ಪತ್ನಿಯ ಖಾಸಗಿ ದೃಶ್ಯಗಳನ್ನು ಸೆರೆಹಿಡಿದು ಹಣಕ್ಕಾಗಿ ಅಶ್ಲೀಲ ವೆಬ್‌ಸೈಟ್‌ಗಳಿಗೆ ಮಾರಾಟ ಮಾಡುತ್ತಿದ್ದ ಗಂಡ! Woman accuses Husband  
ದೇಶ

ಪತ್ನಿಯ ಖಾಸಗಿ ದೃಶ್ಯಗಳನ್ನು ಸೆರೆಹಿಡಿದು ಹಣಕ್ಕಾಗಿ ಅಶ್ಲೀಲ ವೆಬ್‌ಸೈಟ್‌ಗಳಿಗೆ ಮಾರಾಟ ಮಾಡುತ್ತಿದ್ದ ಗಂಡ! Woman accuses Husband

ಪ್ರಮುಖ ಮುಖ್ಯಾಂಶಗಳು

  • ಪತ್ನಿಯ ಖಾಸಗಿ ದೃಶ್ಯಗಳನ್ನು ಸೆರೆಹಿಡಿದು ಅಶ್ಲೀಲ ವೆಬ್‌ಸೈಟ್‌ಗಳಿಗೆ ಮಾರಾಟ ಮಾಡಿದ ಪತಿ
  • ಕೌನ್ಸೆಲಿಂಗ್ ಕೊಡಿಸಲು ಮುಂದಾದ ಪತ್ನಿ ಮೇಲೆಯೇ ಅತ್ಯಂತ ಕ್ರೂರವಾಗಿ ಹಲ್ಲೆ ನಡೆಸಿದ ಆರೋಪಿ
  • ಪಾರ್ಟ್ನರ್ ಸ್ವ್ಯಾಪಿಂಗ್ ಜಾಲದೊಂದಿಗೆ ನಂಟು ಹೊಂದಿದ್ದು ನಗ್ನ ಚಿತ್ರಗಳನ್ನು ಹಂಚಿಕೊಂಡ ವಿಕೃತಿ
  • ಮಕ್ಕಳ ಮುಂದೆಯೇ ಲೈಂಗಿಕ ವಿಕೃತ ವರ್ತನೆ ಪ್ರದರ್ಶಿಸಿ ಹಣ ಸಂಪಾದಿಸುತ್ತಿದ್ದ ಪಾಪಿ ಪತಿ
ತಿರುವನಂತಪುರಂ : ಪತ್ನಿಯ ಖಾಸಗಿ ದೃಶ್ಯಗಳನ್ನು ಸೆರೆಹಿಡಿದು ಅದನ್ನು ಅಶ್ಲೀಲ ವೆಬ್‌ಸೈಟ್‌ಗಳಿಗೆ ಮಾರಾಟ ಮಾಡಿದಲ್ಲದೆ, ಕೌನ್ಸೆಲಿಂಗ್ ಕೊಡಿಸಲು ಮುಂದಾದ ಆಕೆಯ ಮೇಲೆಯೇ ತೀವ್ರವಾಗಿ ಹಲ್ಲೆ ನಡೆಸಿದ ಪತಿಯ ವಿರುದ್ಧ ಸಂತ್ರಸ್ತೆ ಪೊಲೀಸರಿಗೆ ದೂರು ( Woman accuses Husband ) ನೀಡಿದ್ದಾರೆ.
ಈ ಘಟನೆ ಕೇರಳದ ಕೊಲ್ಲಂನಲ್ಲಿ ನಡೆದಿದೆ. ವೆಬ್‌ಸೈಟ್‌ನಲ್ಲಿ ಅಶ್ಲೀಲ ದೃಶ್ಯಗಳನ್ನು ಗಮನಿಸಿದ ಸ್ನೇಹಿತರು ಆ ಮಹಿಳೆಗೆ ವಿಷಯ ಮುಟ್ಟಿಸಿದ್ದಾರೆ. ಇದರಿಂದ ಆಘಾತಗೊಂಡ ಸಂತ್ರಸ್ತೆ, ಪತಿಯನ್ನು ಸರಿದಾರಿಗೆ ತರಬೇಕು ಎಂಬ ಉದ್ದೇಶದಿಂದ ಆತನನ್ನು ತನ್ನ ಮನೆಗೆ ಕರೆಸಿಕೊಂಡು ಕೌನ್ಸೆಲಿಂಗ್ ಕೊಡಿಸಲು ಮುಂದಾಗಿದ್ದಳು. ಆದರೆ, ಕೌನ್ಸೆಲಿಂಗ್‌ಗೆಂದು ಕರೆದೊಯ್ದ ಮೂರನೇ ದಿನವೇ ಪಾಪಿ ಪತಿ ತನ್ನ ಪತ್ನಿಯ ಮೇಲೆ ಅತ್ಯಂತ ಕ್ರೂರವಾಗಿ ಹಲ್ಲೆ ನಡೆಸಿದ್ದಾನೆ.
ಈ ಹಿನ್ನೆಲೆಯಲ್ಲಿ ಧೈರ್ಯ ತೋರಿದ ಮಹಿಳೆ ಪೊಲೀಸರಿಗೆ ಅಧಿಕೃತವಾಗಿ ದೂರು ನೀಡಿದ್ದು, ಪತಿಯೊಂದಿಗೆ ನಡೆಸಿದ ಸಂಭಾಷಣೆಗಳು ಸೇರಿದಂತೆ ಹಲವು ನಿರ್ಣಾಯಕ ಸಾಕ್ಷ್ಯಗಳನ್ನು ಪೊಲೀಸರಿಗೆ ಸಲ್ಲಿಸಿದ್ದಾರೆ. ಸದ್ಯ ಹಲ್ಲೆಗೊಳಗಾಗಿ ಗಾಯಗೊಂಡಿರುವ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪಾರ್ಟ್ನರ್ ಸ್ವ್ಯಾಪಿಂಗ್ ಜಾಲದೊಂದಿಗೆ ನಂಟು

ಖಾಸಗಿ ವಿಡಿಯೋಗಳನ್ನು ಅಶ್ಲೀಲ ವೆಬ್‌ಸೈಟ್‌ಗಳಿಗೆ ಮಾರಾಟ ಮಾಡಿದ್ದಲ್ಲದೆ, ಪಾರ್ಟ್ನರ್ ಸ್ವ್ಯಾಪಿಂಗ್ (Partner Swapping) ಜಾಲದೊಂದಿಗೆ ಪತಿ ನಂಟನ್ನು ಹೊಂದಿರುವ ಗಂಭೀರ ವಿಚಾರವು ಕೂಡ ಬೆಳಕಿಗೆ ಬಂದಿದೆ. ಪತ್ನಿಯ ಬೆಡ್‌ರೂಮ್ ದೃಶ್ಯಗಳನ್ನು ರಹಸ್ಯವಾಗಿ ಚಿತ್ರೀಕರಿಸಿ ಪೋರ್ನ್ ಸೈಟ್‌ಗಳಿಗೆ ಮಾರಾಟ ಮಾಡಿದ್ದಲ್ಲದೆ, ಕೆಲವು ಪಾರ್ಟ್ನರ್ ಶೇರಿಂಗ್ ಗ್ರೂಪ್‌ಗಳಲ್ಲಿ ನಗ್ನ ಚಿತ್ರಗಳನ್ನು ಹಂಚಿಕೊಂಡಿದ್ದಾನೆಂದು ಸಂತ್ರಸ್ತೆ ಪೊಲೀಸರಿಗೆ ತಿಳಿಸಿದ್ದಾರೆ. ಕೊಟ್ಟಿಯಂ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಪತ್ನಿ ವಿದೇಶದಲ್ಲಿದ್ದಾಗ ಆಕೆಯನ್ನು ಫೋನ್​ ಮೂಲಕ ಸಂಪರ್ಕಿಸಿದ್ದ ಪತಿ, ಆಕೆಯನ್ನು ನಗ್ನವಾಗಿ ನೋಡಬೇಕೆಂದು ಹೇಳಿ ಖಾಸಗಿ ದೃಶ್ಯಗಳನ್ನು ಸೆರೆಹಿಡಿದು ನಂತರ ಅವುಗಳನ್ನು ಹಣಕ್ಕಾಗಿ ವೆಬ್‌ಸೈಟ್‌ಗಳಿಗೆ ಮಾರಿಕೊಂಡಿದ್ದನು. ವೆಬ್‌ಸೈಟ್‌ನಲ್ಲಿ ಈ ದೃಶ್ಯಗಳನ್ನು ಗಮನಿಸಿದ ಆಕೆಯ ಸ್ನೇಹಿತರು ಮಹಿಳೆಗೆ ಮಾಹಿತಿ ನೀಡಿದಾಗ ಈ ಆಘಾತಕಾರಿ ವಿಷಯ ಹೊರಬಂದಿದೆ. ಬಳಿಕ ವಿದೇಶದಿಂದ ಮರಳಿದ ಮಹಿಳೆ, ಪತಿಯನ್ನು ಸರಿದಾರಿಗೆ ತರಲು ಕೌನ್ಸೆಲಿಂಗ್‌ಗೆ ಕರೆದೊಯ್ದಿದ್ದಳು. ಆದರೆ ಕೌನ್ಸೆಲಿಂಗ್‌ಗೆ ತೆರಳಿದ ಮೂರನೇ ದಿನವೇ ಆಕೆಯ ಮೇಲೆ ಪತಿ ಕ್ರೂರವಾಗಿ ಹಲ್ಲೆ ನಡೆಸಿದ್ದು, ಈ ಬಗ್ಗೆ ಮಹಿಳೆ ತನ್ನ ಬಳಿಯಿದ್ದ ಚಾಟ್ಸ್ ಹಾಗೂ ಸಂಭಾಷಣೆಗಳ ಸಾಕ್ಷ್ಯಗಳ ಸಮೇತ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಕೃತ್ಯದಲ್ಲಿ ಪತಿಗೆ ಯಾವುದೇ ಪಶ್ಚಾತಾಪವಿರಲಿಲ್ಲ ಬದಲಿಗೆ ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಹಣ ಸಂಪಾದಿಸುತ್ತಿದ್ದ ಎಂದು ಮಹಿಳೆ ಆರೋಪಿಸಿದ್ದಾರೆ. ಅಷ್ಟೇ ಅಲ್ಲದೆ, ಆರೋಪಿಯು ಮಕ್ಕಳ ಮುಂದೆಯೇ ತನ್ನ ವಿಕೃತ ಲೈಂಗಿಕ ವರ್ತನೆಗಳನ್ನು ಪ್ರದರ್ಶಿಸುತ್ತಿದ್ದನು ಎಂದು ಸಂತ್ರಸ್ತೆ ವಿವರಿಸಿದ್ದಾರೆ. ಸದ್ಯ ಭೀಕರ ಹಲ್ಲೆ ಹಾಗೂ ದೌರ್ಜನ್ಯಕ್ಕೊಳಗಾಗಿ ಗಾಯಗೊಂಡಿರುವ ಸಂತ್ರಸ್ತ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, (ಏಜೆನ್ಸೀಸ್​).