ರಸ್ತೆ ಮಧ್ಯೆ ನಮಾಜ್​ ಮಾಡುತ್ತಿರುವ ಮಹಿಳೆ 
ದೇಶ

ರಸ್ತೆ ಮಧ್ಯೆ ಕುಳಿತು ನಮಾಜ್ ಮಾಡಿದ ಮಹಿಳೆ: ವಾಹನ ಸಂಚಾರಕ್ಕೆ ಅಡ್ಡಿ; ವಿಡಿಯೋ ವೈರಲ್ | Namaz

ಪ್ರಮುಖ ಮುಖ್ಯಾಂಶಗಳು

  • ರಸ್ತೆ ಮಧ್ಯೆ ನಮಾಜ್​ ಮಾಡಿದ ಮಹಿಳೆ
  • ಮಹಿಳೆ ನಮಾಜ್ ಕಾರನ ವಾಹನ ಸಂಚಾರ ಸ್ಥಗಿತ
  • ಮಹಿಳೆಯೊಬ್ಬಳು ಮಾನಸಿಕ ಅಸ್ವಸ್ಥೆ ಎಂದ ಪೊಲೀಸರು
ಕೇರಳ: ಮಹಿಳೆಯೊಬ್ಬಳು ರಸ್ತೆ ಮಧ್ಯೆ ನಮಾಜ್ (Namaz) ಮಾಡಿದ ಪರಿಣಾಮ ಜನಸಂಚಾರಕ್ಕೆ ಅಡ್ಡಿಯುಂಟಾದ ಘಟನೆ ಕೇರಳದ ಪಾಲಕ್ಕಾಡ್‌ ಪಟ್ಟಣದ ಐಎಂಎ ಜಂಕ್ಷನ್ ಬಳಿ ನಡೆದಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಬುಧವಾರ(ಜ.28) ರ ಮಧ್ಯಾಹ್ನ ಮಹಿಳೆ ರಸ್ತೆಯ ಮೇಲೆ ಕುಳಿತು ಪ್ರಾರ್ಥನೆ ಮಾಡಲು ಪ್ರಾರಂಭಿಸಿದಳು, ಆದರೆ ಎರಡೂ ಬದಿಗಳಲ್ಲಿ ವಾಹನಗಳು ಹಾದುಹೋಗುತ್ತಲೇ ಇದ್ದವು. ಹಲವಾರು ವಾಹನ ಚಾಲಕರು ಮತ್ತು ಪಾದಚಾರಿಗಳು ಅವಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಮನವೊಲಿಸಲು ಪ್ರಯತ್ನಿಸಿದರೂ ಸಹ ಆಕೆ ಅವರ ಮಾತಿಗೆ ಕ್ಯಾರೆ ಎನ್ನಲಿಲ್ಲ ಎಂದು ತಿಳಿಸಿದ್ದಾರೆ.
ರಸ್ತೆ ಮಧ್ಯೆ ಕುಳಿತು ನಮಾಜ್​ ಮಾಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್​ ಆಗುತ್ತಿದ್ದು, ವಿಡಿಯೋನಲ್ಲಿ ಅಂದಾಜು ಅರವತ್ತರ ಆಸುಪಾಸಿನ ಮಹಿಳೆ ಬಿಳಿ ಉಡುಪನ್ನು ಧರಿಸಿ ವಾಹನಗಳ ದಟ್ಟನೆಯ ನಡುವೆ ಪಾರ್ಥನೆ ಸಲ್ಲಿಸುತ್ತಿರುವುದನ್ನು ನೋಡಬಹುದಾಗಿದೆ.
ಈ ವಿಡಿಯೋಗೆ ಭಾರಿ ವಿರೋಧ ಕಂಡುಬಂದಿದ್ದು, ಈ ಮಹಿಳೆಗೆ ನಾಗರಿಕ ಪ್ರಜ್ಞೆ ಎನ್ನುವುದೇ ಇಲ್ಲ ಎಂದು ಒಬ್ಬರು ಹೇಳಿದರೆ, ಇವಳಿಗೆ ಪಾರ್ಥನೆ ಮಾಡಲು ಬೇರೆ ಸ್ಥಳವೇ ಇರಲಿಲ್ಲವೇ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.
ಪೊಲೀಸರ ಪ್ರಕಾರ, ಈ ಮಹಿಳೆಯು ತನ್ನ ಕೌಟುಂಬಿಕ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಪಾಲಕ್ಕಾಡ್‌ನಲ್ಲಿರುವ ಜಿಲ್ಲಾಡಳಿತ ಕಚೇರಿಗಳಿಗೆ ಭೇಟಿ ನೀಡುತ್ತಿದ್ದಳು. ಈಕೆ ಹಠಾತ್ತನೆ ಸಾರ್ವಜನಿಕವಾಗಿ ಪ್ರಾರ್ಥನೆ ಸಲ್ಲಿಸಿದ್ದು ಪ್ರತಿಭಟನೆಯ ಒಂದು ರೂಪದಂತೆ ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಮಹಿಳೆಯು ಕೊಲ್ಲೆಂಗೋಡ್​ಗೆ ಸೇರಿದವಳಾಗಿದ್ದು, ಆಕೆ ಸ್ವಲ್ಪ ಮಾನಸಿಕವಾಗಿ ಅಸ್ವಸ್ಥಳಂತೆ ಕಾಣುತ್ತಿದ್ದ ಹಿನ್ನಲೆ ಪೊಲೀಸರು ಪ್ರಕರಣ ದಾಖಲಿಸದಿರಲು ನಿರ್ಧರಿಸಿದರು. ಬದಲಾಗಿ, ಆಕೆಯ ಸಹೋದರನನ್ನು ಠಾಣೆಗೆ ಕರೆಸಿ ಎಚ್ಚರಿಕೆ ನೀಡಿ ಮಹಿಳೆಯನ್ನು ಅವನ ಜತೆ ಕಳುಹಿಸಲಾಗಿದೆ ಎಂದು ಪೊಲೀಸ್​ ಅಧಿಕಾರಿ ತಿಳಿಸಿದ್ದಾರೆ,(ಏಜನ್ಸೀಸ್).