Vande Bharat Sleeper Train ಚಿತ್ರ Instagram
ನವದೆಹಲಿ: ಭಾರತೀಯ ರೈಲ್ವೆಯ ಅತ್ಯಾಧುನಿಕ ಯೋಜನೆಯಾದ ‘ವಂದೇ ಭಾರತ್ ಸ್ಲೀಪರ್ ರೈಲು’ (Vande Bharat Sleeper Train) ಸೇವೆಗಳು ದೇಶದಲ್ಲಿ ಆರಂಭವಾಗಿ ಯಶಸ್ವಿಯಾಗಿ ನಾಲ್ಕು ತಿಂಗಳುಗಳು ಕಳೆದಿವೆ. ಹಗಲು ಪ್ರಯಾಣದ ವಂದೇ ಭಾರತ್ ರೈಲುಗಳ ಯಶಸ್ಸಿನ ಬಳಿಕ, ದೂರದ ಪ್ರಯಾಣಕ್ಕಾಗಿ ಪರಿಚಯಿಸಲಾದ ಈ ಹೊಸ ಪೀಳಿಗೆಯ ಸ್ಲೀಪರ್ ರೈಲಿನ ಒಳಾಂಗಣ ಮತ್ತು ಸೌಕರ್ಯಗಳು ಪ್ರಯಾಣಿಕರ ಮನಗೆಲ್ಲುತ್ತಿವೆ. ಪ್ರಸ್ತುತ, ಈ ಐಷಾರಾಮಿ ರೈಲಿನಲ್ಲಿ ಪ್ರಯಾಣಿಸಿದ ಮಹಿಳಾ ಪ್ರಯಾಣಿಕರೊಬ್ಬರು ತಮ್ಮ ಅನುಭವವನ್ನು ಹಂಚಿಕೊಂಡಿದ್ದು, ಸದ್ಯ ಎಲ್ಲೆಡೆ ವೈರಲ್ ಆಗಿದೆ.
ವಿಡಿಯೋದಲ್ಲೇನಿದೆ?
ವೈರಲ್ ಆಗುತ್ತಿರುವ ವಿಡಿಯೋದಲ್ಲಿ ತ್ರಿವೇದಿ ನೋಡಿ ಹುಡುಗರೇ, ಪ್ರಸ್ತುತ ನಾನು ವಂದೇ ಭಾರತ್ ಸ್ಲೀಪರ್ ಕೋಚ್ನಲ್ಲಿ ಕುಳಿತಿದ್ದೇನೆ. ಇದರಲ್ಲಿರುವ ಪರದೆಗಳನ್ನು ಎಷ್ಟು ಚೆನ್ನಾಗಿ ವಿನ್ಯಾಸಗೊಳಿಸಲಾಗಿದೆ. ದೀಪದ ವಿಷಯಕ್ಕೆ ಬಂದರೆ ಅವುಗಳ ಗುಣಮಟ್ಟ ತುಂಬಾ ಚನ್ನಾಗಿ ಇದೆ. ಜೊತೆಗೆ ಹಾಸಿಗೆ ಮತ್ತು ದಿಂಬುಗಳು ಉತ್ತಮವಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಹೇಳಿದ್ದಾರೆ.
ಆದಾಗ್ಯೂ, ಭಾರತದಲ್ಲಿ ಈ ಹೊಸ ತಲೆಮಾರಿನ ಸ್ಲೀಪರ್ ರೈಲಿನಲ್ಲಿ ಪ್ರಯಾಣಿಸಿದ ನನ್ನ ಮೊದಲ ಅನುಭವ ಇದಾಗಿದ್ದು, ನನ್ನ ಮನಮುಟ್ಟುವ ಅನುಭವವಾಗಿತ್ತು ಎಂದು ವಿಡಿಯೋಗೆ ಶೀರ್ಷಿಕೆ ನೀಡಿದ್ದಾರೆ.
