ್ರಾಚ್ಯದಲ್ಲಿ ಮಹಾಯುದ್ಧ: ಪೆಟ್ರೋಲ್, ಡೀಸೆಲ್ ದಾಸ್ತಾನು ಎಷ್ಟಿದೆ ಬಹಿರಂಗಪಡಿಸಿ; ಕೇಂದ್ರಕ್ಕೆ ಕೇಜ್ರಿವಾಲ್ ಚಾಲೆಂಜ್​! Arvind Kejriwal Challenges Central Government

ಪ್ರಮುಖ ಮುಖ್ಯಾಂಶಗಳು

  • ಮಧ್ಯಪ್ರಾಚ್ಯದಲ್ಲಿ ನಿಲ್ಲದ ಸಂಘರ್ಷ
  • ಭಾರತದಲ್ಲಿ ತೈಲ ಹಾಗೂ ಗ್ಯಾಸ್​ ದಾಸ್ತಾನು ಎಷ್ಟಿದೆ? ಬಹಿರಂಗ ಪಡಿಸಿ: ಅರವಿಂದ್​ ಕೇಜ್ರಿವಾಲ್​
  • ಕೇಂದ್ರ ಸರ್ಕಾರಕ್ಕೆ ಸವಾಲಾಕಿದ ಆಮ್​ ಆದ್ಮಿ ಮುಖ್ಯಸ್ಥ
  • ಯಾರು ಅವಸರದ ಖರೀದಿ ಮಾಡಬೇಡಿ: ಇಂಧನ ಸಚಿವಾಲಯ
ನವದೆಹಲಿ: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದಿಂದಾಗಿ ಈಡೀ ವಿಶ್ವದಲ್ಲಿಯೇ ಅಶಾಂತಿ ನೆಲೆಸಿರುವುದಂತು ನಿಜವಾಗಿದೆ. ಅದರಂತೆ ಇದರ ಬಿಸಿ ಭಾರತಕ್ಕೂ ಸಹ ತಟ್ಟಿದ್ದು, ಸಿಲಿಂಡರ್​ ಹಾಗೂ ಪೆಟ್ರೋಲ್​-ಡೀಸೆಲ್​ಗಳ ಪೂರೈಕೆಯಲ್ಲಿ ವ್ಯತ್ಯಯ ಕಂಡುಬರುತ್ತಿದೆ.
ಈಗ ಇದರ ಕುರಿತಂತೆ ದೆಹಲಿಯ ಮಾಜಿ ಮುಖ್ಯಮಂತ್ರಿ ಹಾಗೂ ಆಮ್​ ಆದ್ಮಿ ಪಕ್ಷದ ಮುಖ್ಯಸ್ಥನಾಗಿರುವ ಅರವಿಂದ್​ ಕೇಜ್ರಿವಾಲ್​ ಕೇಂದ್ರ ಸರ್ಕಾರಕ್ಕೆ (Arvind Kejriwal Challenges Central Government) ಕೆಲ ಪ್ರಶ್ನೆಗಳನ್ನು ಕೇಳಿದ್ದಾರೆ.

ನಮಗೆ ಮೊದಲು ಮಾಹಿತಿ ಕೊಡಿ!

ತಮ್ಮ ಎಕ್ಸ್​ (ಟ್ವಿಟರ್​) ಖಾತೆಯಲ್ಲಿ ಡೀಸೆಲ್​ಗಾಗಿ ಜನ ಮುಗಿ ಬೀಳುತ್ತಿರುವ ವಿಡಿಯೀವೊಂದನ್ನು ಹಂಚಿಕೊಂಡಿರುವ ಅರವಿಂದ್ ಕೇಜ್ರಿವಾಲ್​, ನಮ್ಮ ಸರ್ಕಾರ ನಮಗೆ ಯಾವುದರ ಕುರಿತು ಸರಿಯಾದ ಮಾಹಿತಿ ನೀಡುತ್ತಿಲ್ಲ.
ನಮ್ಮ ದೇಶದಲ್ಲಿ ಇಂಧನ ಹಾಗೂ ಗ್ಯಾಸ್​ನ ತೊಂದತೆ ಇರುವುದು ಎಲ್ಲರಿಗೂ ತಿಳಿದಿದೆ. ಆದರೆ ನಮ್ಮ ಸರ್ಕಾರ ಪೆಟ್ರೋಲ್​, ಡೀಸೆಲ್​ ಹಾಗೂ ಗ್ಯಾಸ್​ನ ಎಷ್ಟು ದಿನಗಳ ದಾಸ್ತಾನನ್ನು ಹೊಂದಿದೆ ಎಂದು ಏಕೆ ಬಹಿರಂಗ ಪಡಿಸುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಪ್ರಶ್ನಿಸಿದ್ದಾರೆ.

