Woman carries mother in law on back 
ದೇಶ

90 ವರ್ಷದ ಅತ್ತೆಯನ್ನು ಹೊತ್ತು 9 ಕಿ.ಮೀ ನಡೆದು ಬ್ಯಾಂಕಿಗೆ ಬಂದ ಬುಡಕಟ್ಟು ಮಹಿಳೆ; ಪಿಂಚಣಿಗಾಗಿ ಪರದಾಟ..chhattisgarh

ಸುರ್ಗಜಾ: ಕಳೆದ ಕೆಲವು ದಿನದ ಹಿಂದೆ ಬುಡಕಟ್ಟು ಸಮುದಾಯದ ಒಡಿಶಾ ವೃದ್ಧನೊಬ್ಬ ಠೇವಣಿ ಹಣಕ್ಕಾಗಿ ತನ್ನ ಅಕ್ಕನ ಅಸ್ಥಿ ಪಂಜರವನ್ನು ಬ್ಯಾಂಕ್​ಗೆ ಹೊತ್ತು ತಂದಿದ್ದ ಘಟನೆ ಬೆನ್ನಲ್ಲೇ ಛತ್ತೀಸ್​ಗಢದಲ್ಲಿ ಅಂತದ್ದೇ ಒಂದು ಘಟನೆ ಬೆಳಕಿಗೆ ಬಂದಿದೆ. ಮಹಿಳೆಯೊಬ್ಬರು ತನ್ನ ಅತ್ತೆಯನ್ನು ಸುಡು ಬಿಸಿಲಿನಲ್ಲಿ ಹೊತ್ತುಕೊಂಡು ಒಂಬತ್ತು ಕಿ ಮೀ ನಡೆದೇ ಬ್ಯಾಂಕ್​ ಬಳಿ ಕರೆದೊಯ್ದ ಘಟನೆ  ಬೆಳಕಿಗೆ ಬಂದಿದೆ. 
ಡಿಜಿಟಲ್​ ಯುಗದಲ್ಲಿ ಎಲ್ಲವೂ ಆನ್​ಲೈನ್​ನಲ್ಲೇ  ಪೂರ್ಣಗೊಳ್ಳುತ್ತದೆ ಎಂದು ಹೇಳಲಾಗುತ್ತದೆ ಅಷ್ಟೇ. ಆದರೆ, ಇಷ್ಟೆಲ್ಲ ಅಭಿವೃದ್ಧಿಯನ್ನು ಗ್ರಾಮೀಣ ಭಾಗದ ಕುಗ್ರಾಮಗಳು ಇಂದಿಗೂ ಕಂಡುಕೊಂಡಿಲ್ಲ ಎನ್ನುವುದಕ್ಕೆ ಇತ್ತೀಚೆಗೆ ನಡೆದ ಈ ಎರಡು ಘಟನೆಗಳೇ ಸಾಕ್ಷಿ. 

ಸಾರಿಗೆ ಸಂಪರ್ಕವೇ ಇಲ್ಲ

ಸುಖನ್ಮಿಯಾ ಬಾಯಿ ಎಂಬ ಹೆಸರಿನ ಮಹಿಳೆ ಮತ್ತು ಆಕೆಯ ಕುಟುಂಬಸ್ಥರು ಕುನ್ವಾ ಪ್ರದೇಶದ ಜಂಗಲ್​ ಪಾರಾದಲ್ಲಿ ವಾಸ ಮಾಡುತ್ತಿದ್ದು. ಮನೆಯಿಂದ 1.5 ಕಿಮೀದೂರದಲ್ಲಿ ಹೊಳೆ ಹರಿಯುವ ಕಾರಣ ಗ್ರಾಮಕ್ಕೆ ವಾಹನವಿಲ್ಲ. ಅಲ್ಲಿ 3.5 ಕಿಲೋ ಮೀಟರ್​  ಕಾಲ್ನಡಿಗೆಯಲ್ಲಿ ಪ್ರಯಾಣಿಸಬೇಕು ಒಟ್ಟಾರೆಯಾಗಿ 9 ಕಿಮೀ ಕ್ರಮಿಸಿದರೆ ಬ್ಯಾಂಕ್​ ಸಿಗುತ್ತದೆ. ಇಲ್ಲಿಗೆ ತನ್ನ ಅತ್ತೆ ಸೋನ್ವರಿಯ ಪಿಂಚಣಿ ಪಡೆದುಕೊಳ್ಳಲು ಬ್ಯಾಂಕ್​ಗೆ ಕಾಲ್ನಡಿಗೆಯಲ್ಲೇ ಓಡಾಡಿರುವ ವಿಡಿಯೋವನ್ನು INC ಕಾಂಗ್ರೆಸ್​ ಎಕ್ಸ್​ನಲ್ಲಿ ಹಂಚಿಕೊಂಡಿದೆ. 
ವಿಡಿಯೋದಲ್ಲಿ ಏನಿದೆ?
ಛತ್ತೀಸ್​ಗಢದ ಸುರ್ಗುಜಾ ಜಿಲ್ಲೆಯ ಮೈನ್​ಪತ್​ ಪ್ರದೇಶದಲ್ಲಿ ನಡೆದಿರುವ ಘಟನೆ ಎಂದು ಚಿತ್ರೀಕರಿಸಲಾಗಿದ್ದು, ಸದ್ಯ ಸೋಶಿಯಲ್​ ಮೀಡಿಯಾದಲ್ಲಿ ಚರ್ಚೆಯನ್ನು ಹುಟ್ಟುಹಾಕುವಂತೆ ಮಾಡಿದೆ. ಬ್ಯಾಂಕಿನಿಂದ ಸಿಗುವ ಸರ್ಕಾರದ ಪಿಂಚಣಿಯನ್ನು ಪಡೆದುಕೊಳ್ಳುಲು,  ಖುದ್ದು ಪಿಂಚಣಿದಾರರೇ ಬ್ಯಾಂಕಿಗೆ ಭೇಟಿ ಕೊಟ್ಟು ಹೆಬ್ಬಟ್ಟು ಹೊತ್ತಿ ಹಣ ಪಡೆದುಕೊಳ್ಳುವ ನಿಯಮವಿರುವ ಕಾರಣ ಇವರಿಗೆ ಬೇರೆ ದಾರಿ ಕಾಣದೆ, ವಯೋಸಹಜ ಕಾಯಿಲೆಯಿಂದ ಬಳಲುತ್ತಿರುವ  ತನ್ನ ಅತ್ತೆಯನ್ನು ಹೊತ್ತು 9 ಕಿಲೋ ಮೀಟರ್​ ನಡೆದು ಬಂದಿದ್ದಾರೆ. 

1500 ರೂ.ಹಣಕ್ಕಾಗಿ ಓಡಾಟ

ಮಾರ್ಗಮಧ್ಯೆ ಎದುರಾದ ಅರಣ್ಯ ಪ್ರದೇಶ, ಮಳೆ, ಬೆಳಕು, ಚಳಿ ಯಾವುದನ್ನು ಲೆಕ್ಕಿಸದ ಅವರು ಕಾಲ್ನಡಿಗೆಯಲ್ಲೇ ಪ್ರಯಾಣಿಸಿ  ಮೂರು ತಿಂಗಳ 1,500 ರೂ ಪಿಂಚಣಿ ಹಣವನ್ನು ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಫಲಾನುಭವಿಯ ಕೆವೈಸಿ ಆಗದ ಕಾರಣ ಕೆಲವು ತಿಂಗಳಿನಿಂದ ಪಾವತಿ ಮಾಡುವುದು ಬಾಕಿ ಉಳಿದಿತ್ತು. ಸುಖ್ಮಾನಿಯಾ ಅವರು ತಮ್ಮ ಅತ್ತೆಯನ್ನು ಹೊತ್ತು ನರ್ಮದಾ ಪುರ ಶಾಖೆಯ ಸೆಂಟ್ರಲ್​ ಬ್ಯಾಂಕ್​ ಆಫ್​ ಇಂಡಿಯಾಗೆ ತೆರಳಿ KYC ಮಾಡಿಸಬೇಕಿತ್ತು. ಮೂರು ತಿಂಗಳು ಅದಕ್ಕಾಗಿ ಹೋರಾಡಿದ ನಂತರ ಕೊನೆಗೆ ಹಣವನ್ನು ಪಡೆದುಕೊಂಡಿದ್ದಾರೆ,(ಏಜೆನ್ಸೀಸ್).