ಹನಿಟ್ರ್ಯಾಪ್​ ಜಾಲದ ಆರೋಪಿ ಪಲ್ಲವಿ ಸಿಂಗ್ ರಜಪೂತ್  
ದೇಶ

ಚೆಂದದ ಯುವಕರೇ ಈಕೆಯ ಟಾರ್ಗೆಟ್​! ಈ ಮೋಹಕ ಬ್ಯೂಟಿಯ ಬಲೆಗೆ ಬಿದ್ದರೆ ಕೋಟ್ಯಂತರ ರೂಪಾಯಿ ಕ್ಷಣದಲ್ಲೇ ಮಾಯ | Dating Apps

ಪ್ರಮುಖ ಮುಖ್ಯಾಂಶಗಳು

  • ಡೇಟಿಂಗ್ ಆ್ಯಪ್‌ಗಳಲ್ಲಿ 'ಹಾಯ್, ಹಲೋ...' ಮೂಲಕ ಸಂಪರ್ಕ
  • ಮೊದಲು ಸ್ನೇಹ, ಆನಂತರ ಪ್ರೀತಿ ಸಂಬಂಧ
  • ಕಿರಾತಕಿಯ ಹನಿಟ್ರ್ಯಾಪ್​ ಜಾಲಕ್ಕೆ ವಕೀಲನೇ ಸಿಕ್ಕಿಕೊಂಡ ಕೇಸ್​ ಇದು
Dating Apps: ಡೇಟಿಂಗ್ ಆ್ಯಪ್‌ಗಳಲ್ಲಿ 'ಹಾಯ್, ಹಲೋ...' ಎಂದು ಚೆಂದದ ಮಾತಿನಿಂದ ಸ್ನೇಹ ಬೆಳೆಸುವ ಈ ಸುಂದರಿ, ನಂತರ ಅದನ್ನೇ ಪ್ರೀತಿಯೆಂದು ಹೇಳಿಕೊಂಡು ಯುವಕರಿಂದ ಕೋಟಿಗಟ್ಟಲೇ ಹಣವನ್ನು ಲೂಟಿ ಹೊಡೆಯುವ ಪ್ರಕರಣವೊಂದು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಬೆಳಕಿಗೆ ಬಂದಿದೆ.
ಯುವಕರನ್ನು ಪ್ರೀತಿಯ ಹೆಸರಿನಲ್ಲಿ ತನ್ನ ಬಲೆಗೆ ಬೀಳಿಸಿಕೊಂಡು ಕೋಟಿ ಕೋಟಿ ರೂ.ಗಳನ್ನು ದೋಚುತ್ತಿದ್ದ ಕಿರಾತಕಿಯ ಕರಾಳ ಮುಖ ಕಡೆಗೂ ಬಟಾಬಯಲಾಗಿದೆ. ಟಿಂಡರ್ ಎಂಬ ಡೇಟಿಂಗ್ ಆ್ಯಪ್​ ಹಾಗೂ ಸೋಶಿಯಲ್ ಮೀಡಿಯಾಗಳ ಮೂಲಕ ಯುವಕರನ್ನು ಸೆಳೆದು, ಅವರೊಂದಿಗೆ ಖಾಸಗಿ ಕ್ಷಣಗಳ ಫೋಟೋ, ವಿಡಿಯೋ ತೆಗೆಸಿಕೊಂಡು ಬ್ಲ್ಯಾಕ್‌ಮೇಲ್ ಮಾಡುವುದೇ ಈ ಖತರ್ನಾಕ್ ಮಹಿಳೆಯೇ ಹನಿಟ್ರ್ಯಾಪ್ ಜಾಲ. ಈಕೆಯಿಂದ ಮೋಸ ಹೋದವರು ಎಷ್ಟು ಜನ ಎಂಬುದು ಇನ್ನೂ ಸ್ಪಷ್ಟವಾಗಿ ಗೊತ್ತಿಲ್ಲದಿದ್ದರೂ ವಕೀಲರೊಬ್ಬರು ದೂರು ನೀಡಿದ ಬಳಿಕವೇ ಈ ಕರಾಳ ದಂಧೆ ಭಾರಿ ಸಂಚಲನ ಹುಟ್ಟುಹಾಕಿದೆ.
ಅಲಹಾಬಾದ್ ಹೈಕೋರ್ಟ್‌ನ ವಕೀಲರೊಬ್ಬರು ಈಕೆಯ ಮಾಯಾಬಲೆಗೆ ಬಿದ್ದು ಹಣ ಕಳೆದುಕೊಂಡ ನಂತರ ಪೊಲೀಸ್​ ಠಾಣೆಯಲ್ಲಿ ದೂರು ಕೊಟ್ಟಿದ್ದಾರೆ. ಮೊದಲು ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯ ಮಾಡಿಕೊಳ್ಳುವ ಈ ಸುಂದರಿ, ಚೆಂದದ ಯುವಕರನ್ನೇ ಟಾರ್ಗೆಟ್​ ಮಾಡಿಕೊಂಡು ಬ್ಲ್ಯಾಕ್​ಮೇಲ್​ ಹೆಸರಿನಲ್ಲಿ ಕೋಟಿಗಟ್ಟಲೇ ಹಣ ದೋಚುತ್ತಾಳೆ ಎಂದು ವಿವರಿಸಿದ್ದಾರೆ. ಭೇಟಿಯಲ್ಲಿ, ಖಾಸಗಿ ಫೋಟೋ ಹಾಗೂ ವಿಡಿಯೋಗಳನ್ನು ಸೆರೆಹಿಡಿದು, ಅದನ್ನೇ ಮುಂದಿಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಾಳೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ದೂರಿನಲ್ಲಿ, ಪಲ್ಲವಿ ಸಿಂಗ್ ರಾಜ್‌ಪೂತ್ ಎಂಬ ಮಹಿಳೆ ಟಿಂಡರ್​ ಸೇರಿದಂತೆ ಸಾಮಾಜಿಕ ಜಾಲತಾಣಗಳ ಮೂಲಕ ಪುರುಷರನ್ನು ಪರಿಚಯ ಮಾಡಿಕೊಂಡು, ಬಳಿಕ ಅವರೊಟ್ಟಿಗಿನ ಖಾಸಗಿ ಫೋಟೋ ಮತ್ತು ವಿಡಿಯೋಗಳನ್ನು ಬಳಸಿಕೊಂಡು ಬ್ಲ್ಯಾಕ್​ಮೇಲ್​ ಮಾಡಿ, ದುಬಾರಿ ಹಣಕ್ಕೆ ಬೇಡಿಕೆ ಇಡುತ್ತಿದ್ದಳು ಎಂ ಗಂಭೀರವಾಗಿ ಆರೋಪಿಸಲಾಗಿದೆ.

6 ಕೋಟಿ ರೂ.ಗೂ ಹೆಚ್ಚು ಹಣ ವಸೂಲಿ

ದೂರುದಾರ ವಕೀಲ, ಆಕೆ ಬರೋಬ್ಬರಿ 6 ಕೋಟಿ ರೂ.ಗೂ ಹೆಚ್ಚು ಹಣವನ್ನು ವಿವಿಧ ವ್ಯಕ್ತಿಗಳಿಂದ ವಸೂಲಿ ಮಾಡಿದ್ದಾಳೆ ಎಂದು ಆರೋಪಿಸಿದ್ದಾರೆ. ಹಣ ನೀಡಲು ನಿರಾಕರಿಸಿದರೆ, ಅತ್ಯಾಚಾರ, ಕೊಲೆ ಸೇರಿದಂತೆ ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಸಿಲುಕಿಸುವುದಾಗಿ ಬೆದರಿಕೆ ಹಾಕಲಾಗುತ್ತಿತ್ತು. ಇದಲ್ಲದೆ, ಪಲ್ಲವಿ ನೀಡಿದ ಸುಳ್ಳು ದೂರುಗಳ ಹಿನ್ನೆಲೆಯಲ್ಲಿ ಐವರು ಜೈಲು ಪಾಲಾಗಿದ್ದಾರೆ. ಕೇಸ್​ನ ಭಯ, ಕಾನೂನು ಹೋರಾಟ ಹಾಗೂ ಎಲ್ಲರೆದುರು ಅವಮಾನ ಆಗುತ್ತದೆ ಎಂಬ ಆತಂಕದಿಂದ ಹಣ ಕೊಟ್ಟಿರುವವರೇ ಹೆಚ್ಚು ಎಂದು ಎಂಬ ಆರೋಪವೂ ಕೇಳಿಬಂದಿದೆ.

ಫೇಕ್​ ಅಕೌಂಟ್​ಗಳಿಂದಲೇ ಯುವಕರಿಗೆ ಬಲೆ

ಮತ್ತೊಂದು ದೂರಿನಲ್ಲಿ, ಹೊಸ ವ್ಯಕ್ತಿಗಳೊಂದಿಗೆ ಸಂಪರ್ಕ ಬೆಳೆಸಲು ಈಕೆ ಬೇರೆ ಬೇರೆ ಹೆಸರಿನಲ್ಲಿ ಮತ್ತು ಫೇಕ್​ ಅಕೌಂಟ್​ಗಳನ್ನು ಬಳಸುತ್ತಿದ್ದರು ಎನ್ನಲಾಗಿದೆ. ಈ ಪೈಕಿ ದೂರುದಾರರು, ‘ಸ್ವೀಟಿ ತಿವಾರಿ’ ಎಂಬ ಹೆಸರನ್ನು ಪ್ರತ್ಯೇಕವಾಗಿ ಉಲ್ಲೇಖಿಸಿದ್ದಾರೆ. ಈ ಪ್ರಕರಣದಲ್ಲಿ ಮಹಿಳೆಗೆ ಮತ್ತಿಬ್ಬರು ಮಹಿಳೆಯರು ಹಾಗೂ ಇಬ್ಬರು ಪುರುಷರು ಸಹಕರಿಸುತ್ತಿದ್ದರು ಎಂದು ಹೇಳಲಾಗಿದೆ, ಪ್ರಕರಣವನ್ನು ಕೈಗೆತ್ತಿಕೊಂಡಿರುವ ಪೊಲೀಸರು, ಯುವತಿಯನ್ನು ವಿಚಾರಣೆಗೆ ಒಳಪಡಿಸಿ, ತನಿಖೆಯನ್ನು ಚುರುಕುಗೊಳಿಸಿದ್ದಾರೆ,(ಏಜೆನ್ಸೀಸ್).