ಶೇರ್​ ಮಾಡಿರುವ ವಿಡಿಯೋಲೇನಿದೆ?

ಮಹಾರಾಷ್ಟ್ರದ ಬುಲ್ದಾನಾ ಜಿಲ್ಲೆಯ ಜನ ಕೈಗೆ ಸಿಕ್ಕ, ಬಕೆಟ್​, ಚೆಂಬು, ಪಾತ್ರೆಗಳನ್ನು ಹಿಡಿದು ಪೆಟ್ರೋಲ್​ ಬಂಕ್​ಗೆ ಜನ ದೌಡಾಯಿಸುತ್ತಿರುವ ವಿಡಿಯೋವೊಂದನ್ನು ಅರವಿಂದ್​ ಕೇಜ್ರಿವಾಲ್​ ಹಂಚಿಕೊಂಡಿದ್ದಾರೆ.
ಪೆಟ್ರೋಲ್​ ಬಂಕ್​ನಲ್ಲಿ ತೈಲ ಖಾಲಿಯಾಗುತ್ತಿರುವ ವದಂತಿ ಹಿನ್ನಲೆ ಈ ರೀತಿ ನೂಕಾಟದಲ್ಲಿ ತೊಡಗಿದ್ದಾರೆ. ಸರ್ಕಾರದಿಂದ ಸೂಕ್ತ ಮಾಹಿತಿ ದೊರೆತದ ಹಿನ್ನಲೆ ಈ ರೀತಿಯ ಘಟನೆಗಳು ದೇಶಾದ್ಯಂತ ನಡೆಯುತ್ತಿದೆ ಎಂದು ಅವರು ಬರೆದುಕೊಂಡಿದ್ದಾರೆ.

ಯಾರು ಅವಸರದ ಖರೀದಿ ಮಾಡಬೇಡಿ!

ಕೆಲ ದಿನಗಳ ಹಿಂದೆ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ್ದ ಇಂಧನ ಸಚಿವಾಲಯದ ಅಧಿಕಾರಿಗಳು, ನಮ್ಮ ದೇಶದಲ್ಲಿ ಸುಮಾರು 45 ದಿನಗಳಿಗಾಗುವಷ್ಟು ಗ್ಯಾಸ್​ ಹಾಗೂ 75 ದಿನಗಳಿಗೆ ಸಾಕಾಗುವಷ್ಟು ತೈಲದ ಪೂರೈಕೆಯಿದೆ.
ಆದರೆ ಜನ ವದಂತಿಗಳಿಗೆ ಕಿವಿಕೊಟ್ಟು ಅವಸರದ ಖರೀದಿ (Panic Buying) ಮಾಡಿದರೆ ತೊಂದರೆ ಉಂಟಾಗುತ್ತದೆ. ಹಾಗೆಯೇ ನಾವು ಮಧ್ಯಪ್ರಾಚ್ಯದಿಂದ ನಮ್ಮ ಹಡಗುಗಳು ಅಗತ್ಯ ಸಮಾಗ್ರಿಗಳನ್ನು ಹೊತ್ತು ತರುವಂತೆ ಮಾಡಲು ಪ್ರಯತ್ನಶೀಲರಾಗಿದ್ದವೆ ಎಂದು ತಿಳಿಸಿದ್ದರು,(ಏಜನ್ಸೀಸ್​).