ರಾತ್ರಿ ಮಲಗಲು ಜಾಗವಿಲ್ಲದೆ ಮೈದಾನದಲ್ಲೇ ಸಾಮೂಹಿಕ ನಿದ್ರೆ
- ಮುಂಬೈನ ಬಿರು ಬಿಸಿಲಿನ ಬೇಗೆಗೆ ತತ್ತರಿಸಿದ ವಲಸೆ ಕಾರ್ಮಿಕರು
- ರಾತ್ರಿ ಮಲಗಲು ಜಾಗವಿಲ್ಲದೆ ಮೈದಾನದಲ್ಲೇ ಸಾಮೂಹಿಕ ನಿದ್ರೆ
- ಕರುಣಾಜನಕ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್
ಮುಂಬೈ: ದೇಶದಲ್ಲಿ ದಿನ ಕಳೆದಂತೆ ಬಿಸಿಲಿನ ತಾಪ ಹೆಚ್ಚುತ್ತಿದ್ದು, ಮನೆಯಲ್ಲಿ ಫ್ಯಾನ್, ಎಸಿ ಎರಡನ್ನೂ ಆನ್ ಮಾಡಿದರೂ ದೇಹದಲ್ಲಿ ಉರಿಯನ್ನು ಕಡಿಮೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಂದರಲ್ಲಿ ದಿನಗೂಲಿ ಮಾಡಿ, ಆ ದಿನದ ಊಟಕ್ಕೆ ಅದೇ ದಿನ ಕೆಲಸ ಮಾಡುವ ಕೂಲಿ ಕಾರ್ಮಿಕರು ಈ ಬಿಸಿಲಿನಿಂದ ತತ್ತರಿಸಿ ಹೋಗಿದ್ದಾರೆಂದರೆ ಸುಳ್ಳಲ್ಲ.
ಬೆಳಿಗ್ಗೆ ಬಿರು ಬಿಸಿಲಿನಲ್ಲಿ ಕೆಲಸ ಮಾಡಿ ರಾತ್ರಿ ಹಾಯಾಗಿ ಮಲಗಲು ಸೂಕ್ತ ವ್ಯವಸ್ಥೆ ಇಲ್ಲದ ನೂರಾರು ಕಾರ್ಮಿಕರು ಮುಂಬೈನ ಮೈದನವೊಂದರಲ್ಲಿ ಸಾಮೂಹಿಕವಾಗಿ ಮಲಗಿರುವ ವಿಡಿಯೋ ಸೋಷಿಯಲ್ ಮೀಡಿಯಾನಲ್ಲಿ ವೈರಲ್ (Viral Video) ಆಗುತ್ತಿದೆ.
ವಿಡಿಯೋನಲ್ಲೇನಿದೆ?
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋ ಮುಂಬೈನ ಭಯಂದರ್ ಎಂಬಲ್ಲಿ ಸೆರೆಹಿಡಿಯಲಾಗಿದೆ ಎಂದು ಹೇಳಲಾಗುತ್ತಿದೆ. ವಿಡಿಯೋನಲ್ಲಿ ನೂರಾರು ಕಾರ್ಮಿಕರು ಗೋಣಿ ಚೀಲ, ಬ್ಯಾನರ್ ಹಾಸಿಕೊಂಡು ಸಾಲಾಗಿ ಮಲಗಿರುವುದನ್ನು ನೋಡಬಹುದಾಗಿದೆ.
ಏಕೆ ಹೀಗೆ ಮೈದಾನದಲ್ಲಿ ಮಲಗಿದ್ದಿರಿ ಎಂದು ಕೇಳಿದಕ್ಕೆ, ನಮ್ಮ ಮೆನೆ ವಾಸಿಸಲು ಬಹಳ ಚಿಕ್ಕದಿದೆ. ರಾತ್ರಿ ಮಲಗಿದಾಗ ಬಹಳ ಸೆಖೆಯಾಗುತ್ತದೆ. ಆದ್ದರಿಂದ ಈ ಮೈದಾನದಲ್ಲಿ ಮಲಗಲು ಬಂದಿದ್ದೆವೆ. ಇಲ್ಲಿರುವ ಬಹಳ ಜನ ಬೇರೆ ರಾಜ್ಯದವರಾಗಿದ್ದು, ವಾಸಿಸಲು ಸರಿಯಾದ ವ್ಯವಸ್ಥರ ಇರದ ಕಾರಣ ಹೀಗೆ ಮಾಡುತ್ತಿದ್ದವೆ ಎಂದು ಹೇಳಿದ್ದಾರೆ.
ನೆಟ್ಟಿಗರ ರಿಯಾಕ್ಷನ್ ಹೇಗಿದೆ?
ಈ ವಿಡಿಯೋ ಸೋಷಿಯಲ್ ಮೀಡಿಯಾನಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರ ಗಮನ ಈ ವಿಡಿಯೋ ಮೇಲೆ ನೆಟ್ಟಿದೆ. ಮುಂಬೈನಲ್ಲಿ ಅಸಂಘಟಿತ ಕಾರ್ಮಿಕರ ಕಷ್ಟ ಏನೆಂದು ತಿಳಿಯುವಂತಾಗಿದೆ ಎಂದು ಒಬ್ಬ ಬಳಕೆದಾರರು ಹೇಳಿದ್ದಾರೆ. ಇಲ್ಲಿ ಮಲಗಿರುವವರು ಬಹುತೇಕರು ಬಿಹಾರ್ ಮೂಲದವರಾಗಿದ್ದಾರೆ. ನೀವು ಎರಡು ರೂಪಾಯಿ ಕಡಿಮೆ ದುಡಿಯಿರಿ ಆದರೆ ನಿಮ್ಮ ಊರನ್ನು ಬಿಟ್ಟು ಇಲ್ಲಿಗೆ ಬರಬೇಡಿ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.
ಮುಂಬೈನಲ್ಲಿ ತಿಂಗಳಿಗೆ ಲಕ್ಷ ದುಡಿಯುವವರಿಗೆ ನೆಟ್ಟಗೆ ಜೀವನ ನಡೆಸಲು ಸಾಧ್ಯವಾಗುವುದಿಲ್ಲ, ಈ ದಿನಗೂಲಿ ಅವರು ಏಕೆ ಇಲ್ಲಿಗೆ ಬಂದು ಅವರ ಪ್ರಾಣ ತೆಗೆದು ಕೊಳ್ಳುತ್ತಾರೆಂದು ಮತ್ತೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ, (ಏಜನ್ಸೀಸ್).