ಸಾರ್ವಜನಿಕರು ಸ್ವಚ್ಛತೆ ಕಾಪಾಡಿಕೊಳ್ಳಬೇಕು
ವಿಡಿಯೋ ವೈರಲ್ ಆಗುತ್ತಿದ್ದಂತೆ, ಸಾಮಾಜಿಕ ಮಾಧ್ಯಮ ಬಳಕೆದಾರರು ಈ ರೀತಿಯಾದ ರೈಲನ್ನು ಒದಗಿಸಿದ್ದಕ್ಕಾಗಿ ಸರ್ಕಾರವನ್ನು ಶ್ಲಾಘಿಸಿದ್ದಾರೆ. ಈಗ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವ ಜವಬ್ದಾರಿ ಸಾರ್ವಜನಿಕರ ಮೇಲಿದೆ ಎಂದು ಹೇಳಿದರು. ಇನ್ನೊಬ್ಬ ಬಳಕೆದಾರರು "ಸರ್ಕಾರ ಯಾವಾಗಲೂ ಒದಗಿಸುತ್ತದೆ ಆದರೆ ಭಾರತೀಯ ಸಾರ್ವಜನಿಕರಿಗೆ ನೈರ್ಮಲ್ಯ ಮತ್ತು ಶುಚಿತ್ವವನ್ನು ಹೇಗೆ ಕಾಪಾಡಿಕೊಳ್ಳಬೇಕೆಂದು ತಿಳಿದಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬ ಬಳಕೆದಾರರು ನನ್ನ ಸಹ ಭಾರತೀಯರು ಈ ರೈಲನ್ನು ಹೇಗೆ ನಡೆಸಿಕೊಳ್ಳುತ್ತಾರೆಂದು ನೋಡಲು ನಾನು ಬಯಸುತ್ತೇನೆ. ಸರ್ಕಾರ ತನ್ನ ಕೆಲಸವನ್ನು ಮಾಡಿದೆ, ಈಗ ಸ್ವಲ್ಪ ನಾಗರಿಕ ಪ್ರಜ್ಞೆಯನ್ನು ಇಟ್ಟುಕೊಳ್ಳುವ ಸರದಿ ನಮ್ಮದಾಗಿದೆ" ಎಂದು ಕಾಮೆಂಟ್ ಮಾಡಿದ್ದಾರೆ.
ವಂದೇ ಭಾರತ್ ರೈಲುಗಳು
ಫೆಬ್ರವರಿ 2019 ರಲ್ಲಿ ನವದೆಹಲಿ-ವಾರಣಾಸಿ ಮಾರ್ಗದಲ್ಲಿ ಪ್ರಾರಂಭವಾದ ವಂದೇ ಭಾರತ್ ರೈಲುಗಳು ಒಂದು ಲಕ್ಷ ಟ್ರಿಪ್‌ಗಳ ಮೂಲಕ 9.1 ಕೋಟಿಗೂ ಹೆಚ್ಚು ಪ್ರಯಾಣಿಕರಿಗೆ ಸೇವೆ ಸಲ್ಲಿಸಿವೆ. FY25-25 ರಲ್ಲಿ ಮಾತ್ರ, ಸರಿಸುಮಾರು 3.98 ಕೋಟಿ ಪ್ರಯಾಣಿಕರು ಈ ಸೇವೆಯನ್ನು ಪಡೆದುಕೊಂಡಿದ್ದಾರೆ. ಆದಾಗ್ಯೂ, FY2024-25 ರಲ್ಲಿ 2.97 ಕೋಟಿ ಪ್ರಯಾಣಿಕರಿಂದ ಸುಮಾರು 34 ಪ್ರತಿಶತದಷ್ಟು ವರ್ಷದಿಂದ ವರ್ಷಕ್ಕೆ ಅದ್ಭುತ ಬೆಳವಣಿಗೆಯನ್ನು ಪ್ರತಿಬಿಂಬಿಸುತ್ತದೆ.
ಮೂರು ತಿಂಗಳ ಅವಧಿಯಲ್ಲಿ ತನ್ನ ಮೊದಲ 119 ಟ್ರಿಪ್‌ಗಳಲ್ಲಿ, ಕಾಮಾಕ್ಯ-ಹೌರಾ ವಂದೇ ಭಾರತ್ ಸ್ಲೀಪರ್ ಸೇವೆಯು 1.21 ಲಕ್ಷ ಪ್ರಯಾಣಿಕರನ್ನು ಹೊತ್ತೊಯ್ದು 100 ಪ್ರತಿಶತಕ್ಕಿಂತ ಹೆಚ್ಚಿನ ಪ್ರಯಾಣಿಕರನ್ನು ತಲುಪಿದೆ. ಈ ಕಾರ್ಯಕ್ಷಮತೆಯು ಪ್ರೀಮಿಯಂ ರಾತ್ರಿ ರೈಲು ಸೇವೆಗಳಲ್ಲಿ ಹೆಚ್ಚಿನ ಬೇಡಿಕೆ ಮತ್ತು ಬಲವಾದ ಪ್ರಯಾಣಿಕರ ನಂಬಿಕೆಯನ್ನು ಎತ್ತಿ ತೋರಿಸಿದೆ (ಏಜೆನ್ಸೀಸ್).