ವಂದೇ ಭಾರತ್ ಕ್ಯಾಬಿನ್‌ನಲ್ಲಿ ರೀಲ್ಸ್ ರಂಪಾಟ!(Vande Bharat ಚಿತ್ರ X)
ಚಂಢೀಗಡ: ದೇಶದ ಅತ್ಯಂತ ವೇಗದ 'ವಂದೇ ಭಾರತ್' (
ರೈಲಿನ ನಿರ್ಬಂಧಿತ ಪ್ರದೇಶವಾದ ಲೋಕೋ ಪೈಲಟ್ (ಚಾಲಕರ) ಕ್ಯಾಬಿನ್‌ನೊಳಗೆ ಮಹಿಳೆಯೊಬ್ಬರು ಕುಟುಂಬಸಮೇತ ಪ್ರವೇಶಿಸಿ ರೀಲ್ಸ್ ಚಿತ್ರೀಕರಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಲದಲ್ಲಿ ವೈರಲ್ ಆಗುತ್ತಿದ್ದಂತೆಯೇ ರೈಲ್ವೆ ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.
ಏನಿದು ಪ್ರಕರಣ?
ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ಹರಿದಾಡುತ್ತಿರುವ ವೀಡಿಯೊದಲ್ಲಿ ಲೋಕೋ ಪೈಲಟ್‌ನ ಹೆಂಡತಿಯೇ ರೀಲ್ಸ್ ಮಾಡಿರುವುದು ತಿಳಿದುಬಂದಿದೆ. ಸರಿತಾ ಯಾದವ್ ಎಂಬ ಮಹಿಳೆ ಮತ್ತೊಬ್ಬ ವ್ಯಕ್ತಿಯೊಂದಿಗೆ ಚಾಕಕನ ಕುರ್ಚಿಯ ಮೇಲೆ ಕುಳಿತು, ಕ್ಯಾಮೆರಾಗೆ ಪೋಸ್ ನೀಡುತ್ತಾ ರೀಲ್ಸ್ ಮಾಡುತ್ತಿರುವುದು ಈ ವೀಡಿಯೊದಲ್ಲಿ ಕಂಡುಬಂದಿದೆ.
ರೈಲ್ವೇ ಇಲಾಖೆಯಿಂದ ತನಿಖೆಗೆ ಚಾಲನೆ
ಈ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ಭಾರತೀಯ 'ರೈಲ್ವೇ ಸೇವಾ' (Railway Seva) ತಕ್ಷಣ ಸ್ಪಂದಿಸಿದೆ. ಘಟನೆಗೆ ಸಂಬಂಧಿಸಿದ ರೈಲು ಸಂಖ್ಯೆ, ದಿನಾಂಕ, ಸಮಯ ಮತ್ತು ಸಂಪರ್ಕ ಸಂಖ್ಯೆಯ ವಿವರಗಳನ್ನು ನೀಡುವಂತೆ ವಿನಂತಿಸಿದ್ದು, ಭದ್ರತಾ ನಿಯಮಗಳ ಉಲ್ಲಂಘನೆಯಾಗಿದೆಯೇ ಎಂಬುದರ ಕುರಿತು ಪರಿಶೀಲನೆ ನಡೆಸುವುದಾಗಿ ತಿಳಿಸಿದೆ.
ಇನ್‌ಸ್ಟಾಗ್ರಾಮ್ ಖಾತೆ ನಿಷ್ಕ್ರಿಯ
ಘಟನೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ, ವೀಡಿಯೊದಲ್ಲಿದ್ದ ಮಹಿಳೆಗೆ ಸೇರಿದೆ ಎನ್ನಲಾದ ಇನ್‌ಸ್ಟಾಗ್ರಾಮ್ ಪ್ರಸ್ತುತ ಲಭ್ಯವಿಲ್ಲ. ತನಿಖೆಯ ಭಯದಿಂದ ಖಾತೆಯನ್ನು ಡಿಲೀಟ್ ಮಾಡಲಾಗಿದೆಯೇ ಅಥವಾ ನಿಷ್ಕ್ರಿಯಗೊಳಿಸಲಾಗಿದೆಯೇ ಎಂಬುದು ಇನ್ನು ತಿಳಿದುಬಂದಿಲ್ಲ.
ನೆಟ್ಟಿಗರ ಪ್ರತಿಕ್ರಿಯೆ
ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಪರ-ವಿರೋಧ ಚರ್ಚೆಗಳು ಪ್ರಾರಂಭವಾಗಿವೆ. ಒಬ್ಬ ಬಳಕೆದಾರ "ಇದು ಹಿಂಬದಿಯ ಕ್ಯಾಬಿನ್ ಇರಬಹುದು" ಎಂದು ಅಭಿಪ್ರಾಯಪಟ್ಟರೆ, ಮತ್ತೊಬ್ಬರು "ಇಂತಹ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು" ಎಂದು ಆಗ್ರಹಿಸಿದ್ದಾರೆ (ಏಜೆನ್ಸೀಸ್).