Honeymoon ಸಾಂದರ್ಭಿಕ ಚಿತ್ರ 
ದೇಶ

ಹನಿಮೂನ್‌ನಲ್ಲಿ ಮುಟ್ಟಾಗಿದ್ದಕ್ಕೆ ನವವಧು ಮೇಲೆ ಅಮಾನುಷ ಹಲ್ಲೆ, ಕತ್ತು ಹಿಸುಕಿ ವಿಕೃತಿ ಮೆರೆದ ಕಿರಾತಕ! Honeymoon

ಉತ್ತರ ಪ್ರದೇಶ: ಹನಿಮೂನ್ ಸಮಯದಲ್ಲಿ (

Honeymoon)

ಋತುಸ್ರಾವ ಆಯಿತೆಂಬ ಕಾರಣಕ್ಕೆ ನವ ವಧುವಿನ ಮೇಲೆ ಪತಿ ಭೀಕರ ಹಲ್ಲೆ ನಡೆಸಿ, ಗಂಟಲು ಹಿಸುಕಿ ಕೊಲೆಗೆ ಯತ್ನಿಸಿರುವ ಆಘಾತಕಾರಿ ಘಟನೆಯೊಂದು ಉತ್ತರ ಪ್ರದೇಶದ ಗೋರಖ್​ಪುರದಲ್ಲಿ ಬೆಳಕಿಗೆ ಬಂದಿದೆ.

ಹನಿಮೂನ್‌ನಲ್ಲಿ ದೌರ್ಜನ್ಯ

ಗೋರಖ್‌ಪುರ ಮೂಲದ ಸಂತ್ರಸ್ತೆ ಹಾಗೂ ದೆಹಲಿ ಮೂಲದ ನಿಖಿಲ್ ಮಿಶ್ರಾ ಎಂಬಾತನ ಮದುವೆ 2023ರ ಮೇ 30ರಂದು ದೆಹಲಿಯಲ್ಲಿ ನಡೆದಿತ್ತು. ವಿವಾಹದ ವೇಳೆ ವಧುವಿನ ಕಡೆಯವರು ಸುಮಾರು 20 ಲಕ್ಷ ರೂ. ನಗದು ಸೇರಿದಂತೆ ಒಟ್ಟು 40 ಲಕ್ಷ ರೂ. ಮೌಲ್ಯದ ವರದಕ್ಷಿಣೆ ನೀಡಿದ್ದರು. ಆದರೆ, ದೆಹಲಿಯ ಅತ್ತೆ ಮನೆಗೆ ತೆರಳಿದ ದಿನದಿಂದಲೇ ವರದಕ್ಷಿಣೆ ವಿಚಾರವಾಗಿ ನವವಧುವಿಗೆ ಕಿರುಕುಳ ಪ್ರಾರಂಭವಾಗಿತ್ತು.
ಮದುವೆಯಾದ ಒಂದು ತಿಂಗಳ ಬಳಿಕ ಅಂದರೆ 2023ರ ಜುಲೈ 4ರಂದು ನವದಂಪತಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಕ್ಕೆ ಹನಿಮೂನ್‌ಗೆ ತೆರಳಿದ್ದರು. ಈ ಪ್ರವಾಸದ ವೇಳೆ ವಧುವಿಗೆ ತೀವ್ರ ಹೊಟ್ಟೆನೋವು ಕಾಣಿಸಿಕೊಂಡ ಹಿನ್ನಲೆ ಋತುಚಕ್ರ ಪ್ರಾರಂಭವಾಗಿತ್ತು. ಇದರಿಂದ ಕೋಪಗೊಂಡ ಪತಿ ಮೂಡ್​ ಹಾಳುಮಾಡಿದೆ ಎಂದು ಆಕ್ರೋಶಗೊಂಡಿದ್ದು, ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಕಪಾಳಮೋಕ್ಷ ಮಾಡಿ, ಒದ್ದು, ಗಂಟಲು ಹಿಸುಕಲು ಯತ್ನಿಸಿದ್ದಾನೆ. ಸಂತ್ರಸ್ತೆಯ ಚೀರಾಟ ಕೇಳಿ ಹೋಟೆಲ್ ಸಿಬ್ಬಂದಿ ಮಧ್ಯಪ್ರವೇಶಿಸಿ ಆಕೆಯನ್ನು ರಕ್ಷಿಸಿದ್ದಾರೆ.

ಮನೆಯಿಂದ ಹೊರಹಾಕಿದ ಅತ್ತೆ ಮನೆಯವರು

ಈ ಘಟನೆಯ ಬಳಿಕ ಪತಿ ಅವರ ಮಾವನಿಗೆ ಕರೆ ಮಾಡಿ ಮಗಳನ್ನು ವಾಪಾದ್ದು ಕರೆದುಕೊಂಡು ಹೋಗುವಂತೆ ಹೇಳಿದ್ದಾನೆ. ಪ್ರವಾಸ ಮುಗಿಸಿ ದೆಹಲಿಗೆ ಬಂದಾಗ ಅತ್ತೆ ಹಾಗೂ ಮೈದುನಿ ಬಳಿ ಸಂತ್ರಸ್ತೆ ತನಗಾದ ತೊಂದರೆಯನ್ನು ಹೇಳಿಕೊಂಡಿದ್ದರೆ, ಅವರು ಸಾಂತ್ವಾನ ಹೇಳುವ ಬದಲಿಗೆ ಮಾನಸಿಕ ಕಿರುಕುಳ ನೀಡಿದ್ದಾರೆ. ಅಂತಿಮವಾಗಿ ಮದುವೆಯಾದ 45 ದಿನಗಳಲ್ಲೇ ಆಕೆಯನ್ನು ಮನೆಯಿಂದ ಹೊರಹಾಕಿದ್ದಾರೆ. ಮಧ್ಯಸ್ಥಿಕೆಗೆ ಬಂದ ಸಂತ್ರಸ್ತೆಯ ತಂದೆಗೂ ಅತ್ತೆ ಮನೆಯವರು ಅವಮಾನ ಮಾಡಿದ್ದು, ವರದಕ್ಷಿಣೆ ವಸ್ತುವನ್ನು ವಾಪಸ್ ನೀಡದೆ ಬೆದರಿಕೆ ಹಾಕಿ ಕಳುಹಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಪೊಲೀಸ್ ದೂರು ದಾಖಲು

2023ರಿಂದ ಸಂತ್ರಸ್ತೆಯ ಕುಟುಂಬಸ್ಥರು ಪೊಲೀಸ್ ಠಾಣೆಗೆ ಅಲೆಯುತ್ತಿದ್ದರೂ ಅಲ್ಲಿನ ಅಧಿಕಾರಿಗಳು ಈವರೆಗೂ ಪ್ರಕರಣವನ್ನು ದಾಖಲಿಸಿಕೊಂಡಿರಲಿಲ್ಲ. ಅಂತಿಮವಾಗಿ ಗೋರಖ್‌ಪುರ ಜಂಟಿ ಪೊಲೀಸ್ ಕಮಿಷನರ್ ಡಾ. ಕೌಸ್ತುಭ್ ಅವರ ಮಧ್ಯಪ್ರವೇಶದ ನಂತರ, ಆರೋಪಿ ಪತಿ ನಿಖಿಲ್ ಮಿಶ್ರಾ, ಆತನ ತಾಯಿ ಹಾಗೂ ಸಹೋದರಿಯ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ (ಏಜೆನ್ಸೀಸ್​).