ಸಾಂದರ್ಭಿಕ ಚಿತ್ರ 
ದೇಶ

ಪೂರ್ವಜರಿಗೆ ಒಳ್ಳೆಯದಾಗುತ್ತೆ ಎಂದು ಕನಸಿನಲ್ಲಿ ಬಂದ ಆಜ್ಞೆ ಅನುಸರಿಸಿ ಇಬ್ಬರು ಮಕ್ಕಳನ್ನು ಕೊಂದ ಮಹಿಳೆ; ಬಂಧನ | Arrested

ಅಹ್ಮದಾಬಾದ್: ಗುಜರಾತ್​ನ ನವಸಾರಿ ಜಿಲ್ಲೆಯ ಬಿಲಿಮೋರಾದಲ್ಲಿ ಮಹಿಳೆಯೊಬ್ಬಳು ಪೂರ್ವಜನರಿಗೆ ಒಳ್ಳೆಯದಾಗುತ್ತೆ ಎಂದು ಕನಸಿನಲ್ಲಿ ಬಂದ ಹೇಳಿದ ಆಜ್ಞೆ ಅನುಸಾರ ತನ್ನ ಇಬ್ಬರು ಮಕ್ಕಳನ್ನು ಕೊಂದ ಆರೋಪದ ಮೇಲೆ ಬಂಧಿಸಿದ್ದಾರೆ ಎಂದು ಶನಿವಾರ(ನ. 15) ವರದಿಯಾಗಿದೆ.
ಗುರುವಾರ(ನ. 13) ರಾತ್ರಿ 1:30 ಕ್ಕೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಮೃತ ಮಕ್ಕಳನ್ನು ಹರ್ಷ(7), ವೇದ್(4) ಎಂದು ಗುರುತಿಸಲಾಗಿದೆ. ಸುನೀತಾ, ಬಂಧಿತಳಾಗಿರುವ ಆರೋಪಿ ತಾಯಿ. ಪತಿ ಕಳೆದ ನಾಲ್ಕು ದಿನಗಳಿಂದ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ.
ಸ್ಥಳೀಯ ಪೊಲೀಸ್ ಅಧಿಕಾರಿಗಳ ಪ್ರಕಾರ, ದೇವ್ಸರ್ ಗ್ರಾಮದ ಮಹಾರಾಜ ಅಪಾರ್ಟ್ಮೆಂಟ್​ನಲ್ಲಿ ಈ ಘಟನೆ ನಡೆದಿದೆ. ಉತ್ತರ ಪ್ರದೇಶದ ಮೂಲದ ಆರೋಪಿ ಮಹಿಳೆ ಸುನೀತಾ ತನ್ನ ಕುಟುಂಬದೊಂದಿಗೆ ವಾಸಿಸುತ್ತಿದ್ದಳು. ಗುರುವಾರ ರಾತ್ರಿ ಮಲಗಿ ಮಧ್ಯರಾತ್ರಿ ಎಚ್ಚರವಾದಾಗ ತನ್ನ ಪಕ್ಕದಲ್ಲಿ ಮಲಗಿದ್ದ ತನ್ನ ಮಕ್ಕಳನ್ನು ಕತ್ತು ಹಿಸುಕಿ ಕೊಂದಿದ್ದಾಳೆ. ನಂತರ ಅವರ ಮಾವ ಇಂದರ್ಪಾಲ್ ಶರ್ಮಾ ಮೇಲೆ ಹಲ್ಲೆ ನಡೆಸಿದ್ದಾಳೆ ಎಂದು ಹೇಳಿದ್ದಾರೆ.
ಬಳಿಕ ಸಹಾಯಕ್ಕಾಗಿ ಕೂಗುತ್ತಾ ಇಂದರ್ಪಾಲ್ ಮನೆಯಿಂದ ಹೊರಬಂದಿದ್ದು, ಇದರಿಂದ ನೆರೆಹೊರೆಯವರು ಮನೆ ಮುಂದೆ ಜಮಾಯಿಸಿದ್ದಾರೆ. ಬಳಿಕ ಮನೆಯೊಳಗಿಂದ ಆ ಮಹಿಳೆ ಲಾಕ್ ಮಾಡಿಕೊಂಡಿದ್ದಳು. ಸ್ಥಳೀಯರು ನಮಗೆ ಕರೆ ಮಾಡಿ ಮಾಹಿತಿ ನೀಡಿದ ತಕ್ಷಣ ಸ್ಥಳಕ್ಕೆ ತೆರಳಿ ಮನೆ ಬಾಗಿ ಹೊಡೆದು ಒಳ ಪ್ರವೇಶಿಸಿದಾಗ, ಮಹಿಳೆ ಮಕ್ಕಳ ಶವದ ಪಕ್ಕದ ಕುಳಿತಿದ್ದಳು. ಮಹಿಳೆಯನ್ನು ಬಂಧಿಸಿದ್ದು, ಈ ಬಗ್ಗೆ ವಿಚಾರಣೆ ನಡೆಯುತ್ತಿದೆ. ಮಹಿಳೆ ಕನಸಿನಲ್ಲಿ ಮಕ್ಕಳನ್ನು ಕೊಲ್ಲು ಎಂದು ಎಂಬ ಆಜ್ಞೆ ಬಂದಿದ್ದರಿಂದ ಕೊಂದಿದ್ದೇನೆ ಎಂದು ಹೇಳಿದ್ದಾಳೆ ಎಂದು ತಿಳಿಸಿದ್ದಾರೆ (ಏಜೆನ್ಸೀಸ್).