Woman falls ill after eating food from Kerala cafe 
ದೇಶ

2 ಪ್ಲೇಟ್ ಕಲುಷಿತ ಆಹಾರ ಕೊಟ್ಟ ಬಿರಿಯಾನಿ ಕೆಫೆ; 96,500 ರೂ.ದಂಡ ಪಾವತಿಸಲು ಗ್ರಾಹಕರ ಕೋರ್ಟ್​​ ಆದೇಶ..Kerala

ಪ್ರಮುಖ ಮುಖ್ಯಾಂಶಗಳು

  • ಕೇರಳದಲ್ಲಿ ಬಿರಿಯಾನಿ ತಿಂದು ಅಸ್ವಸ್ಥಗೊಂಡಿದ್ದ ಮಹಿಳೆಯ ಕಾನೂನು ಹೋರಾಟಕ್ಕೆ ಜಯ.
  • 96 ಸಾವಿರದ 500 ರೂಪಾಯಿಯನ್ನು ಪಾವತಿ ಮಾಡುವಂತೆ ಆದೇಶ ಹೊರಡಿಸಿ ಕೋರ್ಟ್.
  • ಕೇರಳಂನ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದಿಂದ ಕೆಫೆಯ ಮೇಲೆ ದೂರು ದಾಖಲು.
ತಿರುವನಂತಪುರಂ: ಕೇರಳದ ಕೆಫೆಯೊಂದರ  ಬಿರಿಯಾನಿ ತಿಂದು ಅಸ್ವಸ್ಥಗೊಂಡಿದ್ದ ಮಹಿಳೆಗೆ ಪರಿಹಾರ ರೂಪದಲ್ಲಿ 96,500 ರೂ. ಹಣ ನೀಡುವಂತೆ ಕೇರಳಂನ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ 

 ಮಾಲೀಕ ಮತ್ತು ವ್ಯವಸ್ಥಾಪಕನಿಗೆ

ನಿರ್ದೇಶಿಸಿದೆ. 

ಕೇರಳದ ಪತ್ತನಂತಿಟ್ಟ ಜಿಲ್ಲೆಯ ರನ್ನಿ ಪಟ್ಟಣದಲ್ಲಿರುವ  ಕಿಂಗ್ಸ್ ಬಿರಿಯಾನಿ ಕೆಫೆಯ ವ್ಯವಸ್ಥಾಪಕ ಮತ್ತು ಮಾಲೀಕ ಜಂಟಿಯಾಗಿ ಹಣ ಪಾವತಿ ಮಾಡಬೇಕು. ಆಸ್ಪತ್ರೆ ಖರ್ಚು, 36 ಸಾವಿರದ 500 ರೂ, ಪರಿಹಾರದ ಹಣ 50 ಸಾವಿರ ಹಾಗೂ ಮೊಕ್ಕದ್ದಮ್ಮೆ ವೆಚ್ಚ 10 ಸಾವಿರ ಒಟ್ಟಾರೆಯಾಗಿ 96 ಸಾವಿರದ 500 ರೂಪಾಯಿ ಹಣವನ್ನು, ಮೂವತ್ತು ದಿನದೊಳಗೆ ಸಂತ್ರಸ್ತ ಮಹಿಳೆಗೆ ಪಾವತಿ ಮಾಡುವಂತೆ ನಿರ್ದೇಶಿಸಿದೆ.

ಏನಾಗಿತ್ತು?

ರನ್ನಿಯ ಚೇತೋಂಕರದಲ್ಲಿರುವ ಕೆಫೆಗೆ ಸಂತ್ರಸ್ತರು 2025ರಂದು ಅಕ್ಟೋಬರ್​ 21ಕ್ಕೆ ಭೇಟಿ ಕೊಟ್ಟಿದ್ದರು. ಸಹೋದರಿ ಜೊತೆಗೆ  ಹೋಗಿದ್ದ ವೇಳೇ ಅರೇಬಿಯನ್​ ಖಾದ್ಯ ಅಲ್ಫಹಮ್​ ಕೊಂಡುಕೊಂಡರು. ರುಚಿಯಲ್ಲಿ ವ್ಯತ್ಯಾಸವಾದ ಬಗ್ಗೆ ಸಿಬ್ಬಂದಿ ಗಮನಕ್ಕೆ ತಂದಿದ್ದರು. ಆದರೆ, ಆಹಾರದಲ್ಲಿ ಸಮಸ್ಯೆ ಇಲ್ಲ ಎಂದು ಸಿಬ್ಬಂದಿ ಸುಮ್ಮನಾಗಿಸದರು.
ಆದರೆ, ಹೆಚ್ಚಾಗಿ ತಿನ್ನದ ಅವರು, ಸ್ವಲ್ಪ ಆಹಾರ ಮಾತ್ರ ಸೇವನೆ ಮಾಡಿ ಮತ್ತೊಂದು ಪ್ಲೇಟ್ ಪ್ಯಾಕ್​ ಮಾಡಿಸಿಕೊಂಡು, ಡೆಬಿಟ್ ಕಾರ್ಡ್​ ಮೂಲಕ 740 ರೂಪಾಯಿ ಪಾವತಿ ಮಾಡದರು. ಆದರೆ ರೀನಾ ಮನೆಗೆ ತಲುಪವಷ್ಟರಲ್ಲಿ  ಹೊಟ್ಟೆ ನೋವು, ತಲೆ ಸುತ್ತು ಹಾಗೂ ವಾಂತಿ ಕಾಣಿಸಿಕೊಂಡಿತ್ತು ಎನ್ನಲಾಗಿದೆ.
ದಿಢೀರನೆ ಅಸ್ವಸ್ಥಗೊಂಡ ಆಕೆಯನ್ನು  ಮೊದಲು  ವೆಚೂಚಿರಾದ  ಆಸ್ಪತ್ರೆಗೆ ಸೇರಿಸಲಾಗಿತ್ತು.  ಅಲ್ಲಿ ಚಿಕಿತ್ಸೆ ಕೊಟ್ಟರು ಯಾವುದೇ ಫಲಕಾರಿಯಾಗಿಲ್ಲ. ಹೀಗಾಗಿ  ಕಾಂಜಿರಪಳ್ಳಿಯ ಮತ್ತೊಂದು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಇಲ್ಲಿ ಒಂದು ವಾರ ರೀನಾಗೆ  ಚಿಕಿತ್ಸೆ ನೀಡಲಾಗಿದೆ ಎನ್ನಲಾಗಿದೆ.

ಸಮಸ್ಯೆಗೆ ಕಾರಣ ಏನು

ಸರಿಯಾಗಿ ಬೇಯಿಸದ ಅಥವಾ ಹಳೆಯ ಆಹಾರವನ್ನು ಸೇವಿಸಿದ ನಂತರ ಅವರಿಗೆ ಸಾಲ್ಮೊನೆಲ್ಲಾ ಸೋಂಕು ತಗುಲಿದೆ  ಎಂದು ವೈದ್ಯರು  ಮಾಹಿತಿ ಕೊಟ್ಟಿದ್ದಾರೆ ಎನ್ನುವ ಬಗ್ಗೆ ಕೆಫೆಗೂ ಮಾಹಿತಿ ಕೊಡಲಾಗಿದೆ ಎಂದು ಹೇಳಿಕೊಂಡಿದ್ದಾರೆ.
ಕೆಫೆ ನಿರ್ವಾಹಕ ಥಾಮಸ್ ಅವರ ಮಗ  ಫೋನ್ ಮೂಲಕ ಆಕೆಯ ಸ್ಥಿತಿಯ ಬಗ್ಗೆ ತಿಳಿಸಿದನು. ಅವರು ಅಸಭ್ಯವಾಗಿ ಪ್ರತಿಕ್ರಿಯಿಸಿದರು ಮತ್ತು 6,000 ರೂ.ಗಳನ್ನು ನೀಡಲು ಮುಂದಾದರು, ಆದರೆ ಅದನ್ನು ಸ್ವೀಕರಿಸಲಿಲ್ಲ ಎಂದು ರೀನಾ ಸಹೋದರ ಮಾಹಿತಿ ಹಂಚಿಕೊಂಡಿದ್ದಾರೆ.  ಈ ಸಂಬಂಧ  ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಮೊರೆ ಹೋದ ಹಿನ್ನೆಲೆ ಪರಿಹಾರ ಸಿಕ್ಕಿದೆ.

ಗೈರಾಗಿದ್ದ ವ್ಯವಸ್ಥಾಪಕ

ರೀನಾ ಅವರು ಚಿಕಿತ್ಸೆ ಪಡೆದಿದ್ದಕ್ಕೆ ಸಂಬಂಧಿಸಿದಂತೆ ಸಲ್ಲಿಸಿದ್ದ ದಾಖಲೆ ಪರಿಶೀಲಿಸಿದ ಆಯೋಗ, ಮಹಿಳೆಯ ಆರೋಪದಲ್ಲಿ ಸತ್ಯಾಂಶ ಇದೆ ಎಂದು ಪರಿಗಣನೆಗೆ ತೆಗೆದುಕೊಂಡಿದ, (ಏಜೆನ್ಸೀಸ್).