ಆರೋಪಿ ಬಿಲಾಲ್ (ಎಡ), ಮೃತ ಮಹಿಳೆ ಉಮಾ (ಬಲ)
- 2 ವರ್ಷಗಳಿಂದ ಲಿವ್-ಇನ್ ಸಂಬಂಧದಲ್ಲಿ ಇದ್ದರು
- ಪ್ರಿಯಕರನ ಜತೆಗಿರಲು 13 ವರ್ಷದ ಮಗನನ್ನು ತೊರೆದಳು
- ಪ್ರಿಯಕರನ ಹಿಂದೆ ಓದವಳು ಕಡೆಗೆ ಸೇರಿದ್ದು ಮಸಣ
ಉತ್ತರ ಪ್ರದೇಶ: ಲಿವ್-ಇನ್ ಸಂಬಂಧ ಉಳಿಸಿಕೊಳ್ಳಲು ತನ್ನ 13 ವರ್ಷ ಮಗನನ್ನೇ ತೊರೆದ ಮಹಿಳೆ ಇದೀಗ ಬರ್ಬರವಾಗಿ ಪ್ರಿಯಕರನಿಂದ ಹತ್ಯೆಯಾದ ಘಟನೆ ಬೆಳಕಿಗೆ ಬಂದಿದೆ.
ತನ್ನೊಂದಿಗೆ ಲಿವ್-ಇನ್ ರಿಲೇಷನ್ಶಿಪ್ನಲ್ಲಿದ ಮಹಿಳೆಯ ಶಿರಚ್ಛೇದ ಮಾಡಿದ ಪ್ರಿಯಕರ, ಆಕೆಯ ಶವವನ್ನು ಅರಣ್ಯ ಪ್ರದೇಶದಲ್ಲಿ ಎಸೆದು ಪರಾರಿಯಾಗಿದ್ದ. ಮೃತಳನ್ನು ಉಮಾ (30) ಎಂದು ಗುರುತಿಸಲಾಗಿದ್ದು, ಆರೋಪಿ ಬಿಲಾಲ್ನನ್ನು ಬಂಧಿಸಲಾಗಿದೆ. ಈತ ವೃತ್ತಿಯಲ್ಲಿ ಟ್ಯಾಕ್ಸಿ ಚಾಲಕ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ಸದ್ಯ ಆರೋಪಿಯನ್ನು ಬಂಧಿಸಿರುವ ಖಾಕಿ ಪಡೆ, ಆತನಿಂದ ಘಟನೆಯ ಸಂಪೂರ್ಣ ವಿವರವನ್ನು ಕಲೆಹಾಕಿದ್ದಾರೆ.
ಕೊಲೆಗೆ ಏನು ಕಾರಣ?
ಆರೋಪಿ ಮತ್ತೊಂದು ಮದುವೆಗೆ ತಯಾರಿ ನಡೆಸುತ್ತಿದ್ದ. ಈ ವಿಷಯ ಉಮಾಳಿಗೆ ಗೊತ್ತಾಯಿತು. ಈ ವಿಚಾರವನ್ನು ಬಿಲಾಲ್ ಉಮಾಳಿಗೆ ಹೇಳಿರಲಿಲ್ಲ. ಮತ್ತೊಬ್ಬಳೊಂದಿಗೆ ಮದುವೆ ಆಗಬೇಕು ಎಂಬ ಕಾರಣಕ್ಕೆ, ಉಮಾ ಜತೆಗಿನ ಸಂಬಂಧ ಮುರಿದುಕೊಳ್ಳಲು ಬಿಲಾಲ್ ಕೊಲೆಗೈಯಲು ಸಂಚು ಹೂಡಿದ್ದ. ಕಾರಿನಲ್ಲಿ ಉಮಾಳನ್ನು ಅರಣ್ಯ ಪ್ರದೇಶಕ್ಕೆ ಕರೆದೊಯ್ದ ಆತ, ಆಕೆಯ ತಲೆಯನ್ನು ಕಡಿದು, ದೇಹವನ್ನು ಹರಿಯಾಣದ ಅರಣ್ಯ ಪ್ರದೇಶದ ಬಳಿ ಎಸೆದು ಹೋಗಿದ್ದಾಗಿ ಪೊಲೀಸರು ತಿಳಿಸಿದ್ದಾರೆ,(ಏಜೆನ್ಸೀಸ